ಶಿವಮೊಗ್ಗ : ಮಕ್ಕಳನ್ನು ಕೊರೊನಾದಿಂದ ರಕ್ಷಿಸುವ ಬಗೆ ಮತ್ತು ಕವಾಸಕಿ ರೋಗದ ಕುರಿತು ಹಾಗೂ ಮಕ್ಕಳಲ್ಲಿ ಯಾವೆಲ್ಲಾ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎನ್ನುವ ಹಲವಾರು ಗೊಂದಲಗಳಿಗೆ ಶಿವಮೊಗ್ಗದ ಸರ್ಜಿ ಖಾಸಗಿ ಆಸ್ಪತ್ರೆ ಮಕ್ಕಳ ತಜ್ಞರಾದ ಡಾ. ಧನಂಜಯ ಸರ್ಜಿ ಅವರು ಸ್ಟಷ್ಟ ಮಾಹಿತಿ ನೀಡಿದ್ದಾರೆ.
ಈ ಕುರಿತು ಈಟಿವಿ ಭಾರತ್ ನಡೆಸಿದ ಸಂದರ್ಶನದಲ್ಲಿ ಮಾಹಿತಿ ನೀಡಿರುವ ತಜ್ಞರು, ಈ ಹಿಂದೆ ಕವಾಸಕಿ ಪ್ರಕರಣಗಳು ತಿಂಗಳಲ್ಲಿ ಒಂದು ಕಾಣಿಸಿಕೊಳ್ಳುತ್ತಿತ್ತು, ಈಗ ಹೆಚ್ಚಾಗುತ್ತಿವೆ.
ಹಾಗಾಗಿ, ಪೋಷಕರು ತಮ್ಮ ಮಕ್ಕಳಿಗೆ ಮೂರು ದಿನಕ್ಕಿಂತ ಹೆಚ್ಚು ಜ್ವರ, ಕಣ್ಣು ಕೆಂಪಾದರೆ, ಮೈಮೇಲೆ ರ್ಯಾಸೇಸ್ ಕಂಡು ಬಂದರೆ, ಊಟ ಬಿಟ್ಟು ಡಲ್ ಆಗಿದ್ದರೆ, ಪೀಡ್ಸ್ ಬರುತ್ತಿದ್ದರೆ, ಚರ್ಮ ಸುಳಿಯುತ್ತಿದ್ದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.