ETV Bharat / city

ಬಿ.ಎಸ್.ಯಡಿಯೂರಪ್ಪ ಫೀನಿಕ್ಸ್ ಹಕ್ಕಿ ಇದ್ದಂತೆ: ಸಿರಿಗೆರೆ ಶ್ರೀ - gurubasava award to b s yadiyurappa

ಶಿವಮೊಗ್ಗದಲ್ಲಿ ಶನಿವಾರ ಗುರುಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಯಡಿಯೂರಪ್ಪನವರನ್ನು ಹಾಡಿ ಹೊಗಳಿದರು.

shivakumara shivacharya Praised b s yadiyurappa
ಯಡಿಯೂರಪ್ಪರನ್ನು ಹಾಡಿ ಹೊಗಳಿದ ಶಿವಕುಮಾರ ಶಿವಾಚಾರ್ಯ
author img

By

Published : Mar 6, 2022, 8:31 AM IST

ಶಿವಮೊಗ್ಗ: ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪನವರು ಫೀನಿಕ್ಸ್ ಹಕ್ಕಿ ಇದ್ದಂತೆ. ಯಾರು ಎಷ್ಟೇ ತೂಂದರೆ ಕೊಟ್ಟರೂ ಅದನ್ನು ಲೆಕ್ಕಿಸದೆ ಗರಿ ಬಿಚ್ಚಿ ಹಾರುತ್ತಾರೆ ಎಂದು ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕೊಂಡಾಡಿದರು.

ಬೆಕ್ಕಿನ‌ಕಲ್ಮಠದಲ್ಲಿ ಯಡಿಯೂರಪ್ಪನವರಿಗೆ ಗುರುಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಯಾರು ಅಧಿಕಾರದಲ್ಲಿ‌ ಇರುತ್ತಾರೋ ಅವರನ್ನು ಅಭಿನಂದಿಸುವುದು ಸಹಜ. ಆದರೆ ಅಧಿಕಾರದಲ್ಲಿ ಇಲ್ಲದವರನ್ನು ಅಭಿನಂದಿಸುತ್ತಿರುವುದನ್ನು ನೋಡುತ್ತಿರುವುದು ಇದೇ ಮೊದಲು. ಇದನ್ನು ತೋರಿಸಿಕೊಟ್ಟವರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಎಂದರು.

ಬೆಕ್ಕಿನ‌ಕಲ್ಮಠದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ

ಯಡಿಯೂರಪ್ಪನವರು ಶಿವ ಇದ್ದ ಹಾಗೆ. ಏನೇ ಕೇಳಿದ್ರೂ ತಥಾಸ್ತು ಅನ್ನುವವರು.‌ ಅವರು ಸಿರಿಗೆರೆ ಗುರುಗಳ ಮಾತನ್ನು ತೆಗೆದು ಹಾಕಿದವರಲ್ಲ. ಅವರಿಗೆ ಕಾನೂನು ಬಿಟ್ಟು ಬೇರೆ ಏನನ್ನೂ ನಾವು ಹೇಳಿಲ್ಲ ಎಂದು ಹೇಳಿದರು.

ಯಡಿಯೂರಪ್ಪನವರು ಒಂದು ರೀತಿ ಫೀನಿಕ್ಸ್ ಹಕ್ಕಿ ಇದ್ದಂತೆ. ಅವರನ್ನು ಎಷ್ಟು ಗೋಳು ಹೊಯ್ಕೊಂಡ್ರೂ, ಎಷ್ಟೇ ಸುಡಲು ಪ್ರಯತ್ನಪಟ್ಟರೂ ಸಹ ಗರಿಗೆದರಿ ಹಾರಿದ ಹಕ್ಕಿ ಅವರು ಎಂದರು. ಇದೇ ವೇಳೆ, ಸಿರಿಗೆರೆ ಹಾಗೂ ಜಗಳೂರು ಏತ ನೀರಾವರಿ ಯೋಜನೆ ಮುಂದಿನ ತಿಂಗಳು ಮುಕ್ತಾಯವಾಗುತ್ತದೆ. ಇದರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆ ತರಬೇಕೆಂದು ಯಡಿಯೂರಪ್ಪ ಹಾಗೂ ಈಶ್ವರಪ್ಪನವರು ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.

ಉಕ್ರೇನ್‌ನಲ್ಲಿ ಯುದ್ಧ ವಿಚಾರ ಪ್ರಸ್ತಾಪಿಸಿ, ನಮ್ಮ ವಿದ್ಯಾರ್ಥಿಗಳು ಅನಿವಾರ್ಯ ಪರಿಸ್ಥಿತಿಯಲ್ಲಿ ವಾರಗಟ್ಟಲೆ ಕುಡಿಯಲು ಶುದ್ಧ ‌ನೀರು, ಊಟ ಇಲ್ಲದೇ ಉಪವಾಸವಿದ್ದಾರೆ‌. ನವೀನ್​ ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಕುಶಾಲ್ ಹಾಗೂ ಹೀರೆಮಠ ಎಂಬಿಬ್ಬರು ನಮ್ಮ ಮಠದ ಭಕ್ತರು ಅಲ್ಲೇ ಇದ್ದಾರೆ.‌ ಅವರು ನಮ್ಮ ಜೊತೆ ಮಾತನಾಡಿದ್ದಾರೆ‌. ನಾವು ಪ್ರತಿ ದಿನ ಅವರ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಬೋನ್ಸಾಯ್ ಪದ್ಧತಿ ಮೂಲಕ ಔಷಧಿ ಗಿಡಗಳ ಕೃಷಿ: ಕುಮಟಾದಲ್ಲಿ ವಿಶಿಷ್ಟ ಪರಿಸರ ಪ್ರೇಮಿ

ಸನ್ಮಾನ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ಸನ್ಮಾನಕ್ಕೂ ಮುನ್ನ ನನ್ನ ಬಗ್ಗೆ ಹೇಳಿದ ಎಲ್ಲಾ ಗುಣಗಳು ನನ್ನಲ್ಲಿದೆ ಅಂತ ನಾನು ಭಾವಿಸುವುದಿಲ್ಲ. ಆದ್ರೆ, ನನ್ನಲ್ಲಿ ಇರುವ ಕೊರತೆಗಳನ್ನು ನೀಗಿಸಿಕೊಂಡು ಎಲ್ಲರ ಅಪೇಕ್ಷೆಗೆ ತಕ್ಕಂತೆ ನಡೆದುಕೊಳ್ಳುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಸಚಿವ ಈಶ್ವರಪ್ಪ, ಸಂಸದರಾದ ಬಿ.ವೈ.ರಾಘವೇಂದ್ರ, ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸೇರಿ ಅನೇಕರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.