ತುಮಕೂರು: ನಗರದಲ್ಲಿ ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ಹಾನಿಯಾದ ಎಸ್.ಮಾಲ್, ಅಮಾನಿಕೆರೆ ಹಾಗೂ ಕೋತಿತೋಪು ಬಳಿಯಿರುವ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಗೃಹ ಸಚಿವರ ಆಗಮನ ಹಿನ್ನೆಲೆ ಮಹಾನಗರ ಪಾಲಿಕೆ, ಚರ್ಚ್ ಸರ್ಕಲ್ ಹಾಗೂ ಕೋಟೆ ಆಂಜನೇಯ ದೇವಾಲಯ ಮುಂಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೇವಲ 20 ನಿಮಿಷದಲ್ಲಿ ಗೃಹ ಸಚಿವರು ತುಮಕೂರು ನಗರದಲ್ಲಿ ಮಳೆಹಾನಿ ವೀಕ್ಷಿಸಿದ್ದಾರೆ. ಇವರಿಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಶಾಸಕ ಜ್ಯೋತಿ ಗಣೇಶ್ ಹಾಗೂ ಅಧಿಕಾರಿಗಳು ಸಾಥ್ ನೀಡಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸತತ 3ನೇ ದಿನವೂ ಮಳೆಯಬ್ಬರ: ಜಲಾವೃತ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನಿಗೆ ಗಂಭೀರ ಗಾಯ