ETV Bharat / city

ಹಿಜಾಬ್​-ಕೇಸರಿ ಗಲಾಟೆ: ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ಸಂಬಂಧ ಶಿವಮೊಗ್ಗದ ಬಾಪೂಜಿ ನಗರ ಕಾಲೇಜಿನಿಂದ ಬಿ.ಹೆಚ್. ರಸ್ತೆಯ ಮೂಲಕ ಮೆರವಣಿಗೆ ನಡೆಸಲು ಮುಂದಾದ ಗುಂಪಿಗೆ ಎಸ್ಪಿ ಮೆರವಣಿಗೆ ನಡೆಸುವುದು ಬೇಡ ಎಂದು ಹೇಳಿದರು. ಕೇಳದೆ ಹೋದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

author img

By

Published : Feb 8, 2022, 1:00 PM IST

Updated : Feb 8, 2022, 5:18 PM IST

lathi
ಶಿವಮೊಗ್ಗದಲ್ಲಿ ಉದ್ರಿಕ್ತ ಗುಂಪಿನ ಮೇಲೆ ಪೊಲೀಸರಿಂದ ಲಘು ಲಾಠಿ ಪ್ರಹಾರ

ಶಿವಮೊಗ್ಗ: ಕೇಸರಿ ಶಾಲು ಹಾಗೂ ಹಿಜಾಬ್ ವಿವಾದ ಶಿವಮೊಗ್ಗದಲ್ಲಿ ದಿನೇ ದಿನೇ ತಾರಕಕ್ಕೆ ಏರುತ್ತಿದೆ. ನಿನ್ನೆ ಕಾಲೇಜು ಆವರಣಗಳಿಗೆ ಸಿಮೀತವಾಗಿದ್ದ ವಿವಾದ ಇಂದು ರಸ್ತೆಗೆ ಬಂದಿದ್ದು, ಜಿಲ್ಲಾಧಿಕಾರಿಗಳ ಕಚೇರಿಗೂ ತಲುಪಿದೆ. ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಕೇಸರಿ ಶಾಲು, ಹಿಜಾಬ್ ಬೆಂಬಲಿಗ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಇಂದು ಕೇಸರಿ ಶಾಲನ್ನು ಧರಿಸಿದ್ದ ವಿದ್ಯಾರ್ಥಿಗಳು ಡಿಸಿ ಕಚೇರಿಗೆ ತಲುಪಿ ಪ್ರತಿಭಟನೆ ನಡೆಸಿದರು. ಇತ್ತ ಹಿಜಾಬ್ ಬೆಂಬಲಿಸುವ ಗುಂಪು ಸಹ ಮೆರವಣಿಗೆ ಹೊರಡುವಾಗ ಪೊಲೀಸರು ತಡೆದರು.

ರಸ್ತೆಗಿಳಿದವರಿಗೆ ಪೊಲೀಸರ ಲಾಠಿ ರುಚಿ: ಬಾಪೂಜಿ ನಗರ ಕಾಲೇಜಿನಿಂದ ಬಿ.ಹೆಚ್. ರಸ್ತೆಯ ಮೂಲಕ ಮೆರವಣಿಗೆ ನಡೆಸಲು ಮುಂದಾದ ಗುಂಪಿಗೆ ಎಸ್ಪಿ ಲಕ್ಷ್ಮಿ ಪ್ರಸಾದ್ ರವರು ಮೆರವಣಿಗೆ ನಡೆಸುವುದು ಬೇಡ ಎಂದು ಹೇಳಿದ್ರು. ಕೇಳದೆ ಹೋದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಇದರಿಂದ ಅರ್ಧ ಜನ ಓಡಿ ಹೋದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಕೇಸರಿ ಶಾಲು, ಹಿಜಾಬ್ ಬೆಂಬಲಿಗ ವಿದ್ಯಾರ್ಥಿಗಳ ನಡುವೆ ಕಲ್ಲು ತೂರಾಟ!

ಇಷ್ಟಾದರೂ ಸಹ ವಿದ್ಯಾರ್ಥಿನಿಯರು ನಮಗೆ ನ್ಯಾಯಬೇಕು ಎಂದು ಮೆರವಣಿಗೆ ಹೊರಟರು. ರಸ್ತೆಯ ಇನ್ನೂಂದು ಕಡೆ ಕೇಸರಿ ಬಾವುಟ ಹಿಡಿದ ವಿದ್ಯಾರ್ಥಿಗಳು ಅದೇ ರಸ್ತೆಗೆ ಬಂದರು. ಈ ವೇಳೆ ಪೊಲೀಸರು ಎರಡು ಕಡೆಯವರನ್ನು ಬೇರೆ ಬೇರೆ ರಸ್ತೆಯ ಕಡೆ ತಿರುಗಿಸಿದರು.

ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿ ವಿದ್ಯಾರ್ಥಿಗಳ ಪ್ರತಿಭಟನೆ:

ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಕೇಸರಿ, ಹಿಜಾಬ್ ವಿವಾದ ತಾರಕಕ್ಕೇರಿದ ನಡುವೆಯೇ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ವೇಳೆ ಕಾಲೇಜು ಮುಂಭಾಗದ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಧ್ವಜಸ್ತಂಭ ಹಾರಿಸುತ್ತಿದ್ದಂತೆ ವಿದ್ಯಾರ್ಥಿಗಳು ಜೈ ಶ್ರೀರಾಮ್, ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ.

Last Updated : Feb 8, 2022, 5:18 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.