ಶಿವಮೊಗ್ಗ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯಭಾರ ಕುಸಿತದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬಿಡದೆ ಸುರಿಯುತ್ತಿದೆ. ಬಿರು ಬೇಸಿಗೆಯಲ್ಲಿ ಚಂಡ ಮಾರುತ ಮಳೆ ಮಳೆಗಾಲದ ವಾತಾವರಣವನ್ನು ಸೃಷ್ಟಿಸಿದೆ. ಇಂದು ಜೋರಾಗಿ ಬಾರದೆ ಸಣ್ಣದಾಗಿ ಸುರಿಯುತ್ತಿದೆ. ಸಂಪೂರ್ಣ ವಾತಾವರಣ ಮೋಡ ಕವಿದಿದೆ.
ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ ಇಂತಿದೆ: ಶಿವಮೊಗ್ಗದಲ್ಲಿ 7.60ಎಂ.ಎಂ., ಭದ್ರಾವತಿಯಲ್ಲಿ 14.ಎಂ.ಎಂ., ತೀರ್ಥಹಳ್ಳಿಯಲ್ಲಿ 9.20 ಎಂ.ಎಂ., ಸಾಗರದಲ್ಲಿ 1.20 ಎಂ.ಎಂ., ಶಿಕಾರಿಪುರದಲ್ಲಿ 4.00 ಎಂ.ಎಂ., ಸೊರಬದಲ್ಲಿ 2.30 ಎಂ.ಎಂ., ಹೊಸನಗರದಲ್ಲಿ 19.80 ಎಂ.ಎಂ ಮಳೆಯಾಗಿದೆ.
ಜಿಲ್ಲೆಯ ಪ್ರಮುಖ ಜಲಾಶಯಗಳ ವಿವರ:
ಲಿಂಗನಮಕ್ಕಿ: ಎತ್ತರ 1,819 ಅಡಿ ಇದ್ದು, ಹಾಲಿ ನೀರಿನ ಪ್ರಮಾಣ 1,763.45 ಅಡಿ ಇದೆ. ಒಳ ಹರಿವು-646 ಕ್ಯೂಸೆಕ್ ಇದ್ದು, ಹೊರ ಹರಿವು-5,734 ಕ್ಯೂಸೆಕ್(ವಿದ್ಯುತ್ ಉತ್ಪಾದನೆ) ಇದೆ.
ಭದ್ರಾ ಜಲಾಶಯ: ಎತ್ತರ-186 ಅಡಿ ಇದ್ದು, ಹಾಲಿ ನೀರಿನ ಪ್ರಮಾಣ-148 ಅಡಿ ಇದೆ. ಒಳ ಹರಿವು-67 ಕ್ಯೂಸೆಕ್ ಇದ್ದು, ಹೊರ ಹರಿವು- 635 ಕ್ಯೂಸೆಕ್ ಇದೆ.
ತುಂಗಾ ಜಲಾಶಯ: ಎತ್ತರ-588.24 ಮೀಟರ್ ಇದ್ದು, ಹಾಲಿ ನೀರಿನ ಪ್ರಮಾಣ-588.24 ಇದೆ. ಒಳಹರಿವು- 475 ಕ್ಯೂಸೆಕ್ ಇದ್ದು, ಹೊರ ಹರಿವು-475 ಕ್ಯೂಸೆಕ್ ಇದೆ.
ಇದನ್ನೂ ಓದಿ: ಮೈಸೂರಿನಲ್ಲಿ ಧಾರಾಕಾರ ಮಳೆ; ಬಡಾವಣೆಗಳು ಜಲಾವೃತ, ಜನಜೀವನ ಅಸ್ತವ್ಯಸ್ತ