ಸಾಗರ, ಶಿವಮೊಗ್ಗ: ಸಾಹಿತಿ ಭಗವಾನ್‌ಗೆ ಸಾಗರದ ಜೆಎಂಎಫ್ಸಿ ನ್ಯಾಯಾಲಯದಿಂದ ಕೋರ್ಟ್ಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಭಗವಾನ್ ಅವರು ರಾಮ ಮಂದಿರ ಏಕೆ ಬೇಡ ಎನ್ನುವ ಕೃತಿಯನ್ನು ಬಿಡುಗಡೆ ಮಾಡಿದ್ದರು. ಈ ಕೃತಿಯು ವಿವಾದಾತ್ಮಕವಾಗಿದೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತದೆ ಎಂದು ಸಾಗರದ ಮಹಾಬಲೇಶ್ವರ್ ಎಂಬುವರು ಕೋರ್ಟ್ಗೆ ದೂರು ದಾಖಲಿಸಿದ್ದರು. ಇದು ಐಪಿಸಿ ಸೆಕ್ಷನ್ 295(a) ಅಡಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ದೂರಿನ ವಿಚಾರಣೆ ನಡೆಸಿದ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಹೀಗಾಗಿ ಸಾಗರ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಶ್ರೀಶೈಲ ಭೀಮಸೇನ್ ಭಗಾಡೆ ಅವರು ಬರಹಗಾರ ಭಗವಾನ್ ಸಾಗರದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಖುದ್ದು ಆಗಸ್ಟ್ 30ರಂದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರು.
ಈ ಪ್ರಕರಣದ ವಾದವನ್ನು ದೂರದಾರರ ಪರವಾಗಿ ಕೆ.ವಿ.ಪ್ರವೀಣ ಕುಮಾರ್ ಮಂಡಿಸುತ್ತಿದ್ದಾರೆ. ಇವರು ಈ ಹಿಂದೆ ಸಾಗರ ಕೋರ್ಟ್ನಲ್ಲಿ ವಿಷಯವೊಂದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸೋನಿಯಾ ಗಾಂಧಿ ವಿರುದ್ಧ ದೂರು ದಾಖಲಿಸಿದ್ದರು.
ಓದಿ: ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನ್ಯಾಯಾಲಯಕ್ಕೆ ಹಾಜರಾದ ಭಗವಾನ್, ಚಂಪಾ ಗೈರು