ಶಿವಮೊಗ್ಗ: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಾಧನೆ ಮಾಡಿ ದೇಶಕ್ಕೆ ಹೆಸರು ತರುವ ಕೆಲಸ ಮಾಡಬೇಕು ಎಂದು ಕ್ರೀಡಾ ಸಚಿವ ನಾರಾಯಣಗೌಡ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಎರಡು ದಿನ ಶಿವಮೊಗ್ಗ ಪ್ರವಾಸದಲ್ಲಿದ್ದ ಸಚಿವರು ನಿನ್ನೆ ನಗರದ ನೆಹರು ಕ್ರೀಡಾಂಗಣ ಮೈದಾನದಲ್ಲಿರುವ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಇದೇ ವೇಳೆ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.
ವಸತಿ ನಿಲಯದ ಸ್ವಚ್ಛತೆ ಸೇರಿದಂತೆ ವಿದ್ಯಾರ್ಥಿಗಳ ಹಾಸಿಗೆ ಹಾಗೂ ಕೊಠಡಿಗಳನ್ನು ವಿಕ್ಷೀಸಿದ ಅವರು, ವಿದ್ಯಾರ್ಥಿಗಳಿಗೆ ವಸತಿ ನಿಯಮದಲ್ಲಿ ಏನಾದರು ಸಮಸ್ಯೆ ಇದೆಯಾ ಎಂದು ಪ್ರಶ್ನಿಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಮುಂದಿನ ವರ್ಷ ಖೇಲೋ ಇಂಡಿಯಾ ಬರುತ್ತಿದೆ. ಹಾಗಾಗಿ ಯಾರು ಯಾರು ತಯಾರಿ ನಡೆಸುತ್ತಿದ್ದಿರಾ?, ನೀವೇಲ್ಲಾ ಉತ್ತಮ ಕ್ರೀಡಾಪಟುಗಳಾಗಿ ದೇಶಕ್ಕೆ ಹೆಸರು ತರಬೇಕು. ಜೊತೆಗೆ ಕ್ರೀಡೆಯಲ್ಲಿ ನೀವು ರಾಜ್ಯ, ದೇಶವನ್ನು ಪ್ರತಿನಿಧಿಸಿದರೆ ನಿಮಗೆ ಕ್ರೀಡಾ ಕೂಟದಡಿಯಲ್ಲಿ ಉದ್ಯೋಗವು ಸಿಗುತ್ತೆ. ಆದ್ದರಿಂದ ಉತ್ತಮ ಕ್ರೀಡಾಪಟುಗಳಾಗಿ ಎಂದು ಹೇಳಿದರು.
ಶಾಸಕ ಅಶೋಕ ನಾಯ್ಕ, ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್, ಜಿಲ್ಲಾ ಪಂಚಾಯತಿ ಸಿಇಒ ವೈಶಾಲಿ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಕ್ರೀಡೆಯಲ್ಲಿ ಸಾಧಿಸಿ ದೇಶಕ್ಕೆ ಹೆಸರು ತರಬೇಕು: ಕ್ರೀಡಾ ಸಚಿವ ನಾರಾಯಣಗೌಡ - ನಾರಾಯಣ ಗೌಡ
ಶಿವಮೊಗ್ಗ ಪ್ರವಾಸದಲ್ಲಿದ್ದ ಕ್ರೀಡಾ ಸಚಿವ ನಾರಾಯಣಗೌಡ ನಿನ್ನೆ ನಗರದ ನೆಹರು ಕ್ರೀಡಾಂಗಣ ಮೈದಾನದಲ್ಲಿರುವ ಕ್ರೀಡಾ ವಸತಿ ಶಾಲೆಗೆ ಭೇಟಿ ನೀಡಿದ್ದರು. ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.