ETV Bharat / city

ತುಮಕೂರು: 3 ವರ್ಷದ ಹಿಂದೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಈಗ ಅರೆಸ್ಟ್​​ - ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್​​

ಮಹಿಳೆಯೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು 3 ವರ್ಷಗಳ ಬಳಿಕ ತುಮಕೂರು ಪೊಲೀಸರು ಬಂಧಿಸಿದ್ದಾರೆ.

Murder case Accused
ರೂಪೇಶ್ ಬಂಧಿತ ಆರೋಪಿ
author img

By

Published : Jun 14, 2022, 1:54 PM IST

ತುಮಕೂರು: ಮೂರು ವರ್ಷದ ಹಿಂದೆ ಮಹಿಳೆಯೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ರೂಪೇಶ್ ಬಂಧಿತ ಆರೋಪಿ. ಬೆಳಗಾವಿ ಮೂಲದ ಈತ ಮಹಿಳೆಯೊಬ್ಬರನ್ನು ಡ್ರಾಪ್ ಕೊಡುವ ನೆಪದಲ್ಲಿ ಕರೆದ್ಯೊಯ್ದು ಆಕೆಯ ಮೈಮೇಲಿದ್ದ ಚಿನ್ನಾಭರಣವನ್ನು ದೋಚಿ ಬಳಿಕ ಮೈಮೇಲೆ ಪೆಟ್ರೋಲ್ ಸುರಿದು ಪರಾರಿಯಾಗಿದ್ದ.

ಶವದ ಪಕ್ಕದಲ್ಲಿ ಒಂದು ಮಾಂಗಲ್ಯ ಸರ ಪತ್ತೆಯಾಗಿತ್ತು. ಪೊಲೀಸರು ನಿರಂತರವಾಗಿ ಆರೋಪಿಯನ್ನು ಪತ್ತೆ ಹಚ್ಚಲು ಶ್ರಮಿಸಿದ್ದರು. ಆದರೆ, ಯಾವುದೇ ಫಲ ಸಿಕ್ಕಿರಲಿಲ್ಲ. ಬಳಿಕ ಆರೋಪಿ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಮಹಿಳೆಯ ಬಳಿಯಿದ್ದ ಚಿನ್ನಾಭರಣಕ್ಕಾಗಿ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಕೊರಟಗೆರೆ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮರ್ಯಾದಾ ಹತ್ಯೆ: ತಂಗಿ -ಭಾವನನ್ನು ಮನೆಗೆ ಕರೆಸಿ, ಹೊಟ್ಟೆ ತುಂಬ ಊಟಾ ಮಾಡ್ಸಿ, ಬರ್ಬರವಾಗಿ ಕೊಂದ ಅಣ್ಣ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.