ಶಿವಮೊಗ್ಗ: ತೋಟಕ್ಕೆ ಬಂದಿದ್ದ ಕೂಲಿ ಕಾರ್ಮಿಕ ಹೃದಯಘಾತದಿಂದ ಸಾವನ್ನಪ್ಪಿದ ವಿಷಯ ಹೇಳಲು ಹೋದ ಮಾಲೀಕ ಸಹ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಮನಕಲಕುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕು ಆರಗ ಗ್ರಾಮದ ನಿವೃತ್ತ ಶಿಕ್ಷಕ ದುಗ್ಗಪ್ಪ ಗೌಡ (67) ಎಂಬವರ ತೋಟಕ್ಕೆ ಭರ್ಮಾ ಎಂಬಾತ ಕೂಲಿ ಕೆಲಸಕ್ಕೆ ಬಂದಿದ್ದ. ಕೆಲಸ ಮಾಡುವ ವೇಳೆ ಭರ್ಮಾ ಹೃದಯಘಾತದಿಂದ ದಿಢೀರ್ ನೆಲಕ್ಕೆ ಕುಸಿದು ಬಿದ್ದು, ತೋಟದಲ್ಲಿಯೇ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಒಂದೇ ಕುಟುಂಬದ ಮೂವರಿಗೆ ವಿದ್ಯುತ್ ಶಾಕ್: ತಂದೆ, 2 ವರ್ಷದ ಮಗು ಸಾವು
ಭರ್ಮಾ ಸಾವಿನ ಸುದ್ದಿ ತಿಳಿಸಲು ಹೋಗುತ್ತಿದ್ದ ವೇಳೆ ದುಗ್ಗಪ್ಪ ಗೌಡರಿಗೂ ಹೃದಯಾಘಾತವಾಗಿ ಪ್ರಾಣಬಿಟ್ಟಿದ್ದಾರೆ.