ತುಮಕೂರು: ಕರ್ನಾಟಕದಲ್ಲಿ ಕೊರೊನಾ ವೈರಸ್ಗೆ ಮತ್ತೋರ್ವ ಸೋಂಕಿತ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದೆ.
60 ವರ್ಷದ ಶಿರಾ ಮೂಲದ ವೃದ್ಧ ಸಾವನ್ನಪ್ಪಿದ್ದು, ಇವರು 13 ಮಂದಿಯ ಜೊತೆ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ. ಈ ವ್ಯಕ್ತಿಯೊಂದಿಗೆ ಪ್ರಯಾಣಿಸಿದ್ದ ಸಹ ಪ್ರಯಾಣಿಕರನ್ನು ಈಗಾಗಲೇ ಪತ್ತೆ ಹಚ್ಚಲಾಗುತ್ತಿದೆ. ಸೋಂಕಿತ ವೃದ್ಧ ಮಾರ್ಚ್ 24 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ತುಮಕೂರಿನಿಂದ ದೆಹಲಿಗೆ ರೈಲಿನ ಮೂಲಕ ಪ್ರಯಾಣಿಸಿರುವುದು ಗೊತ್ತಾಗಿದೆ. ದೆಹಲಿಯ ಜಮಿಯಾ ಮಸೀದಿ ಕಾರ್ಯಕ್ರಮದಲ್ಲಿ ಇವರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
-
ರಾಜ್ಯದಲ್ಲಿ ಇಂದು ಒಬ್ಬ #COVID19 ಸೋಂಕಿತ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ. ಎಲ್ಲಾ ನಾಗರಿಕರು ಲಾಕ್ ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ, ಮನೆಯಲ್ಲಿ ಮುಂಜಾಗೃತ ಕ್ರಮಗಳೊಂದಿಗೆ ಸುರಕ್ಷಿತವಾಗಿರಬೇಕು ಎಂದು ವಿನಂತಿಸುತ್ತೇನೆ. (1/3)#IndiaFightCorona
— B Sriramulu (@sriramulubjp) March 27, 2020 " class="align-text-top noRightClick twitterSection" data="
">ರಾಜ್ಯದಲ್ಲಿ ಇಂದು ಒಬ್ಬ #COVID19 ಸೋಂಕಿತ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ. ಎಲ್ಲಾ ನಾಗರಿಕರು ಲಾಕ್ ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ, ಮನೆಯಲ್ಲಿ ಮುಂಜಾಗೃತ ಕ್ರಮಗಳೊಂದಿಗೆ ಸುರಕ್ಷಿತವಾಗಿರಬೇಕು ಎಂದು ವಿನಂತಿಸುತ್ತೇನೆ. (1/3)#IndiaFightCorona
— B Sriramulu (@sriramulubjp) March 27, 2020ರಾಜ್ಯದಲ್ಲಿ ಇಂದು ಒಬ್ಬ #COVID19 ಸೋಂಕಿತ ಮೃತಪಟ್ಟಿದ್ದು, ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿದೆ. ಎಲ್ಲಾ ನಾಗರಿಕರು ಲಾಕ್ ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ, ಮನೆಯಲ್ಲಿ ಮುಂಜಾಗೃತ ಕ್ರಮಗಳೊಂದಿಗೆ ಸುರಕ್ಷಿತವಾಗಿರಬೇಕು ಎಂದು ವಿನಂತಿಸುತ್ತೇನೆ. (1/3)#IndiaFightCorona
— B Sriramulu (@sriramulubjp) March 27, 2020
ಈವರೆಗೆ ರಾಜ್ಯದಲ್ಲಿ 55 ಮಂದಿ ಸೋಂಕಿತರು ಪತ್ತೆಯಾಗಿದ್ದು, 3 ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಕಲಬುರಗಿ 1, ಗೌರಿಬಿದನೂರು 1, ತುಮಕೂರಿನಲ್ಲಿ ಇದೀಗ ಮತ್ತೊಬ್ಬರು ಸಾವನ್ನಪ್ಪಿದ್ದಾರೆ.