ETV Bharat / city

'ಬಿಜೆಪಿ ಅಭ್ಯರ್ಥಿ ದೇಶ ಮೊದಲು ಅಂದ್ರೆ, ಮೈತ್ರಿ ಅಭ್ಯರ್ಥಿ ಕುಟುಂಬ ಮೊದಲು' - ದೇವೇಗೌಡ

ಬಿಜೆಪಿ ಅಭ್ಯರ್ಥಿ ದೇಶ ಮೊದಲು ಅಂದ್ರೆ, ಜೆಡಿಎಸ್​ ಅಭ್ಯರ್ಥಿ ಕುಟುಂಬ ಮೊದಲು ಅಂತಾರೆ. ಜೆಡಿಎಸ್ ಕುಟುಂಬ ರಾಜಕಾರಣ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯ.

ದೇವೇಗೌಡ
author img

By

Published : Apr 5, 2019, 2:31 AM IST

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ದೇಶವೇ ಮೊದಲು ಅಂದ್ರೆ, ಮೈತ್ರಿ ಅಭ್ಯರ್ಥಿ ಕುಟುಂಬ ಮೊದಲು ಅಂತಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ

ಕಾಂಗ್ರೆಸ್ ಪ್ರಣಾಳಿಕೆಯು ದೇಶದ ಸುಸ್ಥಿರತೆಗೆ, ಸಮಗ್ರತೆಗೆ ಧಕ್ಕೆ ತರುವಂತದ್ದಾಗಿದೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಹೇಗೆ ನೋವನ್ನು ಅನುಭವಿಸುತ್ತಿದ್ದಾರೆಯೋ ಅದೇ ರೀತಿಯಾದ ಪರಿಸ್ಥಿತಿಯನ್ನು ದೇಶದ ವಿವಿಧ ಭಾಗಗಳಲ್ಲಿ ತರುವ ನಿಲುವನ್ನು ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

Intro:ತುಮಕೂರು ಲೋಕಸಭಾ ಕ್ಷೇತ್ರ....
ಬಿಜೆಪಿ ಅಭ್ಯರ್ಥಿ ನೇಶನ್ ಫಸ್ಟ್..... ಮೈತ್ರಿ ಅಭ್ಯರ್ಥಿ ಫ್ಯಾಮಿಲಿ ಫಸ್ಟ್ .....
ಶಾಸಕ ಸಿ ಟಿ ರವಿ ಹೇಳಿಕೆ.......

ತುಮಕೂರು
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನೇಶನ್ ಫಸ್ಟ್ ಆದರೆ ಮೈತ್ರಿ ಅಭ್ಯರ್ಥಿ ಫ್ಯಾಮಿಲಿ ಫಸ್ಟ್ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ವಿಶ್ಲೇಷಣೆ ಮಾಡಿದ್ದಾರೆ.

ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಅಭ್ಯರ್ಥಿ ಯ ಅಜೆಂಡಾ ವೇ ಕುಟುಂಬದ ರಾಜಕೀಯ ವಿಸ್ತರಣವಾದವಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ಮಾಜಿ ಪ್ರಧಾನಿ ದೇವೇಗೌಡರನ್ನು ಪರೋಕ್ಷವಾಗಿ ಟೀಕಿಸಿದರು. ಮೊದ್ಲು ದೇಶವೆಂದ್ರೆ ಹೊಳೆನರಸೀಪುರ ಎಂಬುದಾಗಿತ್ತು, ಇದೀಗ ಹೊಳೆನರಸೀಪುರ ವೂ ಅಲ್ಲ ಬದಲಾಗಿ ಇಡೀ ಕುಟುಂಬವೇ ಆಗಿದೆ ಎಂದರು.

ಅವರ ಕುಟುಂಬಕ್ಕೆ ಏನೇನು ಅಭಿವೃದ್ಧಿ ಆಗಬೇಕು ಎಂಬುದೇ ಅವರ ಅಜೆಂಡಾ ಆಗಿದೆ ಎಂದ್ರು.

ಕಾಂಗ್ರೆಸ್ ಪ್ರಣಾಳಿಕೆ ಯು ದೇಶದ ಸುಸ್ಥಿರತೆಗೆ ಮಾರಕ ವಾಗಿರುವಂತಹುದಾಗಿದೆ. ದೇಶದ ಸಮಗ್ರತೆಗೆ ಧಕ್ಕೆ ತರುವಂತದ್ದಾಗಿದೆ. ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರು ಹೇಗೆ ನೋವನ್ನು ಅನುಭವಿಸುತ್ತಿದ್ದಾರೆಯೋ ಅದೇ ರೀತಿಯಾದ ಪರಿಸ್ಥಿತಿಯನ್ನು ದೇಶದ ವಿವಿಧ ಭಾಗಗಳಲ್ಲಿ ತರುವಂತಹ ನಿಲುವಿಗೆ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಲ್ಲದೆ ಅಂತಹ ಸಂಚಿನ ಭಾಗವಾಗಿ ತುಮಕೂರಿನಿಂದ ಓರ್ವ ಪ್ರತಿ ನಿಧಿ ಕೇಂದ್ರಕ್ಕೆ ಹೋಗಬೇಕೇ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಕೂಡ ಈ ಚುನಾವಣೆಯಲ್ಲಿ ದೇವೇಗೌಡರನ್ನು ಬೆಂಬಲಿಸಲು ಒಕ್ಕಲಿಗರ ಸಂಘದ ಚುನಾವಣೆಯೇ ಎಂದು ಕೇಳಿದ್ದಾರೆ, ಲೋಕಸಭಾ ಚುನಾವಣೆಯ ದೇಶಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರು ಜ್ಯೋತಿ ಗಣೇಶ್ ಮತ್ತಿತರರು ಹಾಜರಿದ್ದರು

Body:ತುಮಕೂರು

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.