ETV Bharat / city

ಸಿದ್ದಗಂಗಾ ಮಠ ಮತ್ತು ನಮ್ಮ ಸಂಬಂಧ ಬಹಳ ಹಳೆಯದ್ದು: ರಾಹುಲ್ ಗಾಂಧಿ - Rahul Gandhi visits Siddaganga Math

ಸಿದ್ದಗಂಗಾ ಮಠದೊಂದಿಗಿನ ನಮ್ಮ ಸಂಬಂಧ ಬಹಳ ಹಳೆಯದ್ದು. ನಮಗೆ ಮಠದ ಜೊತೆ ಉತ್ತಮ ಸಂಬಂಧವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

rahul-gandhi-visits-sidda-ganga-math
ಸಿದ್ದಗಂಗಾ ಮಠದ ಮತ್ತು ನಮ್ಮ ಸಂಬಂಧ ಬಹಳ ಹಳೆಯ ಸಂಬಂಧ : ರಾಹುಲ್ ಗಾಂಧಿ
author img

By

Published : Mar 31, 2022, 10:19 PM IST

ತುಮಕೂರು: ಸಿದ್ದಗಂಗಾ ಮಠದೊಂದಿಗಿನ ನಮ್ಮ ಸಂಬಂಧ ಬಹಳ ಹಳೆಯದ್ದು ಎಂದು ರಾಹುಲ್ ಗಾಂಧಿ ಹೇಳಿದರು. ಶ್ರೀ ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಹಿಂದೆ ನಾನು ಇಲ್ಲಿಗೆ ಬಂದಿದ್ದೆ. ನನ್ನ ಅಜ್ಜಿ, ತಂದೆ, ತಾಯಿಯೂ ಇಲ್ಲಿಗೆ ಭೇಟಿ ನೀಡಿದ್ದರು. ಹಾಗಾಗಿ, ನಮ್ಮದು ಮತ್ತು ಮಠದ್ದು ಬಹಳ ಹಳೆಯ ಸಂಬಂಧ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯವಾಗುತ್ತಿದೆ. ಮಠದ ಸೇವೆ, ದಾಸೋಹ ಬಹಳಷ್ಟು ಸಂತೋಷ ಉಂಟು ಮಾಡುವಂಥದ್ದು. ಬಸವಣ್ಣನವರು ನೀಡಿದ ಜಾತಿ, ಧರ್ಮ, ದ್ವೇಷ ಹಾಗು ಅಸೂಹೆ ಇಲ್ಲದ ಜೀವನವೇ ನಮಗೆ ಮಂತ್ರವಾಗಿದೆ ಎಂದು ಹೇಳಿದರು.

ಶಿವಕುಮಾರ ಸ್ವಾಮೀಜಿಗಳು ಸುಮಾರು ವರ್ಷಗಳ ಕಾಲ ನಮಗೆ ದಾರಿದೀಪವಾಗಿದ್ದರು. ನಾನು ಹಿಂದೆ ಮಠಕ್ಕೆ ಭೇಟಿ ಕೊಟ್ಟಾಗ ಶ್ರೀಗಳನ್ನು ಭೇಟಿ ಮಾಡಿದ್ದೆ. ಇಂದು ಸ್ವಾಮೀಜಿ ನಮ್ಮೊಂದಿಗಿಲ್ಲ, ಆದರೆ ನಮಗೆ ಅವರು ಬದುಕುವ ಮಾರ್ಗ ತೋರಿದ್ದಾರೆ. ಆ ಮಾರ್ಗದಲ್ಲಿ ನಾವು ನಡೆಯಬೇಕು ಎಂದು ಹೇಳಿದರು.

ಇದನ್ನೂ ಓದಿ : ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಕೋರ್ಟ್​ ಆದೇಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.