ತುಮಕೂರು : ಜಿಲ್ಲೆಯಲ್ಲಿ 132 ಘಟಕಗಳಲ್ಲಿ ವ್ಯಾಕ್ಸಿನ್ ನೀಡಲಾಗುತ್ತಿದೆ. ಆದರೆ ಕೆಲ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ಲಸಿಕೆ ಪಡೆಯಲು ಮುಂದಾಗುತ್ತಿಲ್ಲ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ 10,808 ಮಂದಿ ವ್ಯಾಕ್ಸಿನ್ ಪಡೆಯಲು ಹೆಸರನ್ನು ದಾಖಲಿಸಿಕೊಂಡಿದ್ದರು. ಅವರಲ್ಲಿ 2,019 ಮಂದಿ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ. 9,698 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.
ಓದಿ-116 ಎಕ್ರೆ ಜಮೀನು ದಾನ ಮಾಡಿ 4 ಬಾರಿ ಶಾಸಕನಾದ ವೃದ್ಧನಿಗೆ ತಲೆ ಮೇಲೊಂದು ಸೂರಿಲ್ಲ!
ಮೊದಲ ದಿನ ಶೇಕಡಾ 79ರಷ್ಟು ಪ್ರಗತಿ ಸಾಧಿಸಲಾಗಿದೆ. 303 ಮಂದಿ ವ್ಯಾಕ್ಸಿನ್ ಪಡೆದಿಲ್ಲ. 839 ವ್ಯಾಕ್ಸಿನ್ ತೆಗೆದುಕೊಂಡಿದ್ದಾರೆ. 2ನೇ ದಿನ ಶೇಕಡಾ 80ರಷ್ಟು ವ್ಯಾಕ್ಸಿನ್ ನೀಡಿಕೆಯ ಪ್ರಗತಿ ಸಾಧಿಸಲಾಗಿದೆ. 909 ಮಂದಿ ವ್ಯಾಕ್ಸಿನ್ ಪಡೆದಿಲ್ಲ. 3640 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ. ಮೂರನೇ ದಿನ ಶೇಕಡಾ 84ರಷ್ಟು ಪ್ರಗತಿ ಸಾಧಿಸಲಾಗಿದ್ದು, 807 ಮಂದಿ ವ್ಯಾಕ್ಸಿನ್ ಪಡೆಯಲು ಮುಂದೆ ಬಂದಿಲ್ಲ. ಆದರೆ 4,310 ಮಂದಿ ವ್ಯಾಕ್ಸಿನ್ ಪಡೆದಿದ್ದಾರೆ.
ಈ ಕುರಿತಂತೆ ಈಟಿವಿ ಭಾರತ ಜೊತೆ ಮಾಹಿತಿ ಹಂಚಿಕೊಂಡಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವೀರಭದ್ರಯ್ಯ, ಹೆಸರು ನೋಂದಾಯಿಸಿಕೊಂಡಿರುವ ಕೆಲವರು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ವ್ಯಾಕ್ಸಿನ್ ಪಡೆದವರ ಆರೋಗ್ಯ ಸ್ಥಿತಿಗತಿಯನ್ನು ಕೆಲವರು ಗಮನಿಸುತ್ತಿದ್ದಾರೆ. ಅವರೆಲ್ಲರೂ ಲಸಿಕೆ ಪಡೆದೇ ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.