ಶಿವಮೊಗ್ಗ: ನಗರದ ಸಿದ್ದಯ್ಯ ರಸ್ತೆ, ಉಪ್ಪಾರ ಕೇರಿ ಬಳಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜು ಪುಡಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಇಬ್ಬರನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ.
ಕೆ.ಆರ್.ಪುರಂನ ಶಾಹಿಲ್ ಖಾನ್ (21) ಹಾಗು ಭರ್ಮಪ್ಪ ನಗರದ ಮನ್ಸೂರ್ ಅಹಮ್ಮದ್ (32) ಬಂಧಿತರು. ಇವರ ವಿರುದ್ದ ದೊಡ್ಡಪೇಟೆ ಠಾಣೆಯಲ್ಲಿ 6 ಪ್ರಕರಣ ಹಾಗೂ ಕೋಟೆ ಠಾಣೆಯಲ್ಲಿ 1 ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಗಾಜು ಜಖಂಗೊಳಿಸಿದ ಕಿಡಿಗೇಡಿಗಳು