ಶಿವಮೊಗ್ಗ: ಮೈಸೂರು ಹುಲಿ, ಬ್ರಿಟೀಷರ ಪಾಲಗೆ ಸಿಂಹಸ್ವಪ್ನವಾಗಿದ್ದ ಟಿಪ್ಪು ಸುಲ್ತಾನ್ ಅವರ ಜನ್ಮ ನವೆಂಬರ್ 20, 1952 ಅಂತ ಇತಿಹಾಸದಿಂದ ತಿಳಿಯುತ್ತದೆ. ಇದನ್ನು ಮೀರ್ ಹುಸೇನ್ ಕಿರ್ಮಾನಿ ಎಂಬ ಇತಿಹಾಸಜ್ಞ ಹೈದರ್ ಜೀವನ ಚರಿತ್ರೆ ನಿಶಾನ್ ಐ ಹೈದರ್ ಪುಸ್ತಕದಲ್ಲಿ ತಿಳಿಸಿದ್ದಾರೆ.
ಇದನ್ನೆ ಎಲ್ಲರೂ ಟಿಪ್ಪು ಸುಲ್ತಾನ್ ಜನ್ಮ ದಿನಾಂಕ ಎಂದು ತಿಳಿದುಕೊಂಡಿದ್ದಾರೆ. ಶಿವಮೊಗ್ಗದ ಇತಿಹಾಸ ಆಸಕ್ತಿ ಹೊಂದಿರುವ ಸಂಶೋಧಕ ನಿಧಿನ್ ಓಲೇಕಾರ್ ಎಂಬುವರು ಸಂಶೋಧನೆ ನಡೆಸಿ ಟಿಪ್ಪು ಸುಲ್ತಾನ್ ಹುಟ್ಟಿದ್ದು, 1 ಡಿಸೆಂಬರ್ 1751 ಎಂದು ಬಹಿರಂಗ ಪಡಿಸಿದ್ದಾರೆ. ಇದು ಹೊಸ ಇತಿಹಾಸದ ಚರ್ಚೆಗೆ ಕಾರಣವಾಗಿದೆ.
ಲಂಡನ್ ಗ್ರಂಥಾಲಯದಲ್ಲಿತ್ತು ಟಿಪ್ಪು ಅಸಲಿ ಜನ್ಮ ದಿನಾಂಕ: ಮೂರನೇ ಆಂಗ್ಲೂ ಮೈಸೂರು ಯುದ್ದದಲ್ಲಿ ಟಿಪ್ಪು ಸೋತ ನಂತರ, ಬ್ರಿಟೀಷರು ರಾಜ್ಯವನ್ನು ಸ್ವಾದೀನ ಪಡೆದುಕೊಂಡು ನಂತರ ಟಿಪ್ಪುವಿನ ಪರ್ಶಿಯನ್ ಭಾಷೆಯ ಅಮೂಲ್ಯ ಹಸ್ತಪ್ರತಿ ತೆಗೆದುಕೊಂಡು ಹೋಗುತ್ತಾರೆ. ಇದರಲ್ಲಿ ಟಿಪ್ಪುವಿನ ಅಸಲಿ ಜನ್ಮ ದಿನಾಂಕ ಇರುತ್ತದೆ.
ಮೌಲೂದಿ ಪಂಚಾಂಗ: ಟಿಪ್ಪು ಸುಲ್ತಾನ್ ತಾನು ಅಧಿಕಾರ ಹಿಡಿದ ನಂತರ ತನ್ನ ರಾಜ್ಯದಲ್ಲಿ ಮೌಲೂದಿ ಪಂಚಾಂಗವನ್ನು ಪ್ರಾರಂಭಿಸುತ್ತಾನೆ. ಮುಸ್ಲಿಂರಲ್ಲಿ ಕೆಲವರು ಚಂದ್ರನ ಗ್ರಹಗತಿ ಅವಲಂಬಿಸಿ ಹಿಜ್ರಿ ಪಂಚಾಂಗವನ್ನು ಅನುಸರಿಸಿದರೆ, ಮತ್ತೆ ಕೆಲವರು ಸೂರ್ಯನ ಗ್ರಹಗತಿಯನ್ನು ಅವಲಂಬಿಸಿ ಸೌರಮಾನ ಪಂಚಾಂಗವನ್ನು ಅನುಸರಿಸುತ್ತಾರೆ.
ಇದರಿಂದ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಟಿಪ್ಪು ಮೌಲೂದಿ ಪಂಚಾಂಗವನ್ನು ಪರಿಚಯಿಸುತ್ತಾನೆ. ಪ್ರಮುಖವಾಗಿ ಮೈಸೂರಿನಲ್ಲಿ ಕಂದಾಯವನ್ನು ಚಂದ್ರಮಾನ ಪಂಚಾಂಗ ಮತ್ತು ಭತ್ತದ ಕೊಯ್ಲಿನ ಮೇಲಿನ ಕರವನ್ನು ಪೌರಮಾನ ಪಂಚಾಂಗದ ಅನುಸಾರ ವಸೂಲಿ ಮಾಡುತ್ತಿರುತ್ತಾರೆ.
ಸೌರಮಾನ ಆಧಾರಿತ ಪಂಚಾಂಗದಲ್ಲಿ ಹಿಜ್ರಿ ಪಂಚಾಂಗಕ್ಕಿಂತ 11 ದಿನಗಳು ಹೆಚ್ಚುವರಿ ಇದ್ದುದ್ದರಿಂದ ರೈತರು ಹೆಚ್ಚುವರಿ ಕರವನ್ನು ನೀಡಬೇಕಿತ್ತು. ಈ ಸಮಸ್ಯೆಯನ್ನು ನಿವಾರಿಸಲು ಟಿಪ್ಪು ಮೌಲೂದಿ ಪಂಚಾಂಗಕ್ಕೆ ಚಾಲನೆ ನೀಡುತ್ತಾನೆ. ಅರಬ್ ಪದವಾದ ಮೌಲೂದಿ ಐ ಮಹಮ್ಮದ್ ಅಂದರೆ, ಮಹಮ್ಮದ್ ಪೈಗಂಬರ್ ಅವರ ಹುಟ್ಟಿದ ವರ್ಷ ಅಂದರೆ 572 AD ನಿಂದ ಪ್ರಾರಂಭಗೊಂಡು ಅಹ್ಮದಿ ಮಾಸದಿಂದ ಹನ್ನೇರಡು ಮಾಸವಾದ ಬಯಾಜಿ( ರಬಾನಿ) ಜೊತೆಗೆ ಅಂತ್ಯವಾಗುತ್ತದೆ. ಇನ್ನೂಂದು ವಿಶೇಷ ಎಂದರೆ, ಮೌಲೂದಿ ಪಂಚಾಂಗ ಹಿಂದೂಗಳ ಚಾಂದ್ರಮಾನ ಪಂಚಾಂಗಕ್ಕೆ ಸರಿ ಸಮಾನವಾಗಿದೆ.
ಕೊನೆಯ ಮಾಸ ಬಯಾಜಿ ಫಾಲ್ಗುಣ ಮಾಸಕ್ಕೆ ಸಮಾನ
ಇನ್ನೂಂದು ವಿಶೇಷವೆಂದರೆ, ಅಹ್ಮದಿ ಮಾಸ ಚೈತ್ರ ಮಾಸಕ್ಕೆ ಸಮಾನವಾದರೆ ಕೊನೆಯ ಮಾಸ ಬಯಾಜಿ ಫಾಲ್ಗುಣ ಮಾಸಕ್ಕೆ ಸಮಾನವಾಗಿರುತ್ತದೆ. ಈ ಮೌಲೂದಿ ಪಂಚಾಂಗ ಒಂಭತ್ತನೆಯ ಮಾಸದ ಹೆಸರು ತುಳುವಿ ಆಗಿದ್ದು ಇದು ಹಿಂದು ಪಂಚಾಂಗದ ಮಾರ್ಗಶಿರ ಮಾಸಕ್ಕೆ ಸಮಾನವಾಗಿದೆ. ಇದನ್ನೆ ಲಂಡನ್ ಬ್ರಿಟೀಷ್ ಸಂಗ್ರಹಾಲಯದ ಕ್ಯುರೇಟರ್ ಉರ್ಸುಲಾ ಸಿಮ್ಸ್ ವಿಲಿಯಮ್ ಪರ್ಶಿಯಾನ್ ಹಸ್ತ ಪ್ರತಿಯಲ್ಲಿ ಟಿಪ್ಪುವಿನ ಜನ್ಮ ದಿನಾಂಕ ಉಲ್ಲೇಖ ಮಾಡಿರುವ ಟಿಪ್ಪಣಿಯ ಪೋಟೊ ಪ್ರತಿಯನ್ನು ನಿಧಿನ್ ಒಲೇಕರ್ ರವರಿಗೆ ನೀಡಿದ ಪ್ರಕಾರ ಟಿಪ್ಪು ಡಿಸಂಬರ್ 1 1751 ರಂದು ತಿಳಿಸುತ್ತದೆ. ಬ್ರಿಟೀಷ್ ಗ್ರಂಥಾಲಯದಲ್ಲಿ ಟಿಪ್ಪು ಪರ್ಶಿಯಾನ್ ಭಾಷೆಯಲ್ಲಿ ತಾನೇ ಬರೆಯಿಸಿದ ಫತೇ ಉಲ್ ಮುಜಾಹಿದ್ದಿನ್ ಎಂಬ ಹಸ್ತಪ್ರತಿಯಾಗಿದೆ. ಇದು ಟಿಪ್ಪುವಿನ ಮಿಲಿಟರಿ ಕೈಪಿಡಿಯಾಗಿದೆ.
ರಾಕೇಟ್ ಮೂಲ ಹುಡುಕಲು ಹೋಗಿ ಟಿಪ್ಪು ಜನ್ಮದಿನ ಪತ್ತೆ: ನಿದಿನ್ ಓಲಿಕರ್ ರವರು ಶಿವಮೊಗ್ಗ ಜಿಲ್ಲೆ ನಗರದಲ್ಲಿ ಸಿಕ್ಕ ರಾಕೆಟ್ ಕುರಿತು ಕೈಗೊಂಡ ಸಂಶೋಧನೆ ಮಂಡಿಸಲು ಲಂಡನ್ ಗೆ ಹೋದಾಗ ಟಿಪ್ಪುವಿನ ಜಮ್ಮ ದಿನಾಂಕದ ಆಸಕ್ತಿ ಮೂಡಿ ಸಂಶೋಧನೆ ನಡೆಸಲು ಮುಂದಾಗುತ್ತಾರೆ. ನಿಧಿನ್ ಓಲಿಕರ್ ರವರು ನಂತರ ಸತತ ಎರಡು ವರ್ಷ ಸಂಶೋಧನೆ ನಡೆಸುತ್ತಾರೆ. ಮೊದಲಿಗೆ ಟಿಪ್ಪುವಿನ ಜನ್ಮ ದಿನಾಂಕವು ಅನೇಕ ಗೊಂದಲಗಳಿಗೆ ಕಾರಣವಾಗುತ್ತದೆ.
ಮೌಲೂದಿ ಪಂಚಾಂಗವನ್ನು ದೃಢಿಕರಿಸಲು ನಿಧಿನ್ ಓಲಿಕರ್ ಅನೇಕ ಪರಿಕ್ಷಾ ಪ್ರಯೋಗಗಳನ್ನು ನಡೆಸುತ್ತಾರೆ. ನಂತರ ಆನ್ ಲೈನ್ ನಲ್ಲಿ ಮೌಲೂದಿ ಪಂಚಾಂಗವನ್ನು ಪರಿಚಯಿಸಲು www.tippusultan.com ಎಂಬ ವೆಬ್ ಸೈಟ್ ರಚನೆ ಮಾಡುತ್ತಾರೆ. ಇದರಲ್ಲಿ ಎಲ್ಲರೂ ಸಹ ಮಾಹಿತಿ ಪಡೆಯಬಹುದಾಗಿದೆ. ಪರ್ಶಿಯಾನ್ ಭಾಷೆಯಲ್ಲಿದ್ದ ಕಾರಣ ಅದರ ಮೂಲಕ ತಿಳಿಯಲು ಪರ್ಶಿಯನ್ ವಿದ್ವಾನ್ ಅದ್ನಾನ್ ರಶೀದ್ ರವರ ನೆರವು ಪಡೆಯುತ್ತಾರೆ.
ಟಿಪ್ಪುವಿನ ಜನ್ಮ ದಿನಾಂಕದ ಕುರಿತು ಮಂಗಳೂರು ಮತ್ತು ಗೋವಾ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಮೈಸೂರಿನ ಪ್ರಸಿದ್ದ ಇತಿಹಾಸಕಾರರಾದ ಪ್ರೊ.ಶೇಖ್ ಅಲಿ ರವರು ಸಹ ನಿದಿನ್ ರವರ ಸಂಶೋಧನೆಗೆ ಅನುಮೋದನೆ ನೀಡಿದ್ದಾರೆ.
ಅಂದಹಾಗೆ ನಿಧಿನ್ ಓಲಿಕರ್ ಓರ್ವ ಇಂಜಿನಿಯರ್, ಇವರು ನಾಣ್ಯ ಸಂಗ್ರಹದ ಹವ್ಯಾಸದಿಂದ ಇತಿಹಾಸ ಸಂಶೋಧನೆಗೆ ಮುಂದಾಗಿ ಈಗ ಟಿಪ್ಪುವಿನ ಜನ್ಮದಿನಾಂಕವನ್ನು ಹೊರ ತರುವಂತಹ ಕೆಲಸ ಮಾಡಿದ್ದಾರೆ. ಈ ಕುರಿತು ಚರ್ಚೆಗಳು ನಡೆದು, ಸರ್ಕಾರ ಒಪ್ಪಿದರೆ ತಮ್ಮ ಸಂಶೋಧನೆಗೆ ಮಹತ್ವ ಬರುತ್ತದೆ ಎಂದು ನಿಧಿನ್ ಓಲಿಕರ್ ತಿಳಿಸಿದರೆ, ಓಲಿಕರ್ ರವರು ಸಂಶೋಧನೆ ಇತಿಹಾಸದಲ್ಲಿ ದಾಖಲಿಸುವ ಕೆಲಸವಾಗಿದೆ ಎಂದು ಇತಿಹಾಸಜ್ಞರಾದ ನಿವೃತ್ತ ಇತಿಹಾಸ ಉಪನ್ಯಾಸ ಖಂಡೋಬರಾವ್ ರವರು ತಿಳಿಸಿದರು.