ETV Bharat / city

ಶಿವಮೊಗ್ಗ: ಆಳುವವರನ್ನು ನಂಬದೆ ತಾವೇ ಬಸ್ ನಿಲ್ದಾಣ ನಿರ್ಮಿಸಿಕೊಂಡ ಗ್ರಾಮಸ್ಥರು - ತಂಗುದಾಣ

ಬಸ್ ನಿಲ್ದಾಣಕ್ಕಾಗಿ ಪಂಚಾಯತ್​ನಲ್ಲಿ ಮಾಡಿದ್ದ ಮನವಿಗೆ ಪುರಸ್ಕಾರ ಸಿಗಲಿಲ್ಲವೆಂದು ಗ್ರಾಮಸ್ಥರೇ ತಂಗುದಾಣ ನಿರ್ಮಿಸಿದ್ದಾರೆ.

villagers built bus stand in Shivamogga
ತಂಗುದಾಣ ನಿರ್ಮಿಸಿದ ಗ್ರಾಮಸ್ಥರು
author img

By

Published : Jul 9, 2022, 7:50 PM IST

Updated : Jul 9, 2022, 7:56 PM IST

ಶಿವಮೊಗ್ಗ: ಆಳುವವರು ನಂಬಿ ಕೆಲಸವಾಗದೇ ಹೋದಾಗ ಜನ ತಮ್ಮ ದಾರಿಯನ್ಬು ತಾವೇ ನೋಡಿಕೊಳ್ಳುತ್ತಾರೆ ಎಂಬುದಕ್ಕೆ ಯಡವತ್ತಿ ಗ್ರಾಮಸ್ಥರು ತಕ್ಕ ಉದಾಹರಣೆಯಾಗಿದ್ದಾರೆ. ತೀರ್ಥಹಳ್ಳಿ ತಾಲೂಕು ಕನ್ನಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ ಗ್ರಾಮಸ್ಥರು ತಾವೇ ಬಸ್ ನಿಲ್ದಾಣವನ್ನು ನಿರ್ಮಿಸಿಕೊಂಡು ಪಂಚಾಯತ್​ಗೆ ಸೆಡ್ಡು ಹೊಡೆದಿದ್ದಾರೆ.

ಯಡವತ್ತಿ ಗ್ರಾಮಸ್ಥರಿಗೆ ಬಸ್​ ನಿಲ್ದಾಣ ಇತ್ತಾದರೂ ಅದು ವರ್ಷಗಳ ಹಿಂದೆ ಬಿದ್ದು ಹೋಗಿದೆ. ಗ್ರಾಮಸ್ಥರು ನಿಲ್ದಾಣಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಏನು ಪ್ರಯೋಜನವಾಗಿರಲಿಲ್ಲ. ಇದಕ್ಕೆ ಪರಿಹಾರ ಎಂಬತೆ ಗ್ರಾಮಸ್ಥರೆಲ್ಲ ಒಟ್ಟುಗೂಡಿ ತಾತ್ಕಾಲಿಕ ನಿಲ್ದಾಣವನ್ನು ನಿರ್ಮಿಸಿದ್ದಾರೆ. ತಾವೇ ಚಪ್ಪರ ರೀತಿ ನಿರ್ಮಾಣ ಮಾಡಿ ಅದಕ್ಕೆ ಟಾರ್ಪಲ್ ಕಟ್ಟಿ ಕೊಂಡು ಮಳೆಯಲ್ಲಿ ನೆನೆಯದಂತೆ ನಿರ್ಮಿಸಿಕೊಂಡಿದ್ದಾರೆ.

ಆಳುವವರನ್ನು ನಂಬಂದೆ ತಾವೇ ಬಸ್ ನಿಲ್ದಾಣ ನಿರ್ಮಿಸಿಕೊಂಡ ಗ್ರಾಮಸ್ಥರು

ಗ್ರಾಮ ಪಂಚಾಯಿತಿರವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಮಳೆಗಾಲದಲ್ಲಿ ಮಕ್ಕಳು ಸ್ಕೂಲ್ ಕಾಲೇಜಿಗೆ ಹೋಗಲು ಹಾಗೂ ವಯಸ್ಸಾದವರು ಮಳೆಯಿಂದ ರಕ್ಷಿಸಿ ಕೊಳ್ಳಲು ಒಂದು ಬಸ್ ನಿಲ್ದಾಣದ ಅವಶ್ಯಕತೆ ಇತ್ತು. ಇದರಿಂದ ನಾವು ಬಸ್ ನಿಲ್ದಾಣ‌ ನಿರ್ಮಿಸಿಕೊಂಡಿದ್ದೆವೆ ಎನ್ನುತ್ತಾರೆ ಗ್ರಾಮಸ್ಥರು.

villagers built bus stand in Shivamogga
ತಂಗುದಾಣ ನಿರ್ಮಿಸಿದ ಗ್ರಾಮಸ್ಥರು

ಬಸ್ ನಿಲ್ದಾಣಕ್ಕೆ ಅನುದಾನ ಕೇಳಲಾಗಿದೆ: ಕನ್ನಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ ಸೇರಿದಂತೆ ಇನ್ನೇಡರು ಗ್ರಾಮಗಳ ಬಸ್ ನಿಲ್ದಾಣಕ್ಕೆ ಪ್ರಸ್ತಾವನೆ ಇದೆ. ಆದರೆ ಗ್ರಾಮ ಪಂಚಾಯಿತಿಯಲ್ಲಿ ಹಣದ ಕೊರತೆ ಇದೆ. ಇದರಿಂದ ಗ್ರಾಮ ಪಂಚಾಯಿತಿಯು ಸಂಸದರು ಹಾಗೂ ಪರಿಷತ್ ಸದಸ್ಯರಿಗೆ ಮನವಿ ಮಾಡಲಾಗಿದೆ. ಅವರು ಅನುದಾನ ನೀಡುವುದಾಗಿ ತಿಳಿಸಿದ್ದಾರೆ. ಅದಷ್ಡು ಬೇಗ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಕನ್ಜಂಗಿ ಗ್ರಾಮ ಪಂಚಾಯಿತಿ ಪಿಡಿಒ ಸುರೇಶ್ ಈ ಟಿವಿ ಭಾರತ್ ಗೆ ದೂರವಾಣಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಳೆಯಾರ್ಭಟ: ರೆಸಾರ್ಟ್ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಗುಡ್ಡಕುಸಿತ!

Last Updated : Jul 9, 2022, 7:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.