ETV Bharat / city

ಪ್ರಿಯಾಂಕಾಗೆ ಎಲ್‌ಕೆಜಿ ಮಕ್ಕಳು ಹೋಗಿ ಪಾಠ ಹೇಳಿಕೊಡಬೇಕಿದೆ: ಕೆ.ಎಸ್‌.ಈಶ್ವರಪ್ಪ

ರಾಜ್ಯದಲ್ಲಿಒಂದು ವೇಳೆ ಕಾಂಗ್ರೆಸ್​​ ಸರ್ಕಾರ ಅಧಿಕಾರದಲ್ಲಿಇದ್ದಿದ್ದರೆ ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರ ಹೊರಗೆ ಬರುತ್ತಿರಲಿಲ್ಲ, ಅದನ್ನು ಮುಚ್ಚಿ ಹಾಕುತ್ತಿದ್ದರು. ಬಿಜೆಪಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಹೀಗಾಗಿಯೇ ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ಮಾಡಲಾಗುತ್ತಿದೆ- ಶಾಸಕ ಕೆ.ಎಸ್‌.ಈಶ್ವರಪ್ಪ.

MLA KS Eshwarappa
ಕೆ.ಎಸ್‌.ಈಶ್ವರಪ್ಪ
author img

By

Published : May 23, 2022, 7:04 AM IST

ಶಿವಮೊಗ್ಗ: ವಸ್ತ್ರ ಸಂಹಿತೆಯ ಬಗ್ಗೆ ಮಾತನಾಡುವ ಧಾವಂತದಲ್ಲಿ ಪ್ರಿಯಾಂಕಾ ಗಾಂಧಿ ಅವರು 'ಬಿಕಿನಿ ಬೇಕಾದರೂ ಹಾಕಿಕೊಳ್ಳಲಿ' ಎಂದಿದ್ದರು. ಅವರಿಗೆ ಎಲ್‌ಕೆಜಿ ಮಕ್ಕಳು ಹೋಗಿ ಪಾಠ ಹೇಳಿಕೊಡಬೇಕಿದೆ. ಯಾರಾದರೂ ಶಾಲೆಗಳಿಗೆ ಅಂತಹ ಬಟ್ಟೆಗಳನ್ನು ಧರಿಸಿ ಬರುತ್ತಾರೆಯೇ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರಾದ ಅವರು ಹೇಳಿಕೆಗಳನ್ನು ನೀಡುವಾಗ ಪರಿಜ್ಞಾನ ಇರಬೇಕು. ಜತೆಗೆ, ಹಿಜಾಬ್‌, ಹಲಾಲ್‌ ಮತ್ತು ಆಜಾನ್‌ ಎಲ್ಲವೂ ಬಿಜೆಪಿ ಸೃಷ್ಟಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಕೆ.ಎನ್‌.ರಾಜಣ್ಣ ಹೇಳಿದ್ದಾರೆ. ಆದರೆ, ಅದೆಲ್ಲದ್ದಕ್ಕೂ ಕುಮ್ಮಕ್ಕು ನೀಡಿದ್ದು ಯಾರು?, ಆರು ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿ ವಿವಾದ ಸೃಷ್ಟಿ ಮಾಡಿ ಎಂದು ಹೇಳಿದ್ದು ಯಾರು?, ಮೆಕ್ಕಾ ಕಡೆಗೆ ಮುಖ ಮಾಡಿ ಹಲಾಲ್‌ ಮಾಡಿ ಎಂದಿದ್ದು ಯಾರು?, ಎಲ್ಲವನ್ನೂ ಕಾಂಗ್ರೆಸ್‌ನವರೇ ಮಾಡಿ ಬಿಜೆಪಿಯ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕೋರ್ಟ್‌ ಆದೇಶ ಇದ್ದರೂ ದತ್ತ ಪೀಠದಲ್ಲಿ ಮಾಂಸಾಹಾರ ತಿನ್ನುತ್ತಾರೆಂದರೆ ಅವರಿಗೆಷ್ಟು ಸೊಕ್ಕು ಇರಬೇಕು. ಇದನ್ನು ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಾದಿಯಾಗಿ ಯಾರೊಬ್ಬರೂ ಖಂಡಿಸಿಲ್ಲ. ಅನ್ಯಕೋಮಿನವರು ಏನೇ ತಪ್ಪುಗಳನ್ನು ಮಾಡಿದರೂ ಅದಕ್ಕೆ ಚಕಾರ ಎತ್ತುವುದಿಲ್ಲ. ಕೋರ್ಟ್‌ ಆದೇಶಕ್ಕೆ ಬೆಲೆ ಕೊಡದವರಿಗೆ ಬೆಂಬಲವಾಗಿ ಕಾಂಗ್ರೆಸ್‌ ನಿಲ್ಲುತ್ತಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರೇ ರಾಜ್ಯದಲ್ಲಿ ರಾಷ್ಟ್ರದ್ರೋಹಿಗಳು ಎಂದು ಈಶ್ವರಪ್ಪ ಕಿಡಿ ಕಾರಿದರು.

ರಾಜ್ಯದಲ್ಲಿಒಂದು ವೇಳೆ ಕಾಂಗ್ರೆಸ್​​ ಸರ್ಕಾರ ಅಧಿಕಾರದಲ್ಲಿಇದ್ದಿದ್ದರೆ ಪಿಎಸ್‌ಐ ನೇಮಕಾತಿ ಅಕ್ರಮ ವಿಚಾರ ಹೊರಗೆ ಬರುತ್ತಿರಲಿಲ್ಲ. ಅದನ್ನು ಮುಚ್ಚಿ ಹಾಕುತ್ತಿದ್ದರು. ಬಿಜೆಪಿ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಹೀಗಾಗಿಯೇ ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಯಾವ ಇಲಾಖೆಯ ಅಭಿವೃದ್ಧಿ ಕಾರ್ಯಗಳು ಸಹ ನಿಂತಿಲ್ಲ. ಜನರು ಸರ್ಕಾರದ ಕಾರ್ಯದ ಬಗ್ಗೆ ಸಂತೋಷದಿಂದ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ವಿಪಕ್ಷಗಳಿಂದ ಗೊಂದಲ ಸೃಷ್ಟಿ: ಪಠ್ಯ ಪುಸ್ತಕದಲ್ಲಿ ಭಗತ್‌ ಸಿಂಗ್‌, ನಾರಾಯಣಗುರು ಹೆಸರು ತೆಗೆದು ಹಾಕಲಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ. ಇದು ಸುಳ್ಳು ಸೃಷ್ಟಿ. ಯಾವ ಕಾರಣಕ್ಕೂ ನಾರಾಯಣ ಗುರು, ಭಗತ್‌ ಸಿಂಗ್‌ ಹೆಸರು ಪಠ್ಯದಿಂದ ತೆಗೆಯುವುದಿಲ್ಲ. ಡಾ. ಹೆಡ್ಗೆವಾರ್‌ ಅವರ ರಾಷ್ಟ್ರಭಕ್ತಿ ವಿಚಾರವನ್ನು ಕೂಡ ಪಠ್ಯದಲ್ಲಿ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಧರ್ಮ ಶಿಕ್ಷಣ ಮನೆಯಲ್ಲಿ ಹೇಳಿ, ಶಾಲೆಯಲ್ಲಿ ಅಲ್ಲ: ಅಸ್ಸೋಂ ಸಿಎಂ ಹಿಮಂತ್​ ಬಿಸ್ವಾ ಶರ್ಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.