ETV Bharat / city

ಸಂಜೆಯೊಳಗೆ ತುಮಕೂರು ಗಾಯಾಳುಗಳ ಆರೋಗ್ಯ ವಿಚಾರಿಸುವೆ: ಗೃಹ ಸಚಿವ - tumkur bus accident

ಪಾವಗಡದ ಬಳಿ ಖಾಸಗಿ ಬಸ್​ ಪಲ್ಟಿಯಾಗಿದ್ದು, ಸಂಜೆಯೊಳಗೆ ತುಮಕೂರು ತಲುಪಿ ಗಾಯಾಳುಗಳ ಆರೋಗ್ಯ ವಿಚಾರಿಸುವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

Araga jnanendra reacts on pavagada bus accident
ಪಾವಗಡ ಬಸ್​ ಅಪಘಾತದ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ
author img

By

Published : Mar 19, 2022, 1:09 PM IST

ಶಿವಮೊಗ್ಗ: ಪಾವಗಡ ಬಳಿ ನಡೆದ ಬಸ್​ ಅಪಘಾತದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇನೆ. ನಾನು ಸಂಜೆಯೊಳಗೆ ತುಮಕೂರು ತಲುಪಿ, ಗಾಯಾಳುಗಳ ಆರೋಗ್ಯ ವಿಚಾರಿಸುವೆ ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ತಿಳಿಸಿದ್ದಾರೆ.

ಪಾವಗಡ ಬಸ್​ ಅಪಘಾತದ ಬಗ್ಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾವಗಡ ಸಮೀಪದಲ್ಲಿ ನಡೆದ ಬಸ್ ಅಪಘಾತದಲ್ಲಿ ಬಹಳ ಮಂದಿ ಗಾಯಗೊಂಡಿದ್ದಾರೆ. ಹಲವರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ವರದಿ ಬರುತ್ತಿದೆ. ಸುಮಾರು 8 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ನಾನು ಸ್ಥಳಕ್ಕೆ ಡಿಸಿ ಹಾಗೂ ಎಸ್​​ಪಿ ಅವರನ್ನು ಕಳುಹಿಸಿದ್ದೇನೆ.

ಇದನ್ನೂ ಓದಿ: ಪಾವಗಡದ ಬಳಿ ಖಾಸಗಿ ಬಸ್​ ಪಲ್ಟಿ: 5 ಮಂದಿ ಸಾವು, 25ಕ್ಕೂ ಅಧಿಕ ಮಂದಿಗೆ ಗಾಯ

ಸುಮಾರು 13-14 ಆ್ಯಂಬುಲೆನ್ಸ್​​ಗಳಲ್ಲಿ ಗಾಯಾಳುಗಳನ್ನು ತಾಲೂಕು ಹಾಗೂ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಸೂಚನೆ ಕೊಟ್ಟಿದ್ದೇವೆ ಎಂದರು. ಈಗಾಗಲೇ ಇಡೀ ಜಿಲ್ಲಾಡಳಿತ ಸ್ಥಳದಲ್ಲಿದ್ದು, ರಕ್ಷಣಾ ಕೆಲಸ ಮಾಡಲಾಗುತ್ತಿದೆ‌. ಗಂಭೀರವಾಗಿ ಗಾಯಗೊಂಡಿರುವವರನ್ನು ಸಾಧ್ಯವಾದರೆ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.