ETV Bharat / city

ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧ: ರಸ್ತೆಯಲ್ಲೇ ಪೂಜೆ ಸಲ್ಲಿಸುತ್ತಿರುವ ಭಕ್ತರು

ಕೋವಿಡ್​ ಹಿನ್ನೆಲೆ ಈಗಾಗಲೇ ವಿಶೇಷ ಪೂಜೆ, ಅಭಿಷೇಕಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದರಿಂದ ಭಕ್ತರು ವಿಧಿಯಿಲ್ಲದೇ ರಸ್ತೆ ಮೇಲೆ ಪೂಜಾ ಕಾರ್ಯ ನೆರವೇರಿಸುತ್ತಿರುವ ದೃಶ್ಯ ತುಮಕೂರಿನ ಪಾವಗಡ ಪಟ್ಟಣದ ಶನಿ ಮಹಾತ್ಮ ದೇವಸ್ಥಾನದ ಬಳಿ ಕಂಡು ಬಂದಿತು.

Devotees worshiping on the road
ರಸ್ತೆಯಲ್ಲೇ ಪೂಜೆ ಸಲ್ಲಿಸುತ್ತಿರುವ ಭಕ್ತರು
author img

By

Published : Aug 14, 2021, 12:59 PM IST

ತುಮಕೂರು: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಪಾವಗಡ ಪಟ್ಟಣದ ಶನಿ ಮಹಾತ್ಮ ದೇವಸ್ಥಾನಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ನಿರ್ಬಂಧ ಹೇರಲಾಗಿದೆ. ಆದರೂ ಇಂದು ಶ್ರಾವಣ ಮಾಸದ ವಿಶೇಷ ಶನಿವಾರದ ಹಿನ್ನೆಲೆ ದೇಗುಲದ ಎದುರಿನ ರಸ್ತೆಯಲ್ಲೇ ಭಕ್ತರು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂದಿತು.

ರಸ್ತೆಯಲ್ಲೇ ಪೂಜೆ ಸಲ್ಲಿಸುತ್ತಿರುವ ಭಕ್ತರು

ಶ್ರಾವಣ ಮಾಸದ ಮೊದಲ ಶನಿವಾರ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುವುದು ಪ್ರತೀತಿ. ಆದರೆ, ಕೋವಿಡ್​ ಹಿನ್ನೆಲೆ ಈಗಾಗಲೇ ವಿಶೇಷ ಪೂಜೆ, ಅಭಿಷೇಕಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದರಿಂದ ಭಕ್ತರು ವಿಧಿಯಿಲ್ಲದೆ ರಸ್ತೆಗಳಲ್ಲೇ ಪೂಜಾ ಕಾರ್ಯ ನೆರವೇರಿಸುತ್ತಿದ್ದಾರೆ.

ಕೋವಿಡ್​ ಸೋಂಕು ಹರಡುವ ಭೀತಿಯಿಂದ ನಿರ್ಬಂಧ ಹೇರಲಾಗಿದ್ದು, ಶ್ರಾವಣ ಮಾಸದ ಶನಿವಾರ, ಭಾನುವಾರ, ಸೋಮವಾರ, ಸಾರ್ವತ್ರಿಕ ರಜಾ ದಿನಗಳಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ಸಂಪೂರ್ಣ ನಿಷೇಧವಿದೆ. ಉಳಿದ ದಿನ ದೇವರ ದರ್ಶನಕ್ಕೆ ಅವಕಾಶ‌ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.