ತುಮಕೂರು: ಸಚಿವ ಮಾಧುಸ್ವಾಮಿ ಕೆಡಿಪಿ ಸಭೆಯಲ್ಲಿ ಅಸಭ್ಯ ಪದಗಳಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.
ಜಿ.ಪಂ ಇಂಜಿನಿಯರಿಂಗ್ ವಿಭಾಗದಲ್ಲಿ ಯಾವುದೇ ಕೆಲಸಗಳು ನಡೆದೇ ಇಲ್ಲ. ಕಳೆದ ತಿಂಗಳು 4ರಂದೇ ನಾನು ಸೂಚನೆ ನೀಡಿದ್ದೆ. ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಆಗಬೇಕಿರುವ ಕೆಲಸ ಇನ್ನೂ ಆಗಿಲ್ಲ. ಯಾವುದೇ ಒಂದು ಕೆಲಸ ಶುರುಮಾಡಿಲ್ಲ. ಅಲ್ಲದೆ ಜಿಲ್ಲಾ ಪಂಚಾಯತ್ ಇಂಜಿನಿಯರ್ಗಳು ಯಾರೂ ಕೆಲಸ ಮಾಡಿಲ್ಲ.
ಓದಿ: ಅಸಭ್ಯ ಪದಗಳಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಮಾಧುಸ್ವಾಮಿ: ವಿಡಿಯೋ
600 ಕೋಟಿಯಷ್ಟು ಯೋಜನೆಯ ಕೆಲಸ ಹಾಗೇ ಖಾಲಿ ಬಿದ್ದಿದೆ. ಎಷ್ಟು ಸಾರಿ ಸಹಿಸಿಕೊಳ್ಳೋದು, ಎಲ್ಲಿಯವರೆಗೆ ಸಹಿಸಿಕೊಳ್ಳೋದು ಹೇಳಿ? ಅದಕ್ಕೆ ಕೆಟ್ಟಪದ ಬಳಸಿದ್ದೇನೆ. ಅಧಿಕಾರಿಗಳ ಮೇಲೆ ಆ್ಯಕ್ಷನ್ ತೆಗೆದುಕೊಳ್ಳದೆ ಸಹಿಸಿಕೊಂಡು ಹೋದರೆ ಅವರು ಅದನ್ನೇ ದೌರ್ಬಲ್ಯ ಎಂದುಕೊಳ್ಳುತ್ತಾರೆ ಎಂದು ಅಸಭ್ಯ ಪದ ಬಳಕೆ ವಿಚಾರವಾಗಿ ಸ್ಪಷ್ಟನೆ ನೀಡಿದರು.