ತುಮಕೂರು: ಜೆಡಿಎಸ್ ಕಾರ್ಯಕರ್ತರು ಕಷ್ಟ ಪಟ್ಟು ಮೇವು, ಬೂಸಾ ಕೊಟ್ಟು ಹಸು ಸಾಕಿದರೆ ಅದರ ಹಾಲು, ಮೊಸರು, ಬೆಣ್ಣೆ, ತುಪ್ಪ ಎಲ್ಲಾ ದೇವೇಗೌಡರ ಕುಟುಂಬ ತಿನ್ನುತ್ತಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಸುರೇಶ್ ಗೌಡ ಟೀಕಿಸಿದ್ದಾರೆ.
ತುಮಕೂರು ತಾಲೂಕು ಹೊನ್ನುಡುಕೆ ಗ್ರಾಮದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಬಸವರಾಜ್ ಪರ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರಿಗೆ ಸಗಣಿ ಎತ್ತಲು, ಕೊಟ್ಟಿಗೆ ಕಸ ಗುಡಿಸಲು ದೇವೇಗೌಡರ ಕುಟುಂಬ ಹೇಳುತ್ತಿದೆ. ಹಾಗಾಗಿ ರಾಜ್ಯದಲ್ಲಿ ಕುಟುಂಬ ರಾಜಕಾರಣದ ವಿರುದ್ಧ ಜನ ತಿರುಗಿ ಬಿದ್ದಿದ್ದಾರೆ ಎಂದು ತಿಳಿಸಿದರು.
ಸಿಎಂ ಕುಮಾರಸ್ವಾಮಿ ಸ್ತ್ರೀ ಶಕ್ತಿ ಸಾಲಮನ್ನಾ, ಗರ್ಭಿಣಿಯರಿಗೆ 6 ಸಾವಿರ ರೂ. ಕೊಡುತ್ತೇನೆ ಅಂದಿದ್ರು, ಇದ್ಯಾವುದು ಜಾರಿಯಾಗಿಲ್ಲ. ಹೀಗಾಗಿ ಎಲ್ಲಿದ್ದಿಯಪ್ಪಾ ನಿಖಿಲ್ ಅಲ್ಲಾ, ಎಲ್ಲಿದ್ದಿಯಪ್ಪಾ ಕುಮಾರಣ್ಣ ಅನ್ನಬೇಕಿದೆ ಎಂದು ಟೀಕಿಸಿದರು.
ಮಣ್ಣಿನ ಮಕ್ಕಳು ಎಂದು ಹೇಳಿಕೊಳ್ಳುತಿದ್ದ ಕುಮಾರಣ್ಣನಿಗೆ ಮಂಡ್ಯದ ಜನರೇ ಮರ್ಯಾದಿ ತೆಗೆಯಲಿದ್ದಾರೆ. ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜ್ ಮತ್ತಿತರ ಬಿಜೆಪಿ ಮುಖಂಡರು ಹಾಜರಿದ್ದರು.