ETV Bharat / city

ಸಮಸ್ಯೆ ಚರ್ಚಿಸಲು ಅಧಿವೇಶನಕ್ಕೆ ಬನ್ನಿ: ಕೈ ಮುಗಿದು ಕೇಳಿಕೊಂಡ ಸಚಿವ ಈಶ್ವರಪ್ಪ

ಅಧಿವೇಶನ ನಡೆಸಲು ಪ್ರತಿದಿನ 80 ಲಕ್ಷದಿಂದ ಒಂದೂವರೆ ಕೋಟಿ ರೂ ಖರ್ಚಾಗುತ್ತದೆ. ಯಾರ ದುಡ್ಡು ಅದು?. ಇದೊಂದು ವಿಷಯ ಇಟ್ಟುಕೊಂಡು ಸಾಮಾನ್ಯ ಜನರ ದುಡ್ಡನ್ನು ಈ ರೀತಿ ಹಗಲು ರಾತ್ರಿ ಧರಣಿ ಮಾಡಿ ಹಾಳು ಮಾಡಬೇಡಿ. ಜನರ ಸಮಸ್ಯೆ ಬಗ್ಗೆ ಚರ್ಚಿಸಲು ವಿಧಾನಸಭೆ, ಪರಿಷತ್​ಗೆ ಬನ್ನಿ ಅಂತಾ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಈಶ್ವರಪ್ಪ ಮನವಿ ಮಾಡಿದರು.

eshwarappa
ಈಶ್ವರಪ್ಪ ಮನವಿ
author img

By

Published : Feb 20, 2022, 1:07 PM IST

Updated : Feb 20, 2022, 2:20 PM IST

ಶಿವಮೊಗ್ಗ: ನಾನು ದೇಶದ ಹಿತದೃಷ್ಟಿಯಿಂದ ಏನು ಹೇಳಬೇಕಿತ್ತೋ ಅದನ್ನು ತುಂಬಾ ಸ್ಪಷ್ಟವಾಗಿ ಹೇಳಿದ್ದೇನೆ. ರಾಷ್ಟ್ರಧ್ವಜ ಅಂದ್ರೆ ನನಗೆ ತಾಯಿ ಸಮಾನ. ಆ ಬಗ್ಗೆ ಅಪಮಾನ ಮಾಡಿದವರು ರಾಷ್ಟ್ರದ್ರೋಹಿ ಆಗ್ತಾರೆ ಅಂತಾ ಸ್ಪಷ್ಟಪಡಿಸಿದ್ದೇನೆ. ಕಾಂಗ್ರೆಸ್​ನವರ ಇಂತಹ ಹೋರಾಟಗಳಿಗೆ ಹಿಗ್ಗಲ್ಲ, ಜಗ್ಗಲ್ಲ, ಬಗ್ಗಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನೊಂದು ಹೇಳೋದು, ಬಿ.ಕೆ.ಹರಿಪ್ರಸಾದ್ ಒಂದು ಹೇಳೋದು, ಅದಕ್ಕೆ ಡಿಕೆಶಿ ಒಂದು ಹೇಳ್ತಾರೆ. ನಮ್ಮ ನಾಯಕರು ಒಂದು ಹೇಳೋದು. ಇದನ್ನೇ ಮಾಡಿಕೊಂಡು ಹೋಗೋಣ. ಈಗಾಗಲೇ ನಾನು ಸ್ಪಷ್ಟಪಡಿಸಿದ್ದೇನೆ. ಇನ್ನು ನನ್ನ ಕೆಲಸ ಮುಗೀತು. ಈ ಬಗ್ಗೆ ಚರ್ಚೆ ಮಾಡಲು ಹೋಗುವುದಿಲ್ಲ. ಈ ವಿಷಯವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದರು.

ಸಮಸ್ಯೆ ಚರ್ಚಿಸಲು ಅಧಿವೇಶನಕ್ಕೆ ಬನ್ನಿ

ವಿಪಕ್ಷ ನಾಯಕರು ಅವರ ಕೆಲಸ ಅವರು ಮಾಡಲಿ ನಮಗೆ ಅಭ್ಯಂತರ ಇಲ್ಲ. ನಾವು ವಿಪಕ್ಷದಲ್ಲಿದ್ದಾಗ ರೈತರ ಪರವಾಗಿ, ಸಾಮಾನ್ಯ ಜನರ ಪರವಾಗಿ ಹಗಲು ರಾತ್ರಿ ಸಾಕಷ್ಟು ಧರಣಿ ಮಾಡಿದ್ದೇವೆ. ಆದರೆ, ಅವರು ಈ ವಿಷಯ ಇಟ್ಟುಕೊಂಡು ಧರಣಿ ಮಾಡ್ತಿದ್ದಾರೆ. ಸಂತೋಷ ಅವರು ಮಾಡಿಕೊಂಡು ಹೋಗಲಿ. ಕಾಂಗ್ರೆಸ್​ನವರ ಜೊತೆ ಸಿಎಂ, ಸ್ವೀಕರ್, ಸಭಾಪತಿ ಅವರು ಚರ್ಚೆ ನಡೆಸಿದ್ದಾರೆ. ಹಠ ಮಾಡಿಕೊಂಡು ಮುಂದುವರಿದರೆ ನಾನೇನು ಮಾಡಲು ಬರಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಆ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ ಬನ್ನಿ ಅಂತಾ ಪ್ರೀತಿಯಿಂದ ನಾನು ಸಹ ಕರೆಯುತ್ತೇನೆ. ಪ್ರೀತಿಯಿಂದ ಕರೆಯುತ್ತೀನಿ ಅಂದಾಕ್ಷಣ ಹೆದರಿಕೆಯಿಂದ ಈಶ್ವರಪ್ಪ ಕರೆದ್ರು ಅನ್ನುವುದಲ್ಲ. ಇದರಲ್ಲಿ ಆಗಿದ್ದು ಆಗಿದೆ. ಅವರು ಅವರ ಅಭಿಪ್ರಾಯ ತಿಳಿಸಿದ್ದಾರೆ. ಉಳಿದಿದ್ದನ್ನು ರಾಜ್ಯದ ಜನ ತೀರ್ಮಾನ ಮಾಡ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.ಇದನ್ನು ಇಲ್ಲಿಗೆ ಮುಗಿಸಿ, ರಾಜ್ಯದ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಅನ್ನೋದು ರಾಜ್ಯದ ಜನರ ಅಭಿಪ್ರಾಯ. ಚರ್ಚೆ ಮಾಡಬೇಕು ಎಂಬುದು ನನ್ನ ಆಸೆ ಕೂಡ. ಇದಕ್ಕೆ ಅವರು ಸ್ಪಂದಿಸುತ್ತಾರೆ ಅಂತಾ ನಾನು ಭಾವಿಸುತ್ತೇನೆ. ವಿಧಾನ ಸಭೆ, ವಿಧಾನ ಪರಿಷತ್​​ನಲ್ಲಿ ಪಕ್ಷಗಳು ಬೇರೆ ಬೇರೆ ಇರಬಹುದು. ಸ್ನೇಹದಲ್ಲಿ‌ ನನಗೆ ಏನೂ ತೊಂದರೆ ಇಲ್ಲ, ನನಗೆ ಎಲ್ಲರೂ ಸ್ನೇಹಿತರೇ. ಅವರ ಅಭಿಪ್ರಾಯವನ್ನು ರಾಜ್ಯಕ್ಕೆ ತಿಳಿಸಿ ಆಯ್ತು. ಸೋಮವಾರದಿಂದ ಜನರ ಮಧ್ಯೆ ಹೋಗ್ತೀವಿ ಅಂತಾ ಡಿಕೆಶಿ ಹೇಳ್ತಾರೆ. ಹೊರಗೆ ಪ್ರತಿಭಟನೆ ಮಾಡಲಿ ಆದರೆ ವಿಧಾನಸಭೆ ನಡೆಸಲು ಬಿಡಲಿ ಎಂದರು.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮನವಿ ಮಾಡ್ತೇನೆ. ರಾಜ್ಯದ ಜ್ವಲಂತ ಸಮಸ್ಯೆ ನೂರಾರಿವೆ. ನಮ್ಮ ಗಮನಕ್ಕೂ ತನ್ನಿ. ನಾವು ಏನೇನು ತಿದ್ದಿಕೊಳ್ಳಬೇಕೋ ತಿದ್ದುಕೊಂಡು ಜನರ ಸಮಸ್ಯೆ ಪರಿಹಾರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡ್ತೇವೆ. ರಾಷ್ಟ್ರಧ್ವಜ ವಿಷಯದ ಬಗ್ಗೆ ಜನರ ಮಧ್ಯೆ ಹೋಗೋಣ, ನೀವು ಹೋಗಿ. ನಾವು ಹೋಗ್ತೀವಿ. ಜನ ತೀರ್ಮಾನ ಮಾಡ್ತಾರೆ. ವಿಧಾನಸಭೆ ಇರೋದು ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಸಲುವಾಗಿ. ಈಗಾಗಲೇ ಇಡೀ ಒಂದು ವಾರ ಕಳೆದು ಹೋಗಿದೆ. ಇನ್ನು ಉಳಿಯುವ ದಿನದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡೋಣ. ಈ ಬಗ್ಗೆ ಚರ್ಚೆ ಮಾಡಿದರೆ ಸರ್ಕಾರ ನಾವು ಸಾಕಷ್ಟು ಉತ್ತರ ಕೊಡ್ತೇವೆ. ಅಧಿವೇಶನ ನಡೆಸಲು ಪ್ರತಿದಿನ 80 ಲಕ್ಷದಿಂದ ಒಂದೂವರೆ ಕೋಟಿ ಖರ್ಚು ಆಗುತ್ತದೆ. ಯಾರು ದುಡ್ಡು ಅದು. ಇದೊಂದು ವಿಷಯ ಇಟ್ಟುಕೊಂಡು ಸಾಮಾನ್ಯ ಜನರ ದುಡ್ಡನ್ನು ಈ ರೀತಿ ಹಗಲು ರಾತ್ರಿ ಧರಣಿ ಮಾಡಿ ಹಾಳು ಮಾಡಬೇಡಿ. ಜನರ ಸಮಸ್ಯೆ ಬಗ್ಗೆ ಚರ್ಚಿಸಲು ವಿಧಾನಸಭೆ, ಪರಿಷತ್​ಗೆ ಬನ್ನಿ ಅಂತಾ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

Last Updated : Feb 20, 2022, 2:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.