ETV Bharat / city

ಜಾನುವಾರು ಮೇಯಿಸುತ್ತಿದ್ದ ಯುವತಿ ಅಪಹರಿಸಿ ಅತ್ಯಾಚಾರ: ಆರೋಪಿ ಬಂಧನ - one arrest

ಜಾನುವಾರು ಮೇಯಿಸುತ್ತಿದ್ದ ಯುವತಿಯನ್ನು ಅಪಹರಿಸಿ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿರುವ ಪ್ರಕರಣ ತುಮಕೂರಿನಲ್ಲಿ ನಡೆದಿದೆ. ಸಂತ್ರಸ್ತೆ ನೀಡಿದ ದೂರಿನನ್ವಯ ಓರ್ವನನ್ನು ಬಂಧಿಸಲಾಗಿದೆ.

ಅತ್ಯಾಚಾರ
ಅತ್ಯಾಚಾರ
author img

By

Published : Jun 27, 2022, 3:26 PM IST

ತುಮಕೂರು: 63 ವರ್ಷದ ವ್ಯಕ್ತಿಯೊಬ್ಬ ಜಾನುವಾರು ಮೇಯಿಸುತ್ತಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿರುವ ಘಟನೆ ತಾಲೂಕಿನ ಅಮೃತೂರು ಹೋಬಳಿ ದೊಡ್ಡಕಲ್ಲಹಳ್ಳಿ ಗ್ರಾಮದಲ್ಲಿ‌ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಕಲ್ಲಹಳ್ಳಿ ಗ್ರಾಮದ ರಾಮಕೃಷ್ಣಯ್ಯ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆ ಎಂದಿನಂತೆ ತನ್ನ ಗ್ರಾಮದ ಹೊರವಲಯದ ಬಯಲಿನಲ್ಲಿ ಜಾನುವಾರು ಮೇಯಿಸುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ರಾಮಕೃಷ್ಣಯ್ಯ ಯುವತಿಯನ್ನು ಬಲವಂತದಿಂದ ಹೊತ್ತೊಯ್ದಿದ್ದಾನೆ. ನಂತರ ಬಾಯಿಗೆ ಬಟ್ಟೆ ತುರುಕಿ ಅತ್ಯಾಚಾರ ಎಸಗಿದ್ದಾನೆ.

ಈ ಬಗ್ಗೆ ಸಂತ್ರಸ್ತೆಯು ನೀಡಿರುವ ದೂರಿನ ಅನ್ವಯ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ವಿಷ ಕುಡಿದು ಪೊಲೀಸ್ ಠಾಣೆಗೆ ಬಂದ ಕೊಲೆ ಆರೋಪಿ!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.