ETV Bharat / city

ಮಂಗಳೂರಲ್ಲಿ ಸಜೀವ ಬಾಂಬ್ ಪತ್ತೆ ಪ್ರಕರಣ: ಸಚಿವ ಈಶ್ವರಪ್ಪ ಹೇಳಿದ್ದೇನು?

ರಾಜ್ಯದಲ್ಲಿ ಗಲಭೆಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಾಗ ಜೆಡಿಎಸ್, ಕಾಂಗ್ರೆಸ್​ನವರು ಇದು ಪೊಲೀಸರ ಸೃಷ್ಟಿ ಎಂದಿದ್ದರು. ಇದೀಗ ಮಂಗಳೂರಲ್ಲಿ ಸಜೀವ ಬಾಂಬ್ ಸಿಕ್ಕಿದೆ. ಕರ್ನಾಟಕದಲ್ಲಿ ಈ ರೀತಿ ದುಷ್ಕೃತ್ಯವೆಸಗುವ ಸಂಘಟನೆಗಳ ವಿರುದ್ಧ ಎಲ್ಲರೂ ಒಟ್ಟಾಗಿ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

author img

By

Published : Jan 20, 2020, 6:19 PM IST

Minister KS Eshwarappa
ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಗಲಭೆಗಳನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಾಗ ಜೆಡಿಎಸ್, ಕಾಂಗ್ರೆಸ್​ನವರು ಇದು ಪೊಲೀಸರ ಸೃಷ್ಟಿ ಎಂದಿದ್ದರು. ಇದೀಗ ಮಂಗಳೂರಲ್ಲಿ ಸಜೀವ ಬಾಂಬ್ ಸಿಕ್ಕಿದೆ. ಕರ್ನಾಟಕದಲ್ಲಿ ಈ ರೀತಿ ದುಷ್ಕೃತ್ಯ ಎಸಗುವ ಸಂಘಟನೆಗಳ ವಿರುದ್ಧ ಎಲ್ಲರೂ ಒಟ್ಟಾಗಿ ಗಟ್ಟಿ ನಿಲುವು ತೆಗೆದುಕೊಳ್ಳಬೇಕಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಮಂಗಳೂರಲ್ಲಿ ಸಜೀವ ಬಾಂಬ್ ಪತ್ತೆ ಕುರಿತು ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯೆ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷಗಳ ನಡೆಯಿಂದಾಗಿ ದುಷ್ಕೃತ್ಯ ಮಾಡುವವರಿಗೆ ಬೆಂಬಲ ಸಿಕ್ಕಂತಾಗುತ್ತದೆ. ಇಂತಹ ಕೆಲಸ ಮಾಡಲು ಅವರಿಗೆ ಇನ್ನಷ್ಟು ಧೈರ್ಯ ಬರುತ್ತದೆ. ಸಿಸಿ ಕ್ಯಾಮರಾದಲ್ಲಿ ಬಾಂಬ್ ಇಟ್ಟಿರುವುದು ಯಾರು ಅನ್ನೋದು ಗೊತ್ತಾಗಿದೆ. ಕರ್ನಾಟಕ ಶಾಂತಿಯುತವಾಗಿರಬೇಕು. ದುಷ್ಕೃತ್ಯಕ್ಕೆ ಮುಂದಾಗುವ ದುಷ್ಟರನ್ನ ಸದೆಬಡಿಯಲು ಕ್ರಮ ಕೈಗೊಳ್ಳೋಣ. ಅದನ್ನು ಬಿಟ್ಟು ಈ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದು ಸರಿಯಲ್ಲ. ರಾಜಕಾರಣ ಮಾಡಿದರೆ ಎಲ್ಲರಿಗೂ ತೊಂದರೆಯಾಗುತ್ತೆ ಎಂದರು.

ಮಂಗಳೂರಿನಲ್ಲಿ ಬಾಂಬ್ ಪತ್ತೆಯಾಗಿರುವ ಪ್ರಕರಣದಲ್ಲಿ ಭದ್ರತಾ ಲೋಪ ಕಾಣುವುದಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಈಗ ಬಾಂಬ್​ ಅನ್ನು ಪೊಲೀಸರೇ ತಂದಿಟ್ಟಿದ್ದಾರೆ ಎಂದು ಹೇಳುತ್ತಾರೆಯೇ? ಎಂದು ಈಶ್ವರಪ್ಪ ಪ್ರಶ್ನಿಸಿದರು. ಪಿಎಫ್‌ಐ ಹಾಗೂ ಎಸ್​ಡಿಪಿಐ ಸಂಘಟನೆ ನಿಷೇಧಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಭದ್ರತೆ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಮ್ಮೊಂದಿಗೆ ಕೈಜೋಡಿಸಬೇಕೆಂದು ಈಶ್ವರಪ್ಪ ಮನವಿ ಮಾಡಿದ್ರು.

Intro:
ಶಿವಮೊಗ್ಗ,
,ರಾಜ್ಯದಲ್ಲಿ ಗಲಭೆಗಳು ನಡೆದಾಗ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಾಗ ಜೆಡಿಎಸ್ ಕಾಂಗ್ರೆಸ್ ನವರು ಪೊಲೀಸರ ಸೃಷ್ಟಿ ಎಂದಿದ್ದರು. ವಿಪಕ್ಷಗಳ ಈ ನಡೆಯಿಂದಾಗಿ ದುಷ್ಕೃತ್ಯ ಮಾಡುವವರಿಗೆ ಬೆಂಬಲ ನೀಡಿದಂತಾಗುತ್ತದೆ. ಇದೀಗ ಮಂಗಳೂರಿನಲ್ಲಿ ಜೀವಂತ ಬಾಂಬ್ ಸಿಕ್ಕಿದೆ. ಕರ್ನಾಟಕದಲ್ಲಿ ದುಷ್ಕೃತ್ಯ ಮಾಡುವ ಸಂಘಟನೆಗಳ ಬಗ್ಗೆ ಎಲ್ಲರೂ ಒಟ್ಟಾಗಿ ಬಿಗಿ ನಿಲುವು ತೆಗೆದುಕೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗಾರದೊಂದಿಗೆ ಮಾತನಾಡಿದ ಅವರು,

ಇಲ್ಲದಿದ್ದಲ್ಲಿ ದುಷ್ಕೃತ್ಯ ಮಾಡಲು ಅವರಿಗೆ ಇನ್ನಷ್ಟು ದೈರ್ಯ ಬರುತ್ತದೆ. ಸಿಸಿ ಕ್ಯಾಮರಾದಲ್ಲಿ ಬಾಂಬ್ ಇಟ್ಟಿರುವುದು ಯಾರು ಎಂದು ಗೊತ್ತಾಗಿದೆ. ಕರ್ನಾಟಕ ರಾಜ್ಯ ಶಾಂತಿಯುತವಾಗಿರಬೇಕು. ದುಷ್ಕೃತ್ಯ ಮಾಡುವ ದುಷ್ಟರನ್ನ ಸದೆಬಡಿಯಲು ಕ್ರಮ ಕೈಗೊಳ್ಳೋಣ. ಅದನ್ನು ಬಿಟ್ಟು ಈ ವಿಷಯದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದು ಸರಿಯಲ್ಲ. ಈ ವಿಷಯದಲ್ಲಿ ರಾಜಕಾರಣ ಮಾಡಿದರೆ ಹಿಂದು ಮುಸ್ಲಿಮರು ಎಲ್ಲರಿಗೂ ತೊಂದರೆಯಾಗುತ್ತೆ ಎಂದರು.
ಮಂಗಳೂರಿನಲ್ಲಿ ಬಾಂಬ್ ಪತ್ತೆಯಾಗಿರುವ ಪ್ರಕರಣದಲ್ಲಿ ಭದ್ರತಾ ಲೋಪ ಕಾಣುವುದಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರು ಈಗ ಬಾಂಬನ್ನು ಪೊಲೀಸರೇ ತಂದಿಟ್ಟಿದ್ದಾರೆ ಎಂದು ಹೇಳುತ್ತಾರೆಯೇ ? ಎಂದು ಪ್ರಶ್ನಿಸಿದ ಅವರು, ಪಿಎಫ್‌ಐ ಹಾಗೂ ಎಸ್ ಡಿಪಿಐ ಸಂಘಟನೆ ನಿಷೇಧಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಭದ್ರತೆ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಮ್ಮೊಂದಿಗೆ ಇರಬೇಕು ಎಂದು ಈಶ್ವರಪ್ಪ ಮನವಿ ಮಾಡಿದರು. ರಾಜ್ಯ ಒಟ್ಟಾದಾಗ ದುಷ್ಟ ಶಕ್ತಿಗಳು ಸುಮ್ಮನಾಗುತ್ತವೆ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.