ಶಿವಮೊಗ್ಗ : ಕಾರ್ಖಾನೆಯಲ್ಲಿ ಕೆಲಸ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಿನ್ನೆ(ಶುಕ್ರವಾರ) ರಾತ್ರಿ ಭದ್ರಾವತಿಯಲ್ಲಿ ನಡೆದಿದೆ. ನಗರದ ಲೋಹರ್ ಹುತ್ತಾ ದನದ ಮೇವು ತಯಾರಿಸುವ ಆರ್‌ಎಎಸ್ ಫಾರ್ಮಾಸಿಟಿಕಲ್ನ ಕಾರ್ಮಿಕ ಸೆಂಥಿಲ್ ಕುಮಾರ್(35) ಎಂಬುವರು ಮೃತ ದುರ್ದೈವಿ.
ನಿನ್ನೆ ರಾತ್ರಿ ಪಾಳೆಯಲ್ಲಿ ಕೆಲಸ ಮಾಡುವ ವೇಳೆ ಸೆಂಥಿಲ್ ಯಂತ್ರಕ್ಕೆ ಸಿಲುಕಿದ್ದಾರೆ. ಈ ವೇಳೆ ಅವರ ಹೊಟ್ಟೆ ಭಾಗಕ್ಕೆ ತೀವ್ರತರವಾದ ಗಾಯವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನೆ ಮಾಡುವಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕರಿಗಿಲ್ಲ ಸೂಕ್ತ ಸುರಕ್ಷತೆ, ಭದ್ರತೆ : ಭದ್ರಾವತಿ ಆರ್‌ಎಎಸ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಸಲಕರಣೆಗಳು ಇಲ್ಲ. ಅಲ್ಲದೇ ಪಿಎಫ್ ಮತ್ತು ಇಎಸ್ಐ ಸಹ ಮಾಲೀಕರು ಒದಗಿಸುತ್ತಿರಲಿಲ್ಲ ಎಂಬ ಆರೋಪವಿದೆ. ಆದರೆ, ಕಾರ್ಮಿಕ ಸಂಘಟನೆಗಳು ಮಾತ್ರ ಸುಮ್ಮನೆ ಇರುವುದು ಕಾರ್ಮಿಕರ ದುರಂತವಾಗಿದೆ.