ETV Bharat / city

ಮೂರು ಕೋಟಿ ವೆಚ್ಚದಲ್ಲಿ 'ಸ್ಮಾರ್ಟ್ ಗ್ರಂಥಾಲಯ ' - ಇಂಟರ್ನೆಟ್

ನಗರದ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು 'ಸ್ಮಾರ್ಟ್ ಸಿಟಿ' ಯೋಜನೆ ಅಡಿಯಲ್ಲಿ ಶಿವಮೊಗ್ಗ ನಗರದಲ್ಲಿ ಸ್ಮಾರ್ಟ್ ಗ್ರಂಥಾಲಯ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯ
author img

By

Published : Feb 24, 2019, 1:35 PM IST

ಶಿವಮೊಗ್ಗ ನಗರ 'ಸ್ಮಾರ್ಟ್ ಸಿಟಿ' ಆಯ್ಕೆಯಾಗಿ ಎರಡು ವರ್ಷಗಳು ಕಳೆದಿವೆ, ರಸ್ತೆ ,ಯುಜಿಡಿ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಇದೀಗ ನಗರದ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯ 24x7 ಸೇವೆಯನ್ನು ವಿಸ್ತರಿಸಲು ಸರ್ಕಾರ ಮುಂದಾಗಿದೆ.

1979ರಲ್ಲಿ ತೆರೆಯಲಾದ ನಗರ ಕೇಂದ್ರ ಗ್ರಂಥಾಲಯ. ಗ್ರಾಮಾಂತರ ಭಾಗದ ಸಾವಿರಾರು ಒದುಗರು ಗ್ರಂಥಾಲಯದ ಸೌಲಭ್ಯ ಪಡೆಯುತ್ತಿದ್ದಾರೆ. ಪ್ರಸ್ತುತ 20 ಸಾವಿರ ಸದಸ್ಯರನ್ನು ಕೇಂದ್ರ ಗ್ರಂಥಾಲಯ ಹೊಂದಿದೆ.

ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯ

ಐದು ಲಕ್ಷ ಕ್ಕೂ ಹೆಚ್ಚಿನ ಪುಸ್ತಕಗಳು ,ಕಂಪ್ಯೂಟರ್ ಲ್ಯಾಬ್, ಬೆಳಿಗ್ಗೆ 8.30 ಗಂಟೆ ಯಿಂದ ರಾತ್ರಿ ಎಂಟು ಗಂಟೆಯವರೆಗೆ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತದೆ. ದಿನವೊಂದಕ್ಕೆ 250 ರಿಂದ 300 ಕ್ಕೂ ಹೆಚ್ಚು ಓದುಗರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ, ಇನ್ನು ಪರೀಕ್ಷಾ ದಿನಗಳಲ್ಲಿ ಕೇಂದ್ರ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ದ್ವಿಗುಣವಾಗುತ್ತಿದ್ದು ಈ ಹಿನ್ನೆಲೆ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಕೇಂದ್ರ ಗ್ರಂಥಾಲಯವನ್ನ 24x7 ಗೆ ವಿಸ್ತರಿಸಲು ರೂಪರೇಷೆಗಳು ತಯಾರಾಗಿದ್ದು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು

ಇನ್ನು ಕೇಂದ್ರ ಗ್ರಂಥಾಲಯ ಆವರಣದಲ್ಲಿ ಸಾಕಷ್ಟು ಮರಗಳಿದ್ದು ಓದುಗರಿಗೆ ಸಾಕಷ್ಟು ಅನುಕೂಲವಾಗುವ ವಾತಾವರಣ ನಿರ್ಮಾಣವಾಗಿದೆ, ಹಾಗಾಗಿ ಗ್ರಂಥಾಲಯ ಆವರಣದಲ್ಲಿ 100ಕ್ಕೂ ಹೆಚ್ಚು ಮಂದಿ ಓದುಗರಿಗೆ ಓದುವಂತಹ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಆವರಣದ ನೆಲ ಭಾಗಕ್ಕೆ ಗ್ರೀನ್ ಮ್ಯಾಟ್ ಹಾಕಿ 'ಗ್ರೀನ್ ಲೈಬ್ರರಿ' ಸೃಷ್ಟಿಸಲಾಗುತ್ತದೆ, ಅಲ್ಲದೆ ಓದುಗರಿಗೆ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ದಿನದ 24 ಗಂಟೆಗಳ ಕಾಲ ಗ್ರಂಥಾಲಯ ಕಾರ್ಯ ನಿರ್ವಹಿಸಲಿದೆಯಂತೆ.

ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಹಗಲು ವೇಳೆ ಕೆಲಸ ಮಾಡಿ ರಾತ್ರಿ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಓದುಗರು. ಈಗಾಗಲೇ ನಗರ ಕೇಂದ್ರ ಗ್ರಂಥಾಲಯ 12 ಗಂಟೆ ಕಾಲಾವಧಿಯಲ್ಲಿ ದಿನವೊಂದಕ್ಕೆ 250 ಕ್ಕೂ ಹೆಚ್ಚು ಮಂದಿ ಓದುವ ಮೂಲಕ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

Intro:ಶಿವಮೊಗ್ಗ
ಸ್ಪೇಷಲ್ ಸ್ಟೋರಿ
ಮೂರು ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಆಗುತ್ತಿದೆ ನಗರ ಗ್ರಂಥಾಲಯ
ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಆಯ್ಕೆಯಾಗಿ ಎರಡು ವರ್ಷಗಳು ಕಳೆದಿವೆ, ರಸ್ತೆ ,ಯುಜಿಡಿ ಸೇರಿದಂತೆ ಅಂತಹ ಕಾಮಗಾರಿಗಳು ಈಗಾಗಲೇ ಚಾಲನೆ ನೀಡಲಾಗಿದೆ. ಇದೀಗ ನಗರದ ಓದುಗರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯ 24*7ಸೇವೆಯನ್ನು ವಿಸ್ತರಿಸಲು ರೂಪುರೇಷೆ ತಯಾರಿಸಲು ಮುಂದಾಗಿದೆ.

Body:ಹೌದು ನಗರ ಕೇಂದ್ರ ಗ್ರಂಥಾಲಯ1979ರಲ್ಲಿ ತೆರೆಯಲಾಯಿತು. ಅಲ್ಲಿಂದ ಇಲ್ಲಿಯವರೆಗೂ
ನಗರ ಹಾಗೂ ಗ್ರಾಮಾಂತರ ಭಾಗದ ಸಾವಿರಾರು ಮಂದಿ ಇಲ್ಲಿ ಓದುವ ಮೂಲಕ ಜ್ಞಾನಾರ್ಜನೆ ಮಾಡಿಕೊಳ್ಳುವುದರ ಜೊತೆಗೆ ಅನೇಕ ಮಂದಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.
ಪ್ರಸ್ತುತ 20 ಸಾವಿರ ಸದಸ್ಯರನ್ನು ಹೊಂದಿರುವ ಶಿವಮೊಗ್ಗ ನಗರ ಕೇಂದ್ರ ಗ್ರಂಥಾಲಯ ಓದುಗರಿಗೆ ಹಲವು ಸೌಲಭ್ಯಗಳನ್ನು ನೀಡುವ ಮೂಲಕ ಓದುಗರನ್ನು ತನ್ನತ್ತ ಸೆಳೆಯುತ್ತಿದೆ . ಐದು ಲಕ್ಷ ಕ್ಕೂ ಹೆಚ್ಚಿನ ಪುಸ್ತಕ ಗಳು ,ಕಂಪ್ಯೂಟರ್ ಲ್ಯಾಬ್, ಇನ್ನು ಬೆಳಿಗ್ಗೆ 8.30 ಗಂಟೆ ಯಿಂದ ರಾತ್ರಿ ಎಂಟರವರೆಗೆ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತದೆ ಈ ವೇಳೆ ದಿನವೊಂದಕ್ಕೆ 250 ರಿಂದ 300 ಕ್ಕೂ ಹೆಚ್ಚು ಓದುಗರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ ಇನ್ನು ಪರೀಕ್ಷಾ ದಿನಗಳಲ್ಲಿ ಕೇಂದ್ರ ಗ್ರಂಥಾಲಯದಲ್ಲಿ ಓದುಗರ ಸಂಖ್ಯೆ ದ್ವಿಗುಣವಾಗಿದೆ ಸ್ಮಾರ್ಟ್ ಸಿಟಿಗೆ ಶಿವಮೊಗ್ಗ ಆಯ್ಕೆಯಾಗಿರುವ ಹಿನ್ನೆಲೆ ಎಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಡಿಯಲ್ಲಿ ಕೇಂದ್ರ ಗ್ರಂಥಾಲಯವನ್ನ 24*7 ಗೆ ವಿಸ್ತರಿಸುವ ಬಗ್ಗೆ ಹಾಗೂ ಉನ್ನತೀಕರಿಸುವ ಬಗ್ಗೆ ರೂಪರೇಷೆಗಳು ತಯಾರಾಗಿದ್ದು ಕೆಲವೇ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎನ್ನುತ್ತಾರೆ ಸ್ಮಾರ್ಟ್ ಸಿಟಿ ಅಧಿಕಾರಿಗಳು

Conclusion:ಇನ್ನು ಕೇಂದ್ರ ಗ್ರಂಥಾಲಯ ಆವರಣದಲ್ಲಿ ಸಾಕಷ್ಟು ಮರಗಳು ಇರುವ ಕಾರಣ ಓದುಗರಿಗೆ ಸಾಕಷ್ಟು ಅನುಕೂಲವಾಗುವ ವಾತಾವರಣವಿದೆ ಹಾಗಾಗಿ ಗ್ರಂಥಾಲಯ ಆವರಣದಲ್ಲಿ 100ಕ್ಕೂ ಹೆಚ್ಚು ಮಂದಿ ಓದುಗರಿಗೆ ಓದುವಂತಹ ಸೌಲಭ್ಯಗಳನ್ನು ಕಲ್ಪಿಸಲಿದ್ದು ಆವರಣದ ನೆಲ ಭಾಗಕ್ಕೆ ಗ್ರೀನ್ ಮ್ಯಾಟ್ ಹಾಕಿ ಓದುಗರಿಗೆ ಗ್ರೀನ್ ಲೈಬ್ರರಿ ಸೃಷ್ಟಿಸಲಾಗುತ್ತದೆ. ಇಷ್ಟೇ ಅಲ್ಲದೆ ಓದುಗರಿಗೆ ಇಂಟರ್ನೆಟ್ ಸೌಲಭ್ಯವನ್ನು ಕಲ್ಪಿಸುವುದು ಜೊತೆಗೆ ದಿನದ 24 ಗಂಟೆಗಳ ಕಾಲ ಗ್ರಂಥಾಲಯ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಹಗಲು ವೇಳೆ ಕೆಲಸ ಮಾಡಿ ರಾತ್ರಿ ವೇಳೆ ಓದುವ ಓದುಗರಿಗೆ ಅನುಕೂಲವಾಗಲಿದೆ ಎನ್ನುತ್ತಾರೆ ಓದುಗರು.
ಈಗಾಗಲೇ ನಗರ ಕೇಂದ್ರ ಗ್ರಂಥಾಲಯ 12 ಗಂಟೆ ಕಾಲಾವಧಿಯಲ್ಲಿ ದಿನವೊಂದಕ್ಕೆ 250 ಕ್ಕೂ ಹೆಚ್ಚು ಮಂದಿ ಓದುವ ಮುಲಕ ಗ್ರಂಥಾಲಯ ದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 24*7 ವಿಸ್ತರಣೆ ಮಾಡುತ್ತಿದ್ದ ನಗರ ಹಾಗೂ ಗ್ರಾಮಾಂತರ ಭಾಗದ ಸಾಕಷ್ಟು ಓದುಗರಿಗೆ ಅನುಕೂಲವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬೈಟ್ .ಪ್ರೇಮಲತಾ ಲೈಬ್ರರಿಯನ್
ಬೈಟ್ . ಅಜೀತ್ ರಾಯ್ ಸ್ಮಾರ್ಟ್ ಸೀಟಿ ಅಧಿಕಾರಿ
ಬೈಟ್. ಕೀರ್ತಿ ಓದುಗರು
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.