ETV Bharat / city

ಬೆಳ್ಳಂಬೆಳಗ್ಗೆಯೇ ಪೊಲೀಸ್ ಠಾಣೆಗೆ ಬಂದ 'ಅತಿಥಿ' ಸೆರೆಹಿಡಿದ ಕಿರಣ್ - ಉರಗ ತಜ್ಞ ಕಿರಣ್​​

ಬೆಳ್ಳಂಬೆಳಗ್ಗೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಗೆ ಬಂದ 4 ಅಡಿ ಉದ್ದದ ಕೆರೆ ಹಾವನ್ನು ಉರಗ ತಜ್ಞ ಕಿರಣ್​​ ಸೆರೆ ಹಿಡಿದಿದ್ದಾರೆ.

ಪೊಲೀಸ್ ಠಾಣೆಗೆ ಬಂದ ಅತಿಥಿಯನ್ನ ಸೆರೆಹಿಡಿದ ಸ್ನೇಕ್ ಕಿರಣ್
author img

By

Published : Sep 14, 2019, 7:15 PM IST

ಶಿವಮೊಗ್ಗ: ಜಯನಗರ ಪೊಲೀಸ್ ಠಾಣೆಗೆ ಇಂದು ಬೆಳಗ್ಗೆಯೇ ಅತಿಥಿಯ ಆಗಮನವಾಗಿತ್ತು. ಕಳ್ಳರು, ರೌಡಿಗಳನ್ನು ಹಿಡಿದು ತರುವ ಪೊಲೀಸರು, ತಮ್ಮ ಠಾಣೆಗೆ ಹಾವು ಬಂದಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಅರೆಕ್ಷಣ ನಿಬ್ಬೆರಗಾದ್ರು.

ಪೊಲೀಸ್ ಠಾಣೆಗೆ ಬಂದ ಅತಿಥಿಯನ್ನ ಸೆರೆಹಿಡಿದ ಸ್ನೇಕ್ ಕಿರಣ್

ಠಾಣೆಗೆ ಬಂದ 4 ಅಡಿ ಉದ್ದದ ಕೆರೆ ಹಾವೊಂದು ಸೀದಾ ಜೆರಾಕ್ಸ್ ಮೆಶಿನ್ ಒಳಗೆ ಸೇರಿಕೊಂಡಿದೆ. ತಕ್ಷಣ ಉರಗ ತಜ್ಞ ಕಿರಣ್​​ ಅವರಿಗೆ ಫೋನಾಯಿಸಲಾಗಿದೆ.

ಸ್ನೇಕ್ ಕಿರಣ್ ಬರುವಷ್ಟರಲ್ಲಿ ಹಾವು ಕ್ಯಾಬಿನ್​ನ ಪ್ಲಾಸ್ಟಿಕ್ ಬಾಕ್ಸ್ ಒಳಗೆ ಸೇರಿಕೊಂಡಿತ್ತು. ನಂತರ ಅದನ್ನು ಹುಷಾರಾಗಿ ಬಿಡಿಸಿ, ಹೊರಗೆ ತೆಗೆಯುತ್ತಿದ್ದಂತೆಯೇ ಹಾವು ಓಡಲು ಶುರು ಮಾಡಿದೆ. ಬಳಿಕ ಹಾವು ಹಿಡಿದ ಸ್ನೇಕ್ ಕಿರಣ್, ತನ್ನ ಕೈಯಲ್ಲಿ ಕೆಲ ಕಾಲ ಆಟ ಆಡಿಸಿದರು.

ಪೊಲೀಸ್ ಠಾಣೆಯ ಹಿಂಭಾಗ ಸ್ವಲ್ಪ ಗಿಡ-ಗಂಟಿಗಳು ಬೆಳೆದುಕೊಂಡಿದ್ದು, ಹಾವು ಅಲ್ಲಿಂದಲೇ ಆಹಾರ ಅರಸಿ ಬಂದಿರಬಹುದು. ಈ ಭಾಗದಲ್ಲಿ ಹೆಚ್ಚು ಇಲಿಗಳು ಇರಬಹುದು. ಜನರನ್ನು ಕಂಡು ಗಾಬರಿಯಾಗಿ ಒಳಗೆ ಸೇರಿ‌ಕೊಂಡಿದೆ ಎಂದು ಹೇಳಿದ ಸ್ನೇಕ್ ಕಿರಣ್, ಹಾವನ್ನು ಬಟ್ಟೆ ಚೀಲದಲ್ಲಿ ಹಾಕಿ‌ಕೊಂಡು ಹೋದರು.

Intro:ಪೊಲೀಸ್ ಠಾಣೆಗೆ ಬೆಳ್ಳಂಬೆಳ್ಳಗ್ಗೆ ಹಾವೊಂದು ನುಗ್ಗಿತ್ತು. ಕಳ್ಳರು, ರೌಡಿಗಳನ್ನು ಹಿಡಿದು ತರುವ ಪೊಲೀಸರು ಹಾವು ತಮ್ಮ ಠಾಣೆಗೆ ಬಂದಿದೆ ಎಂದು ಗೂತ್ತಾಗುತ್ತಿದ್ದಂತೆಯೇ ಒಂದು ಕ್ಷಣ ಹೌಹಾರಾರಿದ್ದರು. ಶಿವಮೊಗ್ಗದ‌ ಜಯನಗರ ಪೊಲೀಸ್ ಠಾಣೆಗೆ ಇಂದು ಬೆಳಗ್ಗೆಯೇ ಕರೆಯದ ಅತಿಥಿಯೊಂದು ಬಂದಿತ್ತು.‌ಆ ಅತಿಥಿ ಬಂದ ತಕ್ಷಣ ಎಲ್ಲಾರು ತದಕ್ಕೆ‌ ದಾರಿ ಬಿಟ್ಟು ಸುಮ್ಮನೆ ನಿಂತು ಬಿಟ್ಟಿದ್ದಾರೆ. ಜಯನಗರ ಪೊಲೀಸ್ ಠಾಣೆಗೆ ಬಂದ ಹಾವು ಸೀದಾ ಜೆರಾಕ್ಸ್ ಮಿಷನ್ ಒಳಗೆ ಸೇರಿ ಕೊಂಡಿದೆ. ತಕ್ಷಣ ಹಾವುಗಳನ್ನು ಹಿಡಿಯುವ ಕಿರಣ್ ರವರಿಗೆ ಪೋನ್ ಮಾಡಿ ಕರೆಯಿಸಿದ್ದಾರೆ.

Body:ಸ್ನೇಕ್ ಕಿರಣ್ ಬರುವಷ್ಟರಲ್ಲಿ ಹಾವು ಕ್ಯಾಬಿನ್ ನ ಪ್ಲಾಸ್ಟಿಕ್ ಬಾಕ್ಸ್ ಒಳಗೆ ಸೇರಿ ಕೊಂಡಿತ್ತು. ನಂತ್ರ ಅದನ್ನು ಹುಷರಾಗಿ ಬಿಡಿಸಿ, ಹೊರಗೆ ತೆಗೆಯುತ್ತಿದ್ದಂತೆಯೇ ಹಾವು ಓಡಲು ಶುರು ಮಾಡಿತು. ಇದು ಕೆರೆ ಹಾವು ಸುಮಾರು 4 ಅಡಿ ಉದ್ದದ ಹಾವು ಆಗಿತ್ತು. ಪೊಲೀಸ್ ಠಾಣೆಯ ಹಿಂಭಾಗ ಸ್ವಲ್ಪ ಗಿಡ ಗಂಟಿಗಳು ಬೆಳೆದು ಕೊಂಡಿದ್ದು. ಹಾವು ಅಲ್ಲಿಂದಲೇ ಬಂದಿರಬಹುದು. ಹಾವು ಹಿಡಿದ ಸ್ನೇಕ್ ಕಿರಣ್ ತನ್ನ ಕೈಯಲ್ಲಿ ಕೆಲ ಕಾಲ ಆಟ ಆಡಿಸಿದನು. ಹಾವುನ್ನು ಹಿಡಿಯುತ್ತಿದ್ದಂತೆಯೇ ಪೊಲೀಸ್ ಸಿಬ್ಬಂದಿಗಳು‌ ನಿಬ್ಬೆರಗಾಗಿ ಹಾವನ್ನೆ ನೋಡುತ್ತಿದ್ದರು.

Conclusion:ಹಾವು ಈ ಭಾಗದಲ್ಲಿ ಆಹಾರ ಅರಸಿ ಬಂದಿರಬಹುದು. ಈ ಭಾಗದಲ್ಲಿ ಹೆಚ್ಚು ಇಲಿಗಳು ಇರಬಹುದು. ಇದರಿಂದ ಆಹಾರಕ್ಕಾಗಿ ಬಂದಿದೆ. ಹಾವು ಜನರನ್ನು ಕಂಡೊಡನೆ ಗಾಬರಿಯಾಗಿ ಒಳಗೆ ಸೇರಿ‌ಕೊಂಡಿದೆ ಎಂದು ಹೇಳುತ್ತಾ ಸ್ನೇಕ್ ಕಿರಣ್ ಹಾವನ್ನು ಬಟ್ಟೆ ಚೀಲದಲ್ಲಿ ಹಾಕಿ‌ಕೊಂಡು ಹೋದರು. ಬೈಟ್: ಸ್ನೇಕ್ ಕಿರಣ್. ಹಾವುಗಳ ರಕ್ಷಕ. ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.