ಶಿವಮೊಗ್ಗ: ನಗರದ ಸಿದ್ದಯ್ಯ ರಸ್ತೆ, ಉಪ್ಪಾರ ಕೇರಿ ಬಳಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜು ಪುಡಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮತ್ತಿಬ್ಬರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
ಸೂಳೆಬೈಲಿನ ಮಹಮ್ಮದ್ ಸಲೀಂ (30), ಭರ್ಮಪ್ಪನಗರದ ಅಕ್ರಿ ಖಾನ್ (32) ಬಂಧಿತರು. ಮೇ 19ರ ರಾತ್ರಿ 1.30ರ ಸುಮಾರಿಗೆ ಬೈಕ್ನಲ್ಲಿ ಬಂದ ಯುವಕರು, ಮನೆಗಳ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದ 11 ಕಾರು, 6 ಬೈಕ್ ಹಾಗೂ ನಾಲ್ಕಕ್ಕೂ ಅಧಿಕ ಆಟೋಗಳ ಗಾಜು ಒಡೆದಿದ್ದರು.
ವಾಹನಗಳ ಗಾಜು ಧ್ವಂಸಗೊಳಿಸಿದ ನಾಲ್ವರ ಪೈಕಿ ಇಬ್ಬರನ್ನು ಈಗಾಗಲೇ ಬಂಧಿಸಲಾಗಿತ್ತು. ಇದೀಗ ಮತ್ತಿಬ್ಬರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜು ಪುಡಿಗಟ್ಟಿದ ಇಬ್ಬರ ಬಂಧನ