ETV Bharat / city

ಕೋವಿಡ್-19 ಗೆ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ - ತುಮಕೂರಿನ ಜಲ್ಕಾ ಮಕಾನ್ ದರ್ಗಾ

ಕೊರೊನಾ ವೈರಸ್ ಸೋಂಕಿನಿಂದ ಇಂದು ಬೆಳಿಗ್ಗೆ 10.40 ಕ್ಕೆ ಜಿಲ್ಲಾ ಸರ್ಕಾರಿ ಅಸ್ಪತ್ರೆಯಲ್ಲಿ ಮೃತಪಟ್ಟ 60 ವರ್ಷದ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ತುಮಕೂರಿನ ಜಲ್ಕಾ ಮಕಾನ್ ದರ್ಗಾದಲ್ಲಿ ಮಾಡಲಾಯಿತು.

ಕೋವಿಡ್-19 ಗೆ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ

author img

By

Published : Mar 27, 2020, 3:32 PM IST

ತುಮಕೂರು: ಕೊರೊನಾ ವೈರಸ್ ಸೋಂಕಿನಿಂದ ಇಂದು ಬೆಳಿಗ್ಗೆ 10.40 ಕ್ಕೆ ಜಿಲ್ಲಾ ಸರ್ಕಾರಿ ಅಸ್ಪತ್ರೆಯಲ್ಲಿ ಮೃತಪಟ್ಟ 60 ವರ್ಷದ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ತುಮಕೂರಿನ ಜಲ್ಕಾ ಮಕಾನ್ ದರ್ಗಾದಲ್ಲಿ ಮಾಡಲಾಯಿತು.

ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ

9 ಅಡಿ ಆಳದಲ್ಲಿ ಶವವನ್ನು ಹೂತುಹಾಕುವಂತೆ ಸೂಚಿಸಲಾಗಿತ್ತು. ಅದರಂತೆ ಶವದ ಬಳಿ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಪೂರ್ಣಗೊಳಿಸಲು ಇಬ್ಬರು ಮೃತನ ಸಂಬಂಧಿಕರಿಗೆ ಅವಕಾಶ ನೀಡಲಾಯಿತು.

ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಕೋವಿಡ್-19 ಪ್ರತ್ಯೇಕತಾ ಕೊಠಡಿಯಿಂದ ಭಾರೀ ವೈದ್ಯಕೀಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಹೊರತೆಗೆಯಲಾಗಿತ್ತು. ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಹೊಂದಿಕೊಂಡಂತೆ ಇರುವ ಜಲ್ಕಾ ಮಕಾನ್ ದರ್ಗಾಕ್ಕೆ ಸ್ಥಳಾಂತರಿಸಲಾಗಿತ್ತು.

ಈ ವೇಳೆ ಮೃತರ ಸಂಬಂಧಿಕರು ಆಸ್ಪತ್ರೆಯ ಸುತ್ತಲೂ ಜಮಾಯಿಸಿದ್ದು ಕಂಡುಬಂದಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.