ETV Bharat / city

Video: ಗುಬ್ಬಿ ಶಾಸಕ ಶ್ರೀನಿವಾಸ್​-ತುಮಕೂರು ಸಂಸದ ಬಸವರಾಜು ಜಟಾಪಟಿ..ಸಾರ್ವಜನಿಕ ಕಾರ್ಯಕ್ರಮದಲ್ಲೇ ಜೋರು ಜಗಳ! - ತುಮಕುರು ಸಂಸದ ಬಸವರಾಜ್​ಗೆ ಬೈದ ಗುಬ್ಬಿ ಶಾಸಕ ಎಸ್​ಆರ್ ಶ್ರೀನಿವಾಸ್

ತುಮಕೂರು ಸಂಸದ ಜಿ.ಎಸ್​. ಬಸವರಾಜು ಮತ್ತು ಗುಬ್ಬಿ ಶಾಸಕ ಎಸ್​.ಆರ್​. ಶ್ರೀನಿವಾಸ್​​ ಏಕವಚನದಲ್ಲೇ ಪರಸ್ಪರ ಬೈದಾಡಿಕೊಂಡಿರುವ ಘಟನೆ ನಡೆದಿದೆ.

tumkuru
tumkuru
author img

By

Published : Aug 14, 2021, 1:47 PM IST

Updated : Aug 14, 2021, 3:51 PM IST

ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಸಿ‌. ನಂದಿಹಳ್ಳಿಯಲ್ಲಿ ಇಂದು ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಕಾರ್ಯಕ್ರಮ ನಡೆದಿತ್ತು. ತುಮಕೂರು ಸಂಸದ ಜಿ.ಎಸ್​. ಬಸವರಾಜು ಮತ್ತು ಗುಬ್ಬಿ ಶಾಸಕ ಎಸ್​.ಆರ್​. ಶ್ರೀನಿವಾಸ್​​ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಈ ಸಮಾರಂಭದಲ್ಲಿ ಇಬ್ಬರ ನಡುವೆ ಮಾತಿನ ಜಟಾಪಟಿ ನಡೆಯಿತು.

ಉದ್ಘಾಟನಾ ಸಭೆಯಲ್ಲೇ ಜಗಳ:

ಬೆಸ್ಕಾಂ ವಿದ್ಯುತ್ ಎಂಎಸ್ಎಸ್ ಸ್ಟೇಷನ್ ಉದ್ಘಾಟನಾ ಸಭೆಯಲ್ಲೇ ಇಬ್ಬರೂ ಜನಪ್ರತಿನಿಧಿಗಳು ಜಗಳಕ್ಕಿಳಿದರು. ಇಬ್ಬರೂ ಏಕವಚನದಲ್ಲೇ ಬೈದಾಡಿಕೊಂಡರು. ಚೇಳೂರು ಹೋಬಳಿಯಲ್ಲಿ ಚೆಕ್​ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದು ಸಂಸದ ಬಸವರಾಜು ಹೇಳಿದರು.

ಸಂಸದ ಬಸವರಾಜ್ ಮತ್ತು ಗುಬ್ಬಿ ಶಾಸಕ ಶ್ರೀನಿವಾಸ್ ನಡುವೆ ವಾಗ್ವಾದ

ಪರಸ್ಪರ ನಿಂದಿಸಿಕೊಂಡ ಜನಪ್ರತಿನಿಧಿಗಳು

ಆಗ ಗುಬ್ಬಿಯ ಜೆಡಿಎಸ್​ ಶಾಸಕ ಶ್ರೀನಿವಾಸ್​ ಕೋಪ ನೆತ್ತಿಗೇರಿತು. ರೈತರಿಗೆ ಸುಳ್ಳು ಹೇಳ್ತೀಯಾ ಎಂದು ಏಕವಚನದಲ್ಲೇ ದೂರಿದರು. ನಿಮಗೆ ವಯಸ್ಸಾಗಿದೆ, ಈಗಲಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಬಸವರಾಜು ವಿರುದ್ಧ ವಾಕ್​ ಪ್ರಹಾರ ನಡೆಸಿದರು.

ಏನ್​ ಮಾತಾಡ್ತೀಯಾ ನೀನು. ನಾನು ಜೀವನದಲ್ಲಿ ಸುಳ್ಳು ಹೇಳಿಲ್ಲ. ನೀನು ಸುಳ್ಳು ಹೇಳುತ್ತಿರೋದು ಎಂದು ಶಾಸಕ ಶ್ರೀನಿವಾಸ್​​ಗೆ ಸಂಸದ ಬಸವರಾಜು ತಿರುಗೇಟು ನೀಡಿದರು.

ಒಂದು ಹಂತದಲ್ಲಿ ಇಬ್ಬರೂ ಜನಪ್ರತಿನಿಧಿಗಳು ಕುರ್ಚಿಯಿಂದ ಎದ್ದು ನಿಂತು ಪರಸ್ಪರ ಕೈ-ಕೈ ತೋರಿಸುತ್ತಾ ಏಕವಚನದಲ್ಲೇ ನಿಂದಿಸಿಕೊಂಡರು. ಕೊನೆಗೆ ಅಲ್ಲಿದ್ದವರು ಇಬ್ಬರನ್ನೂ ಸಮಾಧಾನಪಡಿಸಿದರು.

Last Updated : Aug 14, 2021, 3:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.