ETV Bharat / city

ಓವೈಸಿ ರಾಷ್ಟ್ರಭಕ್ತಿಯನ್ನು ಹೃದಯದಲ್ಲಿ ಇಟ್ಟುಕೊಳ್ಳಬೇಕು: ಕೆ.ಎಸ್. ಈಶ್ವರಪ್ಪ - ಹಿಂದೂಗಳ ಹತ್ಯೆ

ಸಂಸದ ಅಸಾದುದ್ದಿನ್ ಓವೈಸಿ ಅವರದು ಕಂಠದ ಮೇಲಿನ ದೇಶ ಪ್ರೇಮ ಅಷ್ಟೇ. ಅದು ನಿಜವಾದ ದೇಶ ಪ್ರೇಮ ಅಲ್ಲ. ಬಿಜೆಪಿ ಸರ್ಕಾರ ಕಾಶ್ಮೀರಿ ಹಿಂದುಗಳಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತದೆ ಎಂದು ಈಶ್ವರಪ್ಪ ಹೇಳಿಕೆ ನೀಡಿದರು.

K S Eshwarappa reaction about Asaduddin Owaisi statement
ಓವೈಸಿ ರಾಷ್ಟ್ರಭಕ್ತಿಯನ್ನು ಕುತ್ತಿಗೆ ಮೇಲ್ಭಾಗದಲ್ಲಿ ಹೃದಯದಲ್ಲೂ ಇಟ್ಟು ಕೊಳ್ಳಬೇಕು
author img

By

Published : Jun 4, 2022, 5:56 PM IST

Updated : Jun 4, 2022, 6:04 PM IST

ಶಿವಮೊಗ್ಗ: ಓವೈಸಿ ರಾಷ್ಟ್ರ ಭಕ್ತಿ ಎಂದರೆ ಏನೂ ಅಂತ ಮೊದಲು ಕಲಿಯಲಿ. ದೇಶಭಕ್ತಿಯನ್ನು ಅವರು ಕುತ್ತಿಗೆ ಮೇಲೆ ಮಾತ್ರ ಅಲ್ಲ, ಹೃದಯದಲ್ಲೂ ಇಟ್ಟುಕೊಳ್ಳಬೇಕು ಎಂದು ಎಐಎಂಐಎಂ ಪಕ್ಷದ ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಓವೈಸಿ ರಾಷ್ಟ್ರಭಕ್ತಿಯನ್ನು ಕುತ್ತಿಗೆ ಮೇಲ್ಭಾಗದಲ್ಲಿ ಹೃದಯದಲ್ಲೂ ಇಟ್ಟು ಕೊಳ್ಳಬೇಕು

ಪಾಕಿಸ್ತಾನ ಮುಂಚೆ ನಮ್ಮ ಸೈನಿಕರನ್ನು ಹುಳುಗಳಂತೆ ನೋಡುತ್ತಿತ್ತು. ಕಾಶ್ಮೀರದಲ್ಲಿ ಕೆಲ ಉಗ್ರರು ಅಲ್ಲಿನ ನಾಯಕರನ್ನು ಕೊಲ್ಲುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಶ್ಮೀರಕ್ಕೆ ಹೋಗಿ ಸಭೆ ನಡೆಸುತ್ತಿದ್ದಾರೆ. ಹೇಡಿ ಉಗ್ರರು ಕದ್ದು ಮುಚ್ಚಿ ಕೊಲೆ ನಡೆಸುತ್ತಿದ್ದಾರೆ. ನಮ್ಮ ದೇಶದ ಪ್ರಧಾನಿ‌ ಮೋದಿ ರಕ್ಷಣೆ ಮಾಡುತ್ತಿದ್ದಾರೆ. ಕಾಶ್ಮೀರದಲ್ಲಿ ಈಗ ಮತ್ತೆ ಬಾಲ ಬಿಚ್ಚಿದ್ದಾರೆ. ಅವರಿಗೆ ತಕ್ಕ ಪಾಠವನ್ನು ಶೀಘ್ರದಲ್ಲಿಯೇ ಕಲಿಸುತ್ತಾರೆ ಎಂದರು.

ಇದನ್ನೂ ಓದಿ: ಭಾರತ - ಪಾಕ್ ಗಡಿಯಲ್ಲಿ ತಡರಾತ್ರಿ ಡ್ರೋನ್ ಚಲನೆ.. ಗುಂಡು ಹಾರಿಸಿದ ಯೋಧ!

Last Updated : Jun 4, 2022, 6:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.