ಶಿವಮೊಗ್ಗ: ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಸೊರಬದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಸಹ ಕಾರ್ಯವಾಹರಾದ ಶ್ರೀ ಪಟ್ಟಾಭಿರಾಮ್ ಅವರಿಗೆ ಶಾಸಕ ಕುಮಾರ್ ಬಂಗಾರಪ್ಪ 5 ಲಕ್ಷ ರೂ.ಗಳ ಚೆಕ್ ಸಮರ್ಪಿಸಿದರು.
ಈ ಸಂಧರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಪ್ರಮುಖರಾದ ರಾಜರಾಮ್, ತಾಲೂಕು ಪ್ರಮುಖರಾದ ಅಚ್ಯುತ್ ರಾವ್, ತಾಲೂಕು ವ್ಯವಸ್ಥಾಪಕ ಪ್ರಮುಖರಾದ ಸುಧಾಕರ ಭಾವೆ, ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖಂಡರಿದ್ದರು.