ತುಮಕೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಹೊಸದಾಗಿ 10 ಸ್ನಾತಕೋತ್ತರ ಪದವಿಗಳನ್ನು ಪರಿಚಯಿಸಲಾಗುತ್ತಿದೆ. ವಾಣಿಜ್ಯ ,ವಿಜ್ಞಾನ ತಂತ್ರಜ್ಞಾನ, ಇಂಗ್ಲಿಷ್ ಭಾಷಾಜ್ಞಾನ, ಚಿತ್ರಕಲೆ, ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸೇರಿದಂತೆ 10 ಕ್ಷೇತ್ರಗಳ ಕುರಿತು ಮುಖ್ಯವಾಗಿ ಗಮನದಲ್ಲಿ ಇರಿಸಿಕೊಳ್ಳಲಾಗಿದೆ.
ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ 93 ಕಾಲೇಜುಗಳಲ್ಲಿ, ಈ 10 ಸ್ನಾತಕೋತ್ತರ ಪದವಿಗಳನ್ನು ಪರಿಚಯಿಸಲಾಗುತ್ತದೆ. ಇದನ್ನು ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳಿಗೆ ತಕ್ಷಣ ಕೆಲಸ ಸಿಗುವ ಸಂಪೂರ್ಣ ಭರವಸೆ ಇರಲಿದೆ ಎಂದು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ ಸಿದ್ದೇಗೌಡ ತಿಳಿಸಿದ್ದಾರೆ.
ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ವಿಷಯಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಇದನ್ನು ಗಮನದಲ್ಲಿಟ್ಟುಕೊಂಡು MSc in research methodology and statistics ಕೋರ್ಸ್ ಅನ್ನು ಪರಿಚಯಿಸಲಾಗುತ್ತಿದೆ. ಇಂಗ್ಲೀಷ್ ಭಾಷೆಯ ಮಹತ್ವವನ್ನು ಗಮನದಲ್ಲಿಟ್ಟುಕೊಂಡು M.A in functional English ಕೋರ್ಸನ್ನು ಪರಿಚಯಿಸಲಾಗುತ್ತಿದೆ.
ಕೇವಲ ವಿಜ್ಞಾನ-ತಂತ್ರಜ್ಞಾನಕ್ಕೆ ಮಾತ್ರ ಒತ್ತು ನೀಡದೆ ಕಲೆ-ಸಂಸ್ಕೃತಿ, ಸಂಪ್ರದಾಯಕ್ಕೂ ಕೂಡ ಮಹತ್ವ ನೀಡುತ್ತಾ Masters in visual arts ಆರಂಭಿಸಲಾಗುತ್ತದೆ. ವಿದೇಶದಲ್ಲಿನ ಕಾನೂನು ಮತ್ತು ವ್ಯವಸ್ಥೆ ಕುರಿತಾಗಿ M.A in international relations ಎಂಬ ಹೊಸ ಕೋರ್ಸನ್ನು ಪರಿಚಯಿಸಲಾಗುತ್ತಿದೆ.
ಇನ್ನುಳಿದಂತೆ M.com (information systems) , MBA in business analytics , MSc in food and nutrition ಎಂಬ ಹೊಸ ಕೋರ್ಸ್ಗಳನ್ನು ಈ ಬಾರಿ ಆರಂಭಿಸಲಾಗುತ್ತಿದೆ.