ETV Bharat / city

ಆರ್​​ಎಸ್​​ಎಸ್ ಕಚೇರಿಗೆ ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಯಾರ್​ ಬೇಕಾದ್ರು ಹೋಗ್ಬಹುದು: ಸಚಿವ ಈಶ್ವರಪ್ಪ

ನಾಗ್ಪುರದಲ್ಲಿರುವ ಆರ್​ಎಸ್​ಎಸ್​ ಕಚೇರಿಗೆ ಯಾರ್ ಬೇಕಾದ್ರು ಹೋಗ್ಬಹುದು ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೈಕಮಾಂಡ್ ಗೆ ವರದಿ ನೀಡಿರುವ ವಿಚಾರದ ಕುರಿತು ನನಗೆ ಏನೂ ಗೂತ್ತಿಲ್ಲ. ಅರುಣ್ ಸಿಂಗ್ ಬೆಂಗಳೂರಿಗೆ ಬಂದಾಗ ಯಾವ ವಿಚಾರ ಪ್ರಸ್ತಾಪ‌ ಮಾಡಿದರು ಅನ್ನೋದು ನಿಮಗೂ ಗೂತ್ತಿದೆ ಎಂದು ಮಾಧ್ಯಮದವರಿಗೆ ಸಚಿವ ಈಶ್ವರಪ್ಪ ಹೇಳಿದರು.

minister-ks-eswarappa-talk
ಸಚಿವ ಕೆ.ಎಸ್.ಈಶ್ವರಪ್ಪ
author img

By

Published : Jun 23, 2021, 7:53 PM IST

ಶಿವಮೊಗ್ಗ: ಆರ್​​ಎಸ್​​ಎಸ್ ಕೇಂದ್ರ ಕಚೇರಿ ನಾಗ್ಪುರಕ್ಕೆ ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಯಾರ್ ಬೇಕಾದರೂ ಹೋಗಬಹುದು. ಹಾಗಾಗಿ ರಮೇಶ್ ಜಾರಕಿಹೊಳಿರವರು ನಾಗ್ಪುರದ ಆರ್​​ಎಸ್​​ಎಸ್ ಕಚೇರಿಗೆ ಹೋಗಿರುವ ವಿಚಾರಕ್ಕೆ‌ ಅಷ್ಟೇನು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ

ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ಮಾತನಾಡಿದ ಅವರು, ನಾಗ್ಪುರದ ಆರ್​​​ಎಸ್​​ಎಸ್ ಕಚೇರಿ‌ ಇರುವುದೇ ಎಲ್ಲಾರೂ ಈ ಸಂಘಟನೆ ಸೇರಿಕೊಂಡು ದೇಶ ಉದ್ಧಾರ ಮಾಡಬೇಕೆಂಬ ಉದ್ದೇಶದಿಂದ. ಆರ್​​​ಎಸ್​​ಎಸ್ ಭಾರತ ಮಾತ್ರವಲ್ಲ, ವಿಶ್ವದಲ್ಲಿಯೇ ಇದೆ. ಈ ದೇಶ, ಸಮಾಜಕ್ಕೆ ಒಳ್ಳೆಯದು ಬಯಸುವ ಯಾರು ಬೇಕಾದರೂ ಸಹ ಆರ್​​ಎಸ್​​​ಎಸ್ ಕಚೇರಿಗೆ ಹೋಗಬಹುದು ಎಂದರು.

ಅರುಣ್ ಸಿಂಗ್ ವರದಿ ವಿಚಾರ:

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೈಕಮಾಂಡ್ ಗೆ ವರದಿ ನೀಡಿರುವ ವಿಚಾರದ ಕುರಿತು ನನಗೆ ಏನೂ ಗೂತ್ತಿಲ್ಲ. ಹಾಗೆಯೇ ಅವರು ಯಾವ ವಿಚಾರ ಪ್ರಸ್ತಾಪ ಮಾಡಿದರೂ ಅನ್ನೋದು ತಿಳಿದಿಲ್ಲ. ಅರುಣ್ ಸಿಂಗ್ ಬೆಂಗಳೂರಿಗೆ ಬಂದಾಗ ಯಾವ ವಿಚಾರ ಪ್ರಸ್ತಾಪ‌ ಮಾಡಿದರು ಅಂತ ಮಾಧ್ಯಮದವರಿಗೂ ಗೂತ್ತಿದೆ.‌ ರಾಜ್ಯದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಎಲ್ಲಾ ಸಂಘಟನೆ ಜೊತೆ ಸೇರಿಕೊಂಡು ಕೋವಿಡ್ ಪರಿಹಾರ ಮಾಡುವಲ್ಲಿ ಶ್ರಮ ಹಾಕಿದ್ದೇವೆ. ಈ ಬಗ್ಗೆ ಅರುಣ್ ಸಿಂಗ್ ಕೋರ್ ಕಮಿಟಿ ಸಭೆಯಲ್ಲಿ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ.

ಮೂರನೇ ಅಲೆ ಎದುರಾದರೆ ಏನು ಮಾಡಬೇಕು ಅಂತ ಅರುಣ್ ಸಿಂಗ್ ಜೊತೆ ಚರ್ಚೆ ಮಾಡಿದ್ದೇವೆ. ರಾಜ್ಯ ಸಂಘಟನೆ ಬೆಳೆಸುವ ದೃಷ್ಟಿಯಲ್ಲಿ ಏನೇನೂ ಮಾಡಬೇಕು ಅಂತ ಚರ್ಚೆ ನಡೆಸಿದ್ದಾರೆ. ಅವರು ಜೊತೆ ನಡೆಸಿರುವ ಮಾತುಕತೆಯ ವಿಷಯದ ಕುರಿತ ಬಗ್ಗೆ ಕೇಂದ್ರದ ನಾಯಕರಿಗೆ ವರದಿ ನೀಡಿರಬಹುದು ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಸಿದ್ಧ:

ಕೋವಿಡ್ ಮೂರನೇ ಅಲೆ ಬರುತ್ತೆ ಅಂತ ಹೇಳಾಗುತ್ತಿದೆ. ಅದು ಬಂದರೆ ಮಕ್ಕಳಿಗೆ ಹೆಚ್ಚು ಅಪಾಯ ಅಂತಾ ಚರ್ಚೆ ಆಗ್ತಾ ಇದೆ. ರಾಜ್ಯ ಸರ್ಕಾರ ಡಾ. ದೇವಿಶೆಟ್ಟಿ ನೇತೃತ್ವದಲ್ಲಿ ಸಮಿತಿ ಮಾಡಿದೆ. ಶಿವಮೊಗ್ಗ‌ ಜಿಲ್ಲೆಯ ಕುರಿತು ಮಕ್ಕಳ ತಜ್ಞರ ಜೊತೆ ಸಮಗ್ರ ಚರ್ಚೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಗತ್ಯ ಬೆಡ್ ಸೇರಿದಂತೆ‌ ವೈದ್ಯಕೀಯ‌ ಸಿದ್ಧತೆಗಳನ್ನು ನಡೆಸಲಾಗಿದೆ. ಇದು ಎಷ್ಟು ಪರಿಣಾಮಕಾರಿ ಅನ್ನೋದು ಗೊತ್ತಿಲ್ಲವೆಂದು ಸಚಿವ ಈಶ್ವರಪ್ಪ ತಿಳಿಸಿದರು.

ಹೊಸ ವೈದ್ಯರು ಸೇರಿದಂತೆ ನರ್ಸ್ ಗಳು, ಡಿ ದರ್ಜೆ ನೌಕರರು, ವೆಂಟಿಲೇಟರ್, ಆಕ್ಸಿಜನ್, ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೂರನೇ ಅಲೆ ಯಾವ ರೂಪದಲ್ಲಿ ಬರುತ್ತದೆಯೋ ಗೊತ್ತಿಲ್ಲ. ಆದರೆ ವ್ಯವಸ್ಥಿತವಾಗಿ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.