ETV Bharat / city

ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ...ಮುಳುಗಿದ ಸಾವಿರಾರು ಎಕರೆ ಕೃಷಿ ಭೂಮಿ - ಶಿವಮೊಗ್ಗ ನಗರ

ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿಗಳು ಹಾಗೂ ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

Heavy rains in Shimogga
author img

By

Published : Aug 9, 2019, 4:42 AM IST

ಶಿವಮೊಗ್ಗ: ನಿರಂತರ ಮತ್ತು ಭಾರೀ ಮಳೆಯಿಂದಾಗಿ ನದಿಗಳು ಹಾಗೂ ಹಳ್ಳಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.

ತುಂಗಾ ನದಿಯಲ್ಲಿ 90 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನಗರದ ಹಲವು ಬಡಾವಣೆಗಳು, ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗಿದೆ. ನೀರು ತುಂಬಿ ಮನೆಗಳಿಗ ನುಗಿದ ಕಾರಣ ಈ ಭಾಗಗಳಲ್ಲಿ ಮಹಾನಗರ ಪಾಲಿಕೆಯು ಗಂಜಿ ಕೇಂದ್ರ ತೆರೆದಿದೆ.

ಗಂಜಿ ಕೇಂದ್ರ

ನಗರದ ಇಮಾನ್ ಬಾಡಾ, ಕುಂಬಾರ ಗುಂಡಿ, ಟಿಪ್ಪು ನಗರದ ನಿವಾಸಿಗಳಿಗೆ ಶಾದಿ ಮಹಲ್​​ನಲ್ಲಿ, ಕುಂಬಾರ ಗುಂಡಿ, ಸಿಗೆಹಟ್ಟಿ ನಿವಾಸಿಗಳಿಗೆ ಗಾಂಧಿ ಬಜಾರ್​ನ ರಾಮಣ್ಣ ಪಾರ್ಕ್​ನಲ್ಲಿ ಹಾಗೂ ಬಾಪೂಜಿ ನಗರದ ಜೋಸೆಫ್ ನಗರದ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಸದ್ಯಕ್ಕೆ ಈ ಗಂಜಿ‌ ಕೇಂದ್ರಗಳಲ್ಲಿ ಯಾರೂ ತಂಗುತ್ತಿಲ್ಲ.‌ ಬದಲಾಗಿ ಊಟ ಸೇವಿಸಿ ಮರಳುತ್ತಿದ್ದಾರೆ.

ಗಂಜಿ‌ ಕೇಂದ್ರದಲ್ಲಿ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ನಿರಾಶ್ರಿತರಿಗೆ ಆಹಾರ ವಿತರಿಸುತ್ತಿದ್ದಾರೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನೀಡಲಾಗುತ್ತಿದೆ ಎನ್ನುತ್ತಾರೆ ಪಾಲಿಕೆಯ ಉಪಮೇಯರ್ ಚನ್ನಬಸಪ್ಪ.

Intro:ಶಿವಮೊಗ್ಗ ಜಿಲ್ಲೆಯಾದ್ಯಾಂತ ಮಳೆ ಅರ್ಭಟ ಮುಂದುವರೆದಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮಳೆಯು‌ ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಎಲ್ಲಾ ನದಿಗಳು ಹಾಗೂ ಹಳ್ಳಗಳು ತುಂಬಿ ಹರಿಯುತ್ತಿವೆ. ‍ಇದರಿಂದ ನದಿ ತಡದ ನಗರ ಹಾಗೂ ಗ್ರಾಮಗಳು ಸಾಕಷ್ಟು ನಷ್ಟವನ್ನುಂಟು ಮಾಡಿದೆ. ಜಿಲ್ಲೆಯ ಸಾವಿರಾರು ಎಕರೆ ಭೂಮಿ ಕೃಷಿ ಭೂಮಿ ನೀರಿನಿಂದ ಆವೃತವಾಗಿದೆ. ಶಿವಮೊಗ್ಗದ ನಗರ ಮಧ್ಯ ಭಾಗದಲ್ಲಿ ಹರಿದು ಹೋಗುವ ತುಂಗಾ ನದಿಯಲ್ಲಿ 90 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದ ನಗರದ ಹಲವು ಬಡಾವಣೆಗಳು ನೀರಿನಿಂದ ಆವೃತವಾಗಿದೆ.

Body:ಇದರಿಂದ ನಗರದ ಇಮಾನ್ ಬಾಡಾ, ಕುಂಬಾರ ಗುಂಡಿ, ಟಿಪ್ಪು ನಗರ ಹಾಗೂ ಬಾಪೊಜಿ ನಗರದಲ್ಲಿ ನೀರು ತುಂಬಿ ಮನೆಗಳಿಗ ನುಗಿದ ಕಾರಣ ಈ ಭಾಗಗಳಲ್ಲಿ ಜನರಿಗೆ ಅನುಕೂಲವಾಗಲೆಂದು ಮಹಾನಗರ ಪಾಲಿಕೆ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಇಮಾಮ್ ಬಾಡಾದ ನಿವಾಸಿಗಳಿಗೆ ಇಮಾಮ್ ಬಾಡಾದ ಶಾದಿ ಮಹಲ್ ಹಾಗೂ ಟಿಪ್ಪು ನಗರದ ನಿವಾಸಿಗಳಿಗೆ ಸ್ಥಳೀಯವಾದ ಶಾದಿ ಮಹಲ್ ನಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಕುಂಬಾರ ಗುಂಡಿ, ಸಿಗೆಹಟ್ಡಿ ನಿವಾಸಿಗಳಿಗೆ ಗಾಂಧಿ ಬಜಾರ್ ನ‌ ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಗಂಜೀ ಕೇಂದ್ರ ತೆರೆಯಲಾಗಿದೆ. ಇನ್ನೂ ಬಾಪೊಜಿ ನಗರದ ನಿವಾಸಿಗಳಿಗೆ ಜೋಸೇಫ್ ನಗರದ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಈ ನಾಲ್ಕು ಗಂಜಿ ಕೇಂದ್ರಗಳಿಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಊಟ, ತಿಂಡಿ ಸರಬರಾಜು ಮಾಡಲಾಗುತ್ತಿದೆ. ಸದ್ಯಕ್ಕೆ ಈ ಗಂಜಿ‌ ಕೇಂದ್ರಗಳಲ್ಲಿ ಯಾರು ತಂಗುತ್ತಿಲ್ಲ.‌ಬದಲಾಗಿ ತಿಂಡಿ, ಊಟಕ್ಕೆ ಬಂದು ವಾಪಸ್ ಆಗುತ್ತಿದ್ದಾರೆ.

Conclusion:ಗಂಜಿ‌ ಕೇಂದ್ರದಲ್ಲಿ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ನಿಂತು ನಿರಾಶ್ರಿತರಿಗೆ ಊಟ , ತಿಂಡಿ ಬಡಿಸುತ್ತಿದ್ದಾರೆ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ನೀಡಲಾಗುತ್ತಿದೆ ಪ್ರತಿ ದಿನ ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿಯೇ ಸುಮಾರು‌ 100 ರಿಂದ 150 ಜನರು ಬಂದು ಗಂಜಿ ಕೇಂದ್ರದ ಉಪಯೋಗವನ್ನು ಪಡೆದು ಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಪಾಲಿಕೆಯ ಉಪಮೇಯರ್ ಚನ್ನಬಸಪ್ಪ.

ಬೈಟ್: ಚನ್ನಬಸಪ್ಪ. ಉಪ ಮೇಯರ್.

ಬೈಟ್: ಸುನಾಂದಮ್ಮ.‌ ನಿರಾಶ್ರಿತರು.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.