ತುಮಕೂರು : ಕುಪ್ಪೂರು ಗದ್ದುಗೆ ಶ್ರೀಗಳು ಅಸ್ವಸ್ಥರಾಗಿದ್ದ ವೇಳೆ ನಾನು ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡುವುದೊರಳಗೆ ಮಾರ್ಗ ಮಧ್ಯೆಯೇ ನಿಧನರಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ಮಾಹಿತಿ ದೊರೆಯಿತು. ಹೆಚ್ಚಿನ ಚಿಕಿತ್ಸೆಗಾಗಿ ವ್ಯವಸ್ಥೆ ಮಾಡುವುದರೊಳಗೆ ಮೃತಪಟ್ಟಿದ್ದಾರೆ. ನಾನು ಮಠಕ್ಕೆ ಹೋಗುತ್ತಿದ್ದೇನೆ.
ನಾಳೆ (ಭಾನುವಾರ) ಅಂತ್ಯಕ್ರಿಯೆ ನೆರವೇರಲಿದೆ. ಇನ್ನೂ ಯಾವುದು ನಿರ್ಧಾರವಾಗಿಲ್ಲ. ಹೋಗಿ ನಿರ್ಧಾರ ಮಾಡುತ್ತೇವೆ ಎಂದರು. ಕೋವಿಡ್ ಏನಾದ್ರೂ ಇದ್ದರೆ ಕೋವಿಡ್ ನಿಯಮದಂತೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ಇದನ್ನೂ ಓದಿ: ಕುಪ್ಪೂರು ಮಠಕ್ಕೆ ಸ್ವಾಮೀಜಿ ಪಾರ್ಥಿವ ಶರೀರ: ಮುಗಿಲು ಮುಟ್ಟಿದ ಭಕ್ತರ ಆಕ್ರಂದನ