ETV Bharat / city

ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸುವುದು ಕಷ್ಟ: ಬಸವರಾಜ ಹೊರಟ್ಟಿ

author img

By

Published : Feb 12, 2021, 3:32 PM IST

ನಮ್ಮದು ಜಾತ್ಯಾತೀತ ರಾಷ್ಟ್ರ ಅಂತಾರೆ. ಎಲ್ಲಾ ಪಕ್ಷಗಳು, ಎಲ್ಲಾ ರಾಜಕಾರಣಿಗಳು ಚುನಾವಣೆಗೆ ನಿಲ್ಲಬೇಕಾದ್ರೆ ಜಾತಿ ಕೇಳುತ್ತಾರೆ. ದುಡ್ಡು ಎಷ್ಟು ಖರ್ಚು ಮಾಡಿದೆ ಅಂತಾ ಕೇಳ್ತಾರೆ. ಇತ್ತೀಚೆಗೆ ಈ ಪದ್ಧತಿ ಬಂದಿದೆ. ಇದು ಒಳ್ಳೆಯದಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

speaker-basavaraja-horatti-statement-about-reservation
ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸುವುದು ಕಷ್ಟ: ಸಭಾಪತಿ ಬಸವರಾಜ ಹೊರಟ್ಟಿ

ತುಮಕೂರು: ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸುವುದು ಕಷ್ಟ. ಯಾರ್ಯಾರಿಗೆ ಏನೇನು ಸೌಲಭ್ಯಗಳು ಬೇಕು ಎಂಬುದನ್ನು ಆಲೋಚಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ನೂತನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಬಳಿಕ ಮಾತನಾಡಿದ ಅವರು, ತಮ್ಮ ತಮ್ಮ ಸಮಾಜದ ಬಗ್ಗೆ ಗೌರವ ಸ್ಥಾನದಲ್ಲಿರುವವರು ನಿರ್ಧಾರ ಮಾಡುತ್ತಾರೆ. ಅದು ಅವರ ಕರ್ತವ್ಯ.

ನಮ್ಮದು ಜಾತ್ಯಾತೀತ ರಾಷ್ಟ್ರ ಅಂತಾರೆ. ಎಲ್ಲಾ ಪಕ್ಷಗಳು, ಎಲ್ಲಾ ರಾಜಕಾರಣಿಗಳು ಚುನಾವಣೆಗೆ ನಿಲ್ಲಬೇಕಾದ್ರೆ ಜಾತಿ ಕೇಳುತ್ತಾರೆ. ದುಡ್ಡು ಎಷ್ಟು ಖರ್ಚು ಮಾಡಿದೆ ಅಂತಾ ಕೇಳ್ತಾರೆ. ಇತ್ತೀಚೆಗೆ ಈ ಪದ್ಧತಿ ಬಂದಿದೆ. ಇದು ಒಳ್ಳೆಯದಲ್ಲ. ನಿಸರ್ಗದ ನಿಯಮಗಳು ಹೇಗೆ ಬದಲಾಗುತ್ತವೆಯೋ ಹಾಗೆಯೇ ಇವು ಬದಲಾಗಿವೆ. ಈ ಬಗ್ಗೆ ಸರ್ಕಾರಕ್ಕೆ ಏನೂ ಸಲಹೆ ಕೊಡೋಕೆ ಆಗಲ್ಲ. ಸರ್ಕಾರಕ್ಕೆ ಸಲಹೆ ಕೊಡುವಂತಹ ಶಕ್ತಿನೂ ಇಲ್ಲ ಎಂದರು.

ನಾನು ವಿಧಾನ ಪರಿಷತ್‌ನ ಅಧ್ಯಕ್ಷನಾಗಿ ಸದನವನ್ನು ಉತ್ತಮವಾದ ರೀತಿಯಲ್ಲಿ ನಡೆಸೋಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. 133 ವರ್ಷದ ಇತಿಹಾಸವಿರುವಂತಹ ವಿಧಾನ ಪರಿಷತ್, ಇಂದು ತನ್ನ ಘನತೆ-ಗೌರವವನ್ನ ಸ್ವಲ್ಪ ಕಡಿಮೆ ಮಾಡ್ಕೊಂಡಿದೆ. ನಾನು ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡು ಘನತೆ-ಗೌರವವನ್ನು ಎತ್ತಿಹಿಡಿಯುತ್ತೇನೆ. ವಿಧಾನ ಪರಿಷತ್‌ಅನ್ನು ದೇಶದಲ್ಲೇ ಮಾದರಿ ವಿಧಾನ ಪರಿಷತ್ ಮಾಡೋಕೆ ಹಗಲು-ರಾತ್ರಿ ಪ್ರಯತ್ನ ಮಾಡುತ್ತೇನೆ ಎಂದರು.

ಮೀಸಲಾತಿ ಸಮಾಜದ ಶಾಂತಿ ಕದಡುವ ವಿಚಾರ. ಶಾಂತಿ ಎಲ್ಲಿದೆ, ಯಾರಿಗೂ ಶಾಂತಿ ಇಲ್ಲ. ಶಾಂತಿ ಸುವ್ಯವಸ್ಥೆ ಬಗ್ಗೆ ಮಾತಾಡೋದು ತಪ್ಪಾಗುತ್ತೆ. ಪಾದಯಾತ್ರೆ ಜಾಸ್ತಿ ಆಗೋದಕ್ಕೆ ಏನೂ ಮಾಡೋಕೆ ಆಗಲ್ಲ. ಅದಕ್ಕೆ ಔಷಧಿ ಇಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.