ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ನ್ಯೂ ಟೌನ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಲುವರಾಜ್ ಅಲಿಯಾಸ್ ಪ್ರವೀಣ್ (23) ಹಾಗೂ ಧೀರಜ್ ಸಿಂಗ್ (21) ಬಂಧಿತರು. ಭದ್ರಾವತಿಯ ಸಿದ್ದಾಪುರದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ನ್ಯೂ ಟೌನ್ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಬಂಧಿತರಿಂದ 1 ಕೆ.ಜಿ. 880 ಗ್ರಾಂ ಗಾಂಜಾ, 1200 ರೂ. ನಗದು ವಶಕ್ಕೆ ಪಡೆದು NDPS ಕಾಯ್ದೆಯಡಿ ದೂರು ದಾಖಲಿಸಲಾಗಿದೆ.
ಇನ್ನು ಭದ್ರಾವತಿ ಡಿವೈಎಸ್ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಹೆಚ್.ಸಿ. ವೆಂಕಟೇಶ್, ಮಂಜುನಾಥ್, ಪಿ.ಸಿ. ಸುನಿಲ್ ಕುಮಾರ್, ಪಾಲಾಕ್ಷ ನಾಯ್ಕ, ಬಸವರಾಜ್, ಅಶೋಕ ಹಾಗೂ ಮಧು ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಜೊತೆಗೆ ಗಾಂಜಾ ಮಾರಾಟದ ಬಗ್ಗೆ ಮಾಹಿತಿ ಇದ್ದರೆ ತಮಗೆ ನೇರವಾಗಿ ದೂರವಾಣಿ ಕರೆ ಮಾಡಬಹುದು ಎಂದು ಎಸ್ಪಿ ಕೆ.ಎಂ. ಶಾಂತರಾಜು ಸಾರ್ವಜನಿಕರಿಗೆ ತಿಳಿಸಿದ್ದಾರೆ.