ETV Bharat / city

ತುಮಕೂರಿನಲ್ಲಿ ಗಾಂಧಿ ಜಯಂತಿ.. ಕಂಠಸಿರಿಯಿಂದ ಮೋಡಿ ಮಾಡಿದ ಬಿ. ಜಯಶ್ರೀ - minister j c madhuswamy

ತುಮಕೂರು ನಗರದ ಬಾಲಭವನದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಈ ವೇಳೆ ವೇದಿಕೆ ಮೇಲಿಂದ ಕೆಳಗೆ ಇಳಿದು ಬಂದು ಸಚಿವ ಮಾಧುಸ್ವಾಮಿ ವಿಶೇಷ ಚೇತನರಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದೆ ಬಿ ಜಯಶ್ರೀ ಅವರು ಹಾಡಿನ ಮೂಲಕ ಗಮನ ಸೆಳೆದರು.

Gandhi Jayanti celebration in Tumkur
ತುಮಕೂರಿನಲ್ಲಿ ಗಾಂಧಿ ಜಯಂತಿ ಆಚರಣೆ
author img

By

Published : Oct 2, 2021, 7:19 PM IST

Updated : Oct 2, 2021, 9:23 PM IST

ತುಮಕೂರು: ವಿಶೇಷ ಚೇತನರಿಗೆ ಉಚಿತವಾಗಿ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲು ವೇದಿಕೆ ಮೇಲಿಂದ ಕೆಳಗಿಳಿದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸ್ವತಃ ಫಲಾನುಭವಿಗಳ ಬಳಿಯೇ ತೆರಳಿ ವಿತರಿಸಿ ಗಮನ ಸೆಳೆದರು.

ನಗರದ ಬಾಲಭವನದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ವಿಶೇಷ ಚೇತನರಿಗೆ ಲ್ಯಾಪ್​ಟಾಪ್, ಮೊಬೈಲ್, ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಪರಿಕರಗಳನ್ನು ವಿತರಿಸಲಾಯಿತು. ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ವಿಶೇಷ ಚೇತನರನ್ನು ಒಬ್ಬೊಬ್ಬರನ್ನಾಗಿಯೇ ವೇದಿಕೆ ಮೇಲೆ ಸಚಿವರ ಬಳಿ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದರು.

ಬಿ. ಜಯಶ್ರೀ ಭಾವುಕ ನುಡಿ

ಫಲಾನುಭವಿಗಳು ವೇದಿಕೆ ಮೇಲೆ ಬರಲು ಮತ್ತೊಬ್ಬರ ಸಹಾಯದಿಂದ ಹರಸಾಹಸ ಪಡುತ್ತಿದ್ದರು. ಇದನ್ನು ಗಮನಿಸಿದ ಸಚಿವ ಮಾಧುಸ್ವಾಮಿ ನಾನೇ ವೇದಿಕೆ ಕೆಳಗೆ ಇಳಿದು ಬರುತ್ತೇನೆ, ಯಾರೂ ಮೇಲೆ ಬರಬೇಡಿ ಎಂದು ಕೆಳಗಿಳಿದು ಬಂದು ಪರಿಕರಗಳನ್ನು ವಿತರಿಸಿದರು.

ಗಾಂಧಿ ಜಯಂತಿ ಆಚರಣೆ-ಹಾಡು ಹಾಡಿದ ಬಿ ಜಯಶ್ರೀ

ಬಿ. ಜಯಶ್ರೀ ಹಾಡು:

ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಹಿನ್ನೆಲೆ, ಅವರನ್ನು ಹಾಡಿನ ಮೂಲಕ ರಂಗಭೂಮಿ ಹಿರಿಯ ಕಲಾವಿದೆ ಬಿ. ಜಯಶ್ರೀ ಸ್ಮರಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಯಶ್ರೀ ಅವರು ಸಚಿವ ಮಾಧುಸ್ವಾಮಿ ಹಾಗೂ ಜನರ ಒತ್ತಾಯದ ಮೇಲೆ ‘ಮುಂಗೋಳಿ ಕೂಗ್ಯಾವ’ ಎಂಬ ಹಾಡನ್ನು ಚಿಟಿಕೆ ಬಾರಿಸುತ್ತಾ ಹಾಡಿದರು. ನಂತರ ರಂಗಭೂಮಿ ಕಲಾವಿದರಾಗಿದ್ದ ಗುಬ್ಬಿ ವೀರಣ್ಣ ಅವರ ಮಗಳು ಹಾಗೂ ಜಯಶ್ರೀ ಅವರ ತಾಯಿ ಕೂಡ ನಾಟಕಗಳಲ್ಲಿ ವ್ಹೀಲ್ ಚೇರ್ ಮೇಲೆ ಕುಳಿತು ಅಭಿನಯ ಮಾಡುತ್ತಿದ್ದುದ್ದನ್ನು ನೆನಪಿಸಿಕೊಂಡರು.

ಗಾಂಧಿ ಜಯಂತಿ ಆಚರಣೆ-ವಿಶೇಷ ಚೇತನರಿಗೆ ಶೈಕ್ಷಣಿಕ ಪರಿಕರಗಳ ವಿತರಣೆ

ಇದನ್ನೂ ಓದಿ: ಜನರ ಆಶೀರ್ವಾದ, ಸಂಪರ್ಕವಿಲ್ಲದೆ ನಾ ಬದುಕೋದು ಕಷ್ಟ.. ಉಸಿರಿರೋವರೆಗೂ ರಾಜಕೀಯ ಹೋರಾಟ.. ಖರ್ಗೆ

Last Updated : Oct 2, 2021, 9:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.