ETV Bharat / city

ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದ 'ರಾಮಾರ್ಜುನ' ಚಿತ್ರತಂಡ

author img

By

Published : Feb 8, 2021, 4:11 PM IST

ಇಂದು ಶಿವಮೊಗ್ಗಕ್ಕೆ ಆಗಮಿಸಿದ 'ರಾಮಾರ್ಜುನ' ಚಿತ್ರತಂಡ, ಭಾರತ್ ಸಿನಿಮಾಸ್​ನಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದೆ.

'Ramarjuna' Film team watch movie with Fans
ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದ 'ರಾಮಾರ್ಜುನ' ಚಿತ್ರತಂಡ

ಶಿವಮೊಗ್ಗ: ರಾಜ್ಯಾದ್ಯಂತ ಜನವರಿ 29ರಂದು ತೆರೆಕಂಡ 'ರಾಮಾರ್ಜುನ' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಇಂದು ಶಿವಮೊಗ್ಗಕ್ಕೆ ಆಗಮಿಸಿದ ಚಿತ್ರತಂಡ, ಭಾರತ್ ಸಿನಿಮಾಸ್​ನಲ್ಲಿ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಚಿತ್ರದ ನಾಯಕ ಅನೀಶ್ ತೇಜೇಶ್ವರ್ ಹಾಗೂ ನಾಯಕಿ ನಿಷ್ವಿಕ ನಾಯ್ಡು, ಶಿವಮೊಗ್ಗದಲ್ಲಿ ನಮ್ಮ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿರುವುದು ಸಂತಸ ತಂದಿದೆ. ರಾಜ್ಯದ ಅನೇಕ ಚಿತ್ರಮಂದಿರಗಳಲ್ಲಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ.

ಓದಿ: ಸಿದ್ದರಾಮಯ್ಯ ಕುರುಬ ಸುಮದಾಯದಕ್ಕೆ ಕೈ ಕೊಟ್ಟಿದ್ದಾರೆ:ಈಶ್ವರಪ್ಪ ಕಿಡಿ

ಚಿತ್ರದಲ್ಲಿ ಉತ್ತಮ ಅಂಶಗಗಳಿರುವುದರಿಂದ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ‌. ಚಿತ್ರ ನೋಡಿದ ಬಳಿಕ ನಿಮ್ಮ ಸ್ನೇಹಿತರಿಗೂ ವೀಕ್ಷಿಸಲು ತಿಳಿಸಿ ಎಂದು ಪ್ರೇಕ್ಷಕರಿಗೆ ಮನವಿ ಮಾಡಿದರು. ಈ ವೇಳೆ, ಅಭಿಮಾನಿಗಳು ಚಿತ್ರದ ನಾಯಕ ಹಾಗೂ ನಾಯಕಿಯೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.