ETV Bharat / city

ಆಟೋ ಕೊಡಿಸಿ ಅಥವಾ ಆಸ್ತಿ ಭಾಗ ಮಾಡಿ ಎಂದ ತಮ್ಮನ ಕೊಂದ ಅಣ್ಣ - ಶಿವಮೊಗ್ಗದಲ್ಲಿ ಆಸ್ತಿ ವಿಚಾರವಾಗಿ ಕೊಲೆ

ತನಗೊಂದು ಆಟೋ ಕೊಡಿಸಿ, ಇಲ್ಲವಾದಲ್ಲಿ ಆಸ್ತಿಯಲ್ಲಿ ಭಾಗ ಮಾಡಿ ಎಂದು ಕಾಟ ಕೊಡುತ್ತಿದ್ದ ತಮ್ಮನನ್ನ ಅಣ್ಣನೊಬ್ಬ ಕೊಂದಿದ್ದು, ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

brother kills a person in shimogga
ಆಟೋ ಕೊಡಿಸಿ ಅಥವಾ ಆಸ್ತಿ ಭಾಗ ಮಾಡಿ ಎಂದ ತಮ್ಮನ ಕೊಂದ ಅಣ್ಣ
author img

By

Published : Dec 31, 2021, 2:51 AM IST

ಶಿವಮೊಗ್ಗ: ತನಗೊಂದು ಆಟೋ ಕೊಡಿಸಿ, ಇಲ್ಲ ಆಸ್ತಿಯಲ್ಲಿ ಪಾಲು ಕೊಡಿ ಎಂದು ಕೇಳಿದ ತಮ್ಮನನ್ನೇ ಅಣ್ಣ ಕೊಲೆ ಮಾಡಿದ ಘಟನೆ ಶಿವಮೊಗ್ಗದ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಗುರುಪ್ರಸಾದ್ ಅಣ್ಣನಿಂದಲೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಗುರುಪ್ರಸಾದ್ ತನಗೊಂದು ಆಟೋ ಕೊಡಿಸಿ, ಇಲ್ಲವಾದಲ್ಲಿ ಆಸ್ತಿಯಲ್ಲಿ ಭಾಗ ಮಾಡಿ ಎಂದು ತನ್ನ ಅಮ್ಮನಿಗೆ ಪ್ರತಿ ದಿನ ಕಾಟ ಕೊಡುತ್ತಿದ್ದನು. ಈ ಬಗ್ಗೆ ಸಾಕಷ್ಡು ಮನೆಯಲ್ಲಿ ರಾಜೀ ಪಂಚಾಯತಿ ನಡೆದಿದ್ದರೂ ಸಹ ಗುರುಪ್ರಸಾದ್ ಕಾಟ ನೀಡುತ್ತಿದ್ದನು.

ಇದರಿಂದ ಕೋಪ‌ಗೊಂಡ ವಿಶ್ವನಾಥ್ ಮನೆಯಲ್ಲಿ ಇದ್ದ ಗಾರೆ ಕೆಲಸಕ್ಕೆ ಬಳಸುವ ಮಟ್ಟಗೋಲಿನಿಂದ ತಲೆ ಹಾಗೂ ಕಿವಿ ಗೆ ಹೊಡೆದ ಪರಿಣಾಮ ಗುರುಪ್ರಸಾದ್ ಸಾವನ್ನಪ್ಪಿದ್ದಾನೆ. ಈ ಕುರಿತು ವಿನೋಬನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿಶ್ವನಾಥ್​ನನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಅಪರಿಚಿತ ವಾಹನ ಡಿಕ್ಕಿ, ಉದಯೋನ್ಮುಖ ಕ್ರಿಕೆಟರ್ ಸ್ಥಳದಲ್ಲೇ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.