ETV Bharat / city

ಮಳೆಯಿಂದ ಮನೆಗಳಿಗೆ ಹಾನಿ, ಪರಿಹಾರ ನೀಡದ ಭದ್ರಾವತಿ ತಾಲೂಕು ಆಡಳಿತ: ಜನರ ಹಿಡಿಶಾಪ - ಈಟಿವಿ ಭಾರತ್ ಕನ್ನಡ

ಮುಖ್ಯಮಂತ್ರಿಗಳು ಮಳೆಹಾನಿಗೆ ತುರ್ತು ಪರಿಹಾರ ಘೋಷಿಸಿದರೂ ಜನರಿಗೆ ಕೆಲವೊಂದೆಡೆ ತಲುಪುತ್ತಿಲ್ಲ. ಮನೆ ಕುಸಿದರೂ ಅಧಿಕಾರಿಗಳು ಬಂದು ಪರಿಶೀಲಿಸುವ ಕಾರ್ಯವನ್ನು ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

house damage due to rain
ಮಳೆಯಿಂದಾದ ಮನೆ ಹಾನಿ
author img

By

Published : Aug 9, 2022, 7:28 PM IST

Updated : Aug 9, 2022, 7:39 PM IST

ಶಿವಮೊಗ್ಗ : ಮಳೆ ಬಂದು ಮನೆ ಬಿದ್ದವರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಸಿಎಂ ಆದೇಶ ಹೊರಡಿಸಿದರೂ ಸಹ ಭದ್ರಾವತಿ ತಾಲೂಕು ಆಡಳಿತ ಮಾತ್ರ ಮನೆ ಬಿದ್ದವರಿಗೆ ಇನ್ನೂ ತಕ್ಷಣದ ಪರಿಹಾರವನ್ನು ನೀಡಿಲ್ಲವಂತೆ. ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಹಳೆಯ ಮಣ್ಣಿನ ಮನೆಗಳು‌ ಹಾಗೂ ಸ್ಲಂನಲ್ಲಿನ ಮನೆಗಳು ಧರೆಗುರುಳುತ್ತಿವೆ. ತಮ್ಮ ಮನೆ ಬಿದ್ದಿದೆ ಎಂದು‌ ಸ್ಥಳೀಯ ನಗರಸಭೆ, ಮಹಾನಗರ ಪಾಲಿಕೆ ಸದಸ್ಯರ ಮೂಲಕ ತಾಲೂಕು‌ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಸಹ ತಾಲೂಕು ಆಡಳಿತ ಗಮನ ಹರಿಸುತ್ತಿಲ್ಲ ಎಂಬುದು ನೆರೆ ಸಂತ್ರಸ್ತರ ಆರೋಪವಾಗಿದೆ.

house damage due to rain
ಮಳೆಯಿಂದಾಗಿ ಮನೆ ಹಾನಿ

ಮಳೆ, ನೆರೆ ಬಂದಾಗ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕಾದ ತಹಶೀಲ್ದಾರ್​ಗಳು ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂಬ ಸಬೂಬು ಹೇಳಿ ಜನರಿಗೆ ಇನ್ನಷ್ಟು ಸಂಕಷ್ಟ ನೀಡುತ್ತಿದ್ದಾರೆ. ಭದ್ರಾವತಿ ಪಟ್ಟಣದ ಸುರಗಿನತೋಪು ಬಡಾವಣೆ ಕೊಳಚೆ ಪ್ರದೇಶವಾಗಿದ್ದು, ಇಲ್ಲಿ ತಮಗೆ ಅನುಕೂಲಕರವಾದ ರೀತಿಯಲ್ಲಿ‌ ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಸುರಗಿತೋಪಿನಲ್ಲಿ ಈಗಾಗಲೇ ಹತ್ತಾರು ಮನೆಗಳು ಬಿದ್ದಿವೆ. ಇಲ್ಲಿಗೆ ಸ್ಥಳೀಯ ವಾರ್ಡ್​ನ ನಗರಸಭೆ ಸದಸ್ಯರಾದ ಜಯಶೀಲ ಸುರೇಶ್ ಅವರು ಬಂದು ಹೋಗಿದ್ದು ಬಿಟ್ಟರೆ, ಬೇರೆ ಯಾವ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.

ಮಳೆಯಿಂದಾದ ಮನೆ ಹಾನಿಗೆ ಪರಿಹಾರ ನೀಡದ ಭದ್ರಾವತಿ ತಾಲೂಕು ಆಡಳಿತ

ನಗರಸಭೆ ಸದಸ್ಯರಾದ ಜಯಶೀಲ ಸುರೇಶ್ ಅವರು ಮನೆ ಬಿದ್ದ ತಕ್ಷಣ ಬಂದು ಸಹಾಯ ಮಾಡಿದ್ದಾರೆ. ಆದ್ರೆ ಅವರು ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು‌ ಬೇಸರ ವ್ಯಕ್ತಪಡಿಸಿದ್ದಾರೆ. ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಅವರು ಈಗಲಾದರೂ ಜನರ‌ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.

ಕವಲಗುಂದಿ ಜನರಿಗೆ ಸಿಗದ ಪರಿಹಾರ: ಹೊಳೆ‌ ನೀರು ಬಂದಾಗ ಕಾಳಜಿ ಕೇಂದ್ರಕ್ಕೆ ಹೋಗೋದು, ನೀರು ಇಳಿದ ಮೇಲೆ ಮನೆಗೆ ಬರೋದಷ್ಟೆ ಆಗಿದೆ, ನಮಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ ಎಂಬುದು ಪ್ರತಿ ಬಾರಿ‌ ಭದ್ರೆಯ ಕೋಪಕ್ಕೆ ತುತ್ತಾಗುವ ಕವಲಗುಂದಿ‌ ನಿವಾಸಿಗಳ ಆರೋಪವಾಗಿದೆ.

ಕವಲಗುಂದಿಯ ನಿವಾಸಿಗಳು ಅತ್ಯಂತ ಕಡುಬಡವರು, ಇವರೆಲ್ಲಾ ಕೂಲಿ ಮಾಡಿ‌ಯೇ ಜೀವನದ ಬಂಡಿ ಸಾಗಿಸಬೇಕು.‌ ಇವರಿಗೆ ಹೊಳೆ‌ ನೀರಿನಿಂದ ಶಾಶ್ವತ ಪರಿಹಾರ ಬೇಕಿದೆ. ಈಗಾಗಲೇ ಜೆ.ಡಿ. ಕಟ್ಟೆಯಲ್ಲಿ ಗುರುತಿಸಿರುವ ನಿವೇಶನ ಸರಿಯಾಗಿಲ್ಲ,‌ ಅಲ್ಲದೆ ಹಕ್ಕುಪತ್ರವನ್ನು ನೀಡಿಲ್ಲ. ತಮಗೆ ಶಾಶ್ವತ ಪರಿಹಾರವನ್ನು‌ ನೀಡಬೇಕೆಂದು ಕವಲಗುಂದಿಯ‌ ನಿವಾಸಿ‌ ಕಮಲಮ್ಮ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಮಳೆಗೆ ಬಿದ್ದ ಮನೆ, ಶೌಚಾಲಯದಲ್ಲೇ ಮಹಿಳೆಯ ವಾಸ: ಸ್ಥಳಕ್ಕೆ ತಹಶೀಲ್ದಾರ್ ಭೇಟಿ

Last Updated : Aug 9, 2022, 7:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.