ಶಿವಮೊಗ್ಗ: ಕೆಲ ಸಮಾಜಘಾತುಕ ಮುಸಲ್ಮಾನ್ ಗೂಂಡಾಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳತ್ತೇವೆ. ಅದೇ ರೀತಿ ಒಳ್ಳೆಯ ಮುಸಲ್ಮಾನರಿಗೆ ಸರ್ಕಾರ ರಕ್ಷಣೆ ನೀಡುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ನಗರದಲ್ಲಿ ಹೇಳಿಕೆ ನೀಡಿದ್ದಾರೆ.
ಎಲ್ಲಾ ಸಂದರ್ಭದಲ್ಲಿ ಹಿಂದೂ ಮತ್ತು ಮುಸಲ್ಮಾನರು ಅಣ್ಣ-ತಮ್ಮಂದಿರಂತೆ ಬದುಕಿಕೊಂಡು ಬಂದವರು. ಕೆಲವು ಮುಸಲ್ಮಾನ್ ಗೂಂಡಾಗಳು ಮಾಡುವ ದುಸ್ಕೃತ್ಯಗಳು ರಾಜ್ಯದ ಜನರನ್ನು ರೊಚ್ಚಿಗೆಬ್ಬಿಸುತ್ತವೆ. ಮೌನವಾಗಿ ವಾಕಿಂಗ್ ಬಂದ ಬಜರಂಗ ದಳದ ಯುವಕ, ಸಂಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ನಾಲ್ಕು ಜನ ಮುಸುಕು ಹಾಕಿಕೊಂಡು ಹೇಡಿಗಳ ರೀತಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದಕ್ಕೆ ಹಿಂದೂ ಸಮಾಜ ಸುಮ್ನೆ ಬಿಡತ್ತಾ? ಆ್ಯಕ್ಷನ್ಗೆ ರಿಯಾಕ್ಷನ್ ಆಗಿದೆ ಎಂದು ಈಶ್ವರಪ್ಪ ಕಿಡಿಕಾರಿದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಜ. 2, 3ಕ್ಕೆ ರಾಜ್ಯ ಬಿಜೆಪಿ ವಿಶೇಷ ಸಭೆ: ಪಕ್ಷಕ್ಕೆ ಇದು ಹೊಸ ತಿರುವು ನೀಡಲಿದೆ ಎಂದ ಈಶ್ವರಪ್ಪ
ಇವುಗಳನ್ನು ತಡೆಗಟ್ಟಲು ಸರ್ಕಾರ ಸಾಕಷ್ಟು ಕ್ರಮ ತೆಗೆದುಕೊಂಡಿದೆ. ಜನರು ಸಹ ನಮಗೆ ಸಹಕಾರ ಕೊಟ್ಟಿದ್ದಾರೆ. ಪೊಲೀಸ್ ಇಲಾಖೆ, ಜಿಲ್ಲಾಡಳಿತ ಸಹ ಬಿಗಿ ಬಂದೋಬಸ್ತ್ ತೆಗೆದುಕೊಂಡಿದೆ. ಇವರಿಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಶಿವಮೊಗ್ಗದಲ್ಲಿ ಗೂಂಡಾಗಿರಿ ಮಾಡಿಕೊಂಡು ಶಾಂತಿ ಕದಡುವವರನ್ನು ಯಾವತ್ತಿಗೂ ಸುಮ್ಮನೆ ಬಿಡುವುದಿಲ್ಲ ಎಂದು ಸಚಿವ ಈಶ್ವರಪ್ಪ ಖಡಕ್ ಸಂದೇಶ ರವಾನಿಸಿದರು.