ಶಿವಮೊಗ್ಗ: ಶವ ಸಂಸ್ಕಾರದ ವೇಳೆ ಮಳೆ ಅಡ್ಡಿ ಪಡಿಸಿದ ಪರಿಣಾಮ ಸಂಬಂಧಿಕರು ಟಾರ್ಪಲ್ ನೆರವಿನಿಂದ ದಹನಕ್ರಿಯೆ ನಡೆಸಿದ ಘಟನೆ ತೀರ್ಥಹಳ್ಳಿ ತಾಲೂಕು ಬೇಗುವಳ್ಳಿಯಲ್ಲಿ ನಡೆದಿದೆ. ತೂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಗುವಳ್ಳಿಯ ನಿವಾಸಿ ವಿಠಲ(70) ವಯೋಸಹಜವಾಗಿ ಸಾವನ್ನಪ್ಪಿದ್ದರು. ಇವರ ಅಂತ್ಯ ಸಂಸ್ಕಾರ ನಡೆಸಲು ಸಂಬಂಧಿಕರು ಹಾಗೂ ಗ್ರಾಮಸ್ಥರು ಹೋದಾಗ ಮಳೆ ಅಡ್ಡಿಯಾಗಿದೆ.
ವಿಠಲ ಅವರ ಮನೆಯ ಪ್ರಕಾರ ದಹನದ ಮೂಲಕ ಶವ ಸಂಸ್ಕಾರ ಮಾಡಲಾಗುತ್ತದೆ. ಅದರಂತೆ ದಹನಕ್ಕಾಗಿ ತಯಾರಿ ನಡೆಸುವಾಗ ಮಳೆ ಪ್ರಾರಂಭವಾಗಿದೆ. ನಂತರ ಸಂಬಂಧಿಕರು, ಗ್ರಾಮಸ್ಥರು ಟಾರ್ಪಲ್ ನೆರವಿನಿಂದ ಶವ ಸಂಸ್ಕಾರ ನಡೆಸಿದ್ದಾರೆ.
ಸಶ್ಮಾನದ ಕೊರತೆ : ಮನುಷ್ಯ ನೆಮ್ಮದಿಯಿಂದ ಇರುವುದು ಸಶ್ಮಾನದಲ್ಲಿ ಮಾತ್ರ ಅಂತಾರೆ, ಆದರೆ ಸಶ್ಮಾನದ ಕೊರತೆಯಿಂದ ಶವವನ್ನು ಸಹ ಸರಿಯಾಗಿ ದಹಿಸಲು ಆಗುತ್ತಿಲ್ಲ. ಪ್ರತಿ ಗ್ರಾಮಕ್ಕೂ ಸಹ ಸಶ್ಮಾನ ನೀಡಲಾಗುವುದು ಎಂದು ಸರ್ಕಾರ ತಿಳಿಸಿದ್ದರೂ ಇನ್ನೂ ಅದು ಜಾರಿಗೆ ಬಂದಿಲ್ಲ.
ಇದನ್ನೂ ಓದಿ : ಚಂದ್ರಶೇಖರ್ ಗುರೂಜಿ ಅಂತ್ಯಸಂಸ್ಕಾರ ಮುಗಿಸಿ ವಾಪಸ್ ಆಗುವಾಗ ದುರಂತ: ಶಿವಲಿಂಗೇಶ್ವರ ಸ್ವಾಮೀಜಿ ಕಾರು ಅಪಘಾತ