ತುಮಕೂರು : ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರ 112ನೇ ಜಯಂತಿ ಹಾಗೂ ಗುರುವಂದನೆ ಕಾರ್ಯಕ್ರಮದ ಹಿನ್ನೆಲೆ ಇಂದು ಬೆಳಗ್ಗೆ ಶ್ರೀಗಳ ಗದ್ದುಗೆಗೆ ವಿಶೇಷ ಅಲಂಕಾರ, ಪೂಜೆ, ಭಜನೆ, ಕೀರ್ತನೆ ಆಯೋಜಿಸಲಾಗಿತ್ತು.
ಬೆಳಗ್ಗೆ ಐದು ಗಂಟೆಯಿಂದ ವಿಶೇಷ ಪೂಜೆ ನಡೆಸಲಾಯಿತು. ಸ್ವಾಮೀಜಿಯವರ ಗದ್ದುಗೆ ಬಳಿ ವಿಭೂತಿ ಗಟ್ಟಿ ಮತ್ತು ಹೂವುಗಳನ್ನು ಬಳಸಿ ಸ್ವಾಮೀಜಿ ಭಾವಚಿತ್ರವನ್ನು ರಚಿಸಲಾಗಿತ್ತು. ಶ್ರೀ ಸಿದ್ದಲಿಂಗ ಸ್ವಾಮೀಜಿ ಬೆಳಿಗ್ಗೆಯೇ ಗದ್ದುಗೆ ಬಳಿ ಬಂದು ಕಾರ್ಯಕ್ರಮದ ವ್ಯವಸ್ಥೆ ಪರಿಶೀಲಿಸಿದರು.
ಮುಂಜಾನೆಯಿಂದಲೂ ಭಕ್ತ ಗಣವೇ ಸಿದ್ದಗಂಗಾ ಮಠಕ್ಕೆ ಹರಿದು ಬರುತ್ತಿದೆ. ಗದ್ದುಗೆ ಬಳಿ ಬಂದು ಭಕ್ತರು ದರ್ಶನ ಪಡೆಯುತ್ತಿದ್ದಾರೆ.