ಶಿವಮೊಗ್ಗ : ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಮಾಡುವಂತೆ ಸಿಎಂ ಯಡಿಯೂರಪ್ಪ ವಿಡಿಯೋ ಸಂವಾದದಲ್ಲಿ ತಿಳಿಸಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಓದಿ: ಕೊನೇ ಗಳಿಗೆಯಲ್ಲೂ ದೊರೆಸ್ವಾಮಿ ಸಾಮಾಜಿಕ ಕಳಕಳಿ.. ಸ್ವಾತಂತ್ರ್ಯ ಹೋರಾಟಗಾರನ ನೆನೆದು ಡಾ. ಮಂಜುನಾಥ್ ಭಾವುಕ
ಇಂದು ಸಿಎಂ ಯಡಿಯೂರಪ್ಪನವರು ರಾಜ್ಯದ 4 ಜಿಲ್ಲೆಯ 40 ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಒಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಕೊರೊನಾ ತಡೆಯಲು ಗ್ರಾಮ ಮಟ್ಟದ ಟಾಸ್ಕ್ ಪೋರ್ಸ್ ಕೆಲಸಕ್ಕೆ ಸಿಎಂ ಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ.47 ರಷ್ಟು ಇತ್ತು. ಈಗ ಇದು ಶೇ. 33ಕ್ಕೆ ಬಂದಿದೆ. ಇದನ್ನು ಶೇ. 20ಕ್ಕೆ ತರುವ ಪ್ರಯತ್ನ ಮಾಡಲು ಸೂಚಿಸಿದ್ದಾರೆ ಎಂದರು.
ಗ್ರಾಮ ಪಂಚಾಯತ್ ನೌಕರರನ್ನು ಕೊರೊನಾ ವಾರಿಯರ್ಸ್ ಎಂದು ಸಿಎಂ ಘೋಷಿಸಿದ್ದಾರೆ, ಇದು ಸಂತಸ ತಂದಿದೆ ಎಂದರು. ಗ್ರಾಮದಲ್ಲಿ ಜನಸಂಖ್ಯೆ ಹಾಗೂ ಸೋಂಕಿತರ ಅನುಗುಣವಾಗಿ ಕೋವಿಡ್ ಸೆಂಟರ್ ತೆರೆಯಲು ಸಿಎಂ ಸೂಚನೆ ನೀಡಿದ್ದಾರೆ ಎಂದರು.
ತೀರ್ಥಹಳ್ಳಿಯ ಅರೆಹಳ್ಳಿ ಗ್ರಾಮದ ಅಧ್ಯಕ್ಷರೊಂದಿಗೆ ಸಿಎಂ ಮಾತು:
ಸಿಎಂ ಬಿ.ಎಸ್.ಯಡಿಯೂರಪ್ಪನವರು ವಿಡಿಯೋ ಸಂವಾದದಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರೇಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಎ.ಕೆ.ಭಾಸ್ಕರ್‌ರೊಂದಿಗೆ ಸಂವಾದ ನಡೆಸಿದ್ದಾರೆ.
ಅಧ್ಯಕ್ಷ ಭಾಸ್ಕರ್‌ರಿಂದ ಕೊರೊನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಮದುವೆ, ಮುಂಜಿ, ಜಾತ್ರೆಗಳಿಗೆ ನಿರ್ಭಂದ ಏರಬೇಕು. ಕೋವಿಡ್ ಪಾಸಿಟಿವಿಟಿ ರೇಟ್ ಶೇ. 10ಕ್ಕೆ ಇಳಿಸಲು ಪ್ರಯತ್ನ ಮಾಡಬೇಕೆಂದು ತಿಳಿಸಿದರು.
ನಂತರ ಮಾತನಾಡಿದ ಭಾಸ್ಕರ್ ರವರು, ತಮ್ಮ ಗ್ರಾಮದಲ್ಲಿ ಕೋವಿಡ್ ಮಾಹಿತಿಯನ್ನು ತಿಳಿಸಿದರು. ಈ ವೇಳೆ ಡಿಸಿ ಶಿವಕುಮಾರ್, ಎಸ್ಪಿ ಲಕ್ಷ್ಮೀ ಪ್ರಸಾದ್ ಹಾಗೂ ಜಿ.ಪಂ ಸಿಇಓ ಶ್ರೀಮತಿ ವೈಶಾಲಿ ಹಾಜರಿದ್ದರು.