ತುಮಕೂರು: ರಾಶಿರಾಶಿ ಕಾಂಡೋಮ್ಗಳನ್ನು ಎಸೆದು ಹೋಗಿರುವ ಘಟನೆ ತುಮಕೂರು ನಗರದ ಹೊರವಲಯದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಇದನ್ನು ಕಂಡು ವಾಹನ ಸವಾರರು ಅಚ್ಚರಿಗೆ ಒಳಗಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರುವ ಕ್ಯಾತ್ಸಂದ್ರದಿಂದ ಬಟವಾಡಿ ಬಳಿಯ ಶ್ರೀರಾಜ್ ಚಿತ್ರಮಂದಿರದ ಎದುರು ಇರುವ ಫ್ಲೈಓವರ್ ಮೇಲೆ ಕಿಲೋಮೀಟರ್ಗಟ್ಟಲೆ ಕಾಂಡೋಮ್ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಇವುಗಳನ್ನು ಇಲ್ಲಿ ಎಸೆದವರು ಯಾರು ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.
ಇದು ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಸಹಜವಾಗಿ ವಾಹನಗಳು ಸಂಚರಿಸುವ ವೇಳೆ ಅಚಾನಕ್ಕಾಗಿ ಬಿದ್ದಿವೆಯೋ ಅಥವಾ ಉದ್ದೇಶಪೂರ್ವಕವಾಗಿ ಯಾರಾದರೂ ರಸ್ತೆ ಪಕ್ಕದಲ್ಲಿ ಹಾಕಿದ್ದಾರೋ ಎಂಬ ಸಂಶಯ ಜನರನ್ನು ಕಾಡುತ್ತಿವೆ. ರಾಶಿ ರಾಶಿ ಎಸೆದಿರುವ ಕಾಂಡೋಮ್ಗಳಲ್ಲಿ ಕೆಲವು ಬಳಸಲಾಗಿದ್ದು, ಇನ್ನೂ ಕೆಲವನ್ನು ಪ್ಯಾಕೆಟ್ಗಳಿಂದ ತೆಗೆಯಲಾಗಿಲ್ಲ.
ಇದನ್ನೂ ಓದಿ: CCTV Video: ಸಾಲಿನಲ್ಲಿ ಬನ್ನಿ ಎಂದಿದ್ದಕ್ಕೆ ಮಹಿಳೆಗೆ ಮನಬಂದಂತೆ ಥಳಿಸಿದ ವ್ಯಕ್ತಿ