ETV Bharat / city

ಪಾವಗಡ ಸರ್ಕಾರಿ ಆಸ್ಪತ್ರೆ ಮೇಲೆ ನಿರ್ಲಕ್ಷ್ಯ ಆರೋಪ-ಕಾರಿನಲ್ಲೇ ಹೆರಿಗೆ : ಸಾರ್ವಜನಿಕರ ಆಕ್ರೋಶ!

ವೈದ್ಯರು ಹಾಗೂ ಸಿಬ್ಬಂದಿ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರ ಆಕ್ರೋಶದ ಬಳಿಕ ತಾಯಿ-ಮಗುವನ್ನು ಆಸ್ಪತ್ರೆ ಒಳಗೆ ಸಿಬ್ಬಂದಿ ಕರೆದೊಯ್ದರು ಎಂದು ಲಕ್ಷ್ಮಿದೇವಿ ಅವರ ಪತಿ ಚಂದ್ರಶೇಖರ್ ತಿಳಿಸಿದ್ದಾರೆ..

pregnant gave birth to child in car in front of  Pavagada hospital premises
ಪಾವಗಡ ಸರ್ಕಾರಿ ಆಸ್ಪತ್ರೆ ಎದುರು ಕಾರಿನಲ್ಲೇ ಹೆರಿಗೆ
author img

By

Published : Mar 12, 2022, 12:18 PM IST

Updated : Mar 12, 2022, 12:23 PM IST

ತುಮಕೂರು : ಸರ್ಕಾರಿ ಆಸ್ಪತ್ರೆ ಬಳಿ ಬಂದರೂ ಸೂಕ್ತ ಚಿಕಿತ್ಸೆ ದೊರೆಯದ ಹಿನ್ನೆಲೆ ಗರ್ಭಿಣಿಯೋರ್ವರು ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಸರ್ಕಾರಿ ಆಸ್ಪತ್ರೆ ಬಳಿ ನಡೆದಿದೆ.

ಪಾವಗಡ ತಾಲೂಕಿನ ಮಡಕಶಿರಾ ಹೋಬಳಿಯ ಪಿಲ್ಲಕುಂಟೆ ಗ್ರಾಮದ ಲಕ್ಷ್ಮಿದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಬರಲು ಆ್ಯಂಬುಲೆನ್ಸ್​ಗಾಗಿ ಪರದಾಡಿದ್ದರು. ಆ್ಯಂಬುಲೆನ್ಸ್ ಸಿಗದೆ ಕಾರಿನಲ್ಲಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು.

ಪಾವಗಡ ಸರ್ಕಾರಿ ಆಸ್ಪತ್ರೆ ಎದುರು ಕಾರಿನಲ್ಲೇ ಹೆರಿಗೆ

ಆಸ್ಪತ್ರೆ ಬಳಿ ಗರ್ಭಿಣಿಯನ್ನು ಕರೆತಂದರೂ ವೈದ್ಯರು ಹಾಗೂ ಸಿಬ್ಬಂದಿ ಗಮನಹರಿಸದ ಹಿನ್ನೆಲೆ ಆಸ್ಪತ್ರೆ ಮುಂಭಾಗವೇ ಕಾರಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಸನ್ನಡತೆ ಆಧಾರದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ 18 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ

ವೈದ್ಯರು ಹಾಗೂ ಸಿಬ್ಬಂದಿ ನಡೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಸಾರ್ವಜನಿಕರ ಆಕ್ರೋಶದ ಬಳಿಕ ತಾಯಿ-ಮಗುವನ್ನು ಆಸ್ಪತ್ರೆ ಒಳಗೆ ಸಿಬ್ಬಂದಿ ಕರೆದೊಯ್ದರು ಎಂದು ಲಕ್ಷ್ಮಿದೇವಿ ಅವರ ಪತಿ ಚಂದ್ರಶೇಖರ್ ತಿಳಿಸಿದ್ದಾರೆ.

Last Updated : Mar 12, 2022, 12:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.