ETV Bharat / city

ರಾಷ್ಟ್ರದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಪ್ರೊ. ಗಿರೀಶ್​ಗೆ ಮೂರನೇ ಸ್ಥಾನ

ಕಳೆದ ಕೆಲವು ವರ್ಷಗಳಿಂದೀಚೆಗೆ ರಾಷ್ಟ್ರಮಟ್ಟದ ವಿವಿಧ ಮಾನದಂಡಗಳಲ್ಲಿ ಮುಂಚೂಣಿಯ ವಿಜ್ಞಾನಿಯಾಗಿ ಗುರುತಿಸಿ ಕೊಂಡಿರುವ ಪ್ರೊ. ಬಿ.ಜೆ. ಗಿರೀಶ್ ಅವರ ಸಂಶೋಧನಾ ಕೊಡುಗೆ ಹೀಗೇ ಮುಂದುವರೆಯಲಿ ಮತ್ತು ಇತರ ಸಂಶೋಧಕರಿಗೆ ಸ್ಫೂರ್ತಿಯಾಗಲಿ ಎಂದು ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಹಾಗೂ ಕುಲಸಚಿವೆ ಜಿ. ಅನುರಾಧ ಹಾರೈಸಿದ್ದಾರೆ..

Girish
ಪ್ರೊ. ಬಿ.ಜೆ. ಗಿರೀಶ್
author img

By

Published : Mar 25, 2022, 5:57 PM IST

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಬಿ.ಜೆ. ಗಿರೀಶ್ ಅವರು ರಾಷ್ಟ್ರಮಟ್ಟದ ಮೆಕಾನಿಕಲ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ ವಿಭಾಗದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ. 2014ರಿಂದ ಈ ವಿಷಯಗಳ ಸಂಶೋಧನೆ ಕುರಿತಂತೆ ವಿಶ್ವಾಸಾರ್ಹ ದತ್ತಾಂಶ ನೀಡುತ್ತಾ ಬಂದಿರುವ ರಿಸರ್ಚ್ ಡಾಟ್ ಕಾಂ ಹೊರ ತಂದಿರುವ ನೂತನ ರಾಂಕಿಂಗ್ ಪಟ್ಟಿಯಲ್ಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ.

2021ರ ಡಿಸೆಂಬರ್ ತಿಂಗಳವರೆಗಿನ ಸಂಶೋಧನಾ ಪ್ರಕಟಣೆಗಳು ಮತ್ತು ಉಲ್ಲೇಖಗಳನ್ನೊಳಗೊಂಡ ಹೆಚ್ ಇಂಡೆಕ್ಸ್ ಆಧರಿಸಿ ರಾಂಕಿಂಗ್ ಪಟ್ಟಿ ಸಿದ್ಧ ಪಡಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ರಾಷ್ಟ್ರಮಟ್ಟದ ವಿವಿಧ ಮಾನದಂಡಗಳಲ್ಲಿ ಮುಂಚೂಣಿಯ ವಿಜ್ಞಾನಿಯಾಗಿ ಗುರುತಿಸಿ ಕೊಂಡಿರುವ ಪ್ರೊ. ಬಿ.ಜೆ. ಗಿರೀಶ್ ಅವರ ಸಂಶೋಧನಾ ಕೊಡುಗೆ ಹೀಗೇ ಮುಂದುವರೆಯಲಿ ಮತ್ತು ಇತರ ಸಂಶೋಧಕರಿಗೆ ಸ್ಫೂರ್ತಿಯಾಗಲಿ ಎಂದು ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಹಾಗೂ ಕುಲಸಚಿವೆ ಜಿ. ಅನುರಾಧ ಹಾರೈಸಿದ್ದಾರೆ.

ಇದನ್ನೂ ಓದಿ: ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ಕೋರಿ ಪಿಐಎಲ್ : ಸರ್ಕಾರಕ್ಕೆ ನೋಟಿಸ್

For All Latest Updates

TAGGED:

Shimogga
ETV Bharat Logo

Copyright © 2024 Ushodaya Enterprises Pvt. Ltd., All Rights Reserved.