ETV Bharat / city

ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ಕೆ ಸಹಕರಿಸಿ: ಜಿಲ್ಲಾಧಿಕಾರಿ ಮನವಿ

ಸೆಪ್ಟೆಂಬರ್ 1ರಿಂದ ಅಕ್ಟೋಂಬರ್ 15ರ ತನಕ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮತದಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಹೇಳಿದರು.

ಸುದ್ದಿಗೋಷ್ಟಿ ನಡೆಸಿದ ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್
author img

By

Published : Oct 12, 2019, 11:21 PM IST

ಶಿವಮೊಗ್ಗ: ಇಲ್ಲಿವರೆಗೆ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವ ಕಾರ್ಯ ಮಾಡಲಾಗುತ್ತಿತ್ತು. ಆದ್ರೆ ಇದೇ ಮೊದಲ ಬಾರಿಗೆ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ಮಾಡಲಾಗುತ್ತಿದೆ. ಮತದಾರರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಜಿಲ್ಲಾ ಮತದಾರರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಶಿವಮೊಗ್ಗ ಜಿಲ್ಲಾಧಿಕಾರಿ ಶಿವಕುಮಾರ್

ಜಿಲ್ಲಾ ಪಂಚಾಯತ್​ನ ಸಹ್ಯಾದ್ರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಶಿವಕುಮಾರ್​, ಸೆಪ್ಟೆಂಬರ್ 1ರಿಂದ ಅಕ್ಟೋಂಬರ್ 15ರ ತನಕ ಮತದಾರರ ಪಟ್ಟಿ ಪರಿಶೀಲನಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಚುನಾವಣಾ ಆಯೋಗದ ಆದೇಶದ ಮೇರೆಗೆ ಮತದಾರರ ಪಟ್ಟಿ ಪರಿಶೀಲನೆ ಹಾಗೂ ಪರಿಷ್ಕರಣೆ ಮಾಡಲಾಗುತ್ತಿದೆ. ಈ ವೇಳೆ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ, ಇದ್ದರೆ ಹೆಸರು, ವಿಳಾಸ ಸರಿಯಾಗಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಮತದಾರರ ಪರಿಷ್ಕರಣೆ ಹಾಗೂ ಪರಿಶೀಲನೆಗೆ ಬಿಎಲ್​ಒಗಳು ಮನೆ ಮನೆ ಭೇಟಿ ನೀಡುತ್ತಾರೆ. ಬಿಎಲ್​ಒಗಳು ತಮಗೆ ಕೇಳಿದ ಮಾಹಿತಿಯನ್ನು ನೀಡಿ ಸಹಕರಿಸಬೇಕು. ಸೆಪ್ಟೆಂಬರ್​​ನಿಂದ ಇಲ್ಲಿವರೆಗೂ 3 ಲಕ್ಷದಷ್ಟು ಮತದಾರರು ವಿವಿಧ ರೀತಿಯ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಬಿಎಲ್ಒಗಳಿಗೆ ಮಾಹಿತಿ ನೀಡಲು ಆಗದೆ ಇರುವವರು, ಆನ್​ಲೈನ್ ಮೂಲಕ ಅಥವಾ ತಾಲೂಕು ಕಚೇರಿಗೆ ಬಂದು ಮಾಹಿತಿ ನೀಡಬಹುದು. ಹೆಚ್ಚಿನ ಮಾಹಿತಿ ಪಡೆಯಲು 1950ಕ್ಕೆ ಕರೆ ಮಾಡಿ ಕೇಳಬಹುದಾಗಿದೆ ಎಂದರು. ಮತದಾರರ ಪಟ್ಟಿ ಪರಿಶೀಲನೆಗಾಗಿ ನವೆಂಬರ್ 2, 3, 9 ಹಾಗೂ 10 ರಂದು ವಿಶೇಷ ಕ್ಯಾಂಪೇನ್ ನಡೆಸಲಾಗುತ್ತದೆ ಎಂದರು.

Intro:ಇಷ್ಟು ದಿನ ಮತದಾರರ ಪಟ್ಟಿಗೆ ಹೊಸ ಸೇರ್ಪಡೆ ಹಾಗೂ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವ ಕಾರ್ಯ ಮಾಡಲಾಗುತ್ತಿತ್ತು. ಆದ್ರೆ, ಇದೆ ಮೊದಲ ಬಾರಿಗೆ ಮತದಾರರ ಪಟ್ಟಿಯನ್ನು ಪರಿಶೀಲನಾ ಕಾರ್ಯ ಮಾಡಲಾಗುತ್ತಿದೆ. ಇದನ್ನು ಮತದಾರರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು‌ ಆದ ಶಿವಕುಮಾರ್ ಜಿಲ್ಲಾ ಮತದಾರರಲ್ಲಿ ವಿನಂತಿ ಮಾಡಿ ಕೊಂಡಿದ್ದಾರೆ. ಜಿಲ್ಲಾ ಪಂಚಾಯತ್ ನ ಸಹ್ಯಾದ್ರಿ ಸಭಾಂಗಣದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು.ಸೆಪ್ಟೆಂಬರ್ 1 ರಿಂದ ಅಕ್ಟೋಂಬರ್ 15 ರ ತನಕ ಮತದಾರರ ಪಟ್ಟಿಯನ್ನು ಪರಿಶೀಲನಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದರು. ಚುನಾವಣಾ ಆಯೋಗದ ಆದೇಶದ ಮೇರೆಗೆ ಮತದಾರರ ಪಟ್ಟಿಯನ್ನು ಪರಿಶೀಲನೆ ಹಾಗೂ ಪರಿಷ್ಕರಣೆ ಮಾಡಲಾಗುತ್ತಿದೆ . ಈ ವೇಳೆ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ, ಇದ್ದರೆ ಹೆಸರು, ವಿಳಾಸ ಸರಿಯಾಗಿ ಇದೆಯೇ ಎಂಬುದನ್ನು ಪರಿಶೀಲನೆ ಮಾಡಬಹುದಾಗಿದೆ.

Body:ಮತದಾರರ ಪರಿಷ್ಕರಣೆ ಹಾಗೂ ಪರಿಶೀಲನೆಗೆ ಬಿಎಲ್ ಓಗಳು ತಮ್ಮ ಮನೆ ಮನೆಗೆ ಬರುತ್ತಾರೆ. ಬಿಎಲ್ಓಗಳು ತಮಗೆ ಕೇಳಿದ ಮಾಹಿತಿಯನ್ನು ನೀಡಿ ಸಹಕರಿಸಬೇಕು. ಸೆಪ್ಟೆಂಬರ್ ನಿಂದ ಇದುವರೆಗೂ 3 ಲಕ್ಷದಷ್ಟು ಮತದಾರರು ವಿವಿಧ ರೀತಿಯ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಬಿಎಲ್ ಓ ಗಳಿಗೆ ಮಾಹಿತಿ ನೀಡಲು ಆಗದೆ ಇರುವವರು, ಆನ್ ಲೈನ್ ಮೂಲಕ, ತಾಲೂಕು ಕಚೇರಿ ನೀಡಬಹುದು. ಹೆಚ್ಚಿನ ಮಾಹಿತಿ ಪಡೆಯಲು 1950 ಗೆ ಪೋನ್ ಮಾಡಿ ಕೇಳಬಹುದಾಗಿದೆ ಎಂದರು.ಮತದಾರರ ಪಟ್ಟಿಯನ್ನು ಪರಿಶೀಲನೆಗಾಗಿ ನವೆಂಬರ್ 2, 3, 9 ಹಾಗೂ 10 ರಂದು ವಿಶೇಷ ಕ್ಯಾಂಪೇನ್ ನ್ನು ನಡೆಸಲಾಗುವುದು.

Conclusion:ಜಿಲ್ಲೆಯಲ್ಲಿ 14. 46. 859 ಒಟ್ಟು ಮತದಾರರು ಇದ್ದಾರೆ. ಇದರಲ್ಲಿ 3 ಲಕ್ಷದ 6 ಸಾವಿರದ 214 ಮತದಾರರು ಪರಿಷ್ಕರಣೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 2, 76, 300 ಜನ ಈಗಾಗಲೇ ತಮ್ಮ ಮಾಹಿತಿ ಸರಿಯಾಗಿ ಇದೆ ಎಂದು ತಿಳಿಸಿದ್ದಾರೆ. ಅರ್ಜಿ 6 ರಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆ ಹಾಗೂ ಅರ್ಜಿ 8 ರಲ್ಲಿ ಮತದಾರರ ಪಟ್ಟಿಯಿಂದ ಕೈ ಬಿಡಲಾಗುತ್ತದೆ. ಈಗಾಗಲೇ ಸ್ವೀಪ್ ಮೂಲಕ ಕಾಲೇಜು, ಗ್ರಾಮ ಪಂಚಾಯತ್ ಸಭೆ ಹಾಗೂ ಸ್ವ ಸಹಾಯ ಸಂಘಗಳಲ್ಲಿ ಅರಿವು ಮೂಡಲಾಗುತ್ತಿದೆ ಎಂದರು. ಮತದಾರರ ಪಟ್ಟಿ ಪರಿಷ್ಕರಣೆ ಅರ್ಜಿ‌ ಸ್ವೀಕರ ಮಾಡುವುದರಲ್ಲಿ‌ 13 ನೇ ಸ್ಥಾನ ಹಾಗೂ ಮತದಾರರ ಪಟ್ಟಿ ಒಟ್ಟಾರೆ ಪ್ರಗತಿಯಲ್ಲಿ ರಾಜ್ಯದಲ್ಲಿ 15 ನೇ ಸ್ಥಾನದಲ್ಲಿ‌ ಇದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಶ್ರೀಮತಿ ವೈಶಾಲಿರವರು ಹಾಜರಿದ್ದರು.

ಬೈಟ್: ಶಿವಕುಮಾರ್. ಜಿಲ್ಲಾಧಿಕಾರಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.